Advertisement

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

01:57 AM Jul 06, 2024 | Team Udayavani |

ಯುರೋಪಿನ ಫ್ರಾನ್ಸ್‌ ಸಂಸತ್ತಿನ ಕೆಳಮನೆ (ನ್ಯಾಶನಲ್‌ ಅಸೆಂಬ್ಲಿ) ಚುನಾವ ಣೆಗೆ 2ನೇ ಸುತ್ತಿನ ಮತದಾನ ಜುಲೈ 7ರಂದು ನಡೆಯಲಿದೆ. 1ನೇ ಸುತ್ತಿನ ಚುನಾವಣೆ ಅಂದಾಜಿನ ಪ್ರಕಾರ ಫ್ರಾನ್ಸ್‌ನಲ್ಲಿ ರಾಜಕೀಯ ನಾಯಕತ್ವ ಬದಲಾವಣೆ ಸ್ಪಷ್ಟವಾಗಿದೆ. ಫ್ರಾನ್ಸ್‌ ಚುನಾವಣೆಯ ಹಿನ್ನಲೆ, ಚುನಾವಣೆ ವ್ಯವಸ್ಥೆ, ಪ್ರಮುಖ ನಾಯಕರು ಇತ್ಯಾದಿ ಮಾಹಿತಿ ಇಲ್ಲಿದೆ.

Advertisement

ಬ್ರಿಟನ್‌ ಬೆನ್ನಲ್ಲೇ ಫ್ರಾನ್ಸ್‌ ನಲ್ಲೂ ರಾಜ ಕೀಯ ಬದ ಲಾ ವ ಣೆ ಗಾಳಿ ಬೀಸು ತ್ತಿ ರು ವು ದು ಸ್ಪಷ್ಟ ವಾ ಗು ತ್ತಿದೆ. ಜೂನ್‌ 30ರಂದು ನಡೆದ ಫ್ರಾನ್ಸ್‌ ನ್ಯಾಶನಲ್‌ ಅಸೆಂಬ್ಲಿ  (ಸಂಸತ್ತಿನ ಕೆಳ ಮ ನೆ) ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಲ ಪಂಥೀಯ “ನ್ಯಾಶನಲ್‌ ರ್ಯಾಲಿ’ ಹಾಗೂ ಅದರ ಮಿತ್ರ ಪಕ್ಷಗಳು ಮುನ್ನಡೆ ಕಾಯ್ದು ಕೊಂಡಿದ್ದು, ಜುಲೈ 7ರಂದು ನಡೆಯುವ ಚುನಾವಣೆಯಲ್ಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.

ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌ ನೇತೃತ್ವದ “ಸೆಂಟರಿಸ್ಟ್‌ ಟುಗೆದ ರ್‌’ ( ಆ್ಯನ್‌ ಸಾಂಬ ಲ್‌) 3ನೇ ಸ್ಥಾನಕ್ಕೆ ಕುಸಿ ಯುವ ಅಂದಾಜು ಮಾಡಲಾಗಿದೆ. ವಿದೇಶಾಂಗ ಮತ್ತು ಯುರೋಪ್‌ ಒಕ್ಕೂ ಟದ ಕುರಿತು ತಮ್ಮದೇ ಆದ ನೀತಿ ಗ ಳನ್ನು ಹೊಂದಿ ರುವ ನ್ಯಾಶನಲ್‌ ರ್ಯಾಲಿ ಪಾರ್ಟಿ ಅಧಿ ಕಾ ರಕ್ಕೆ ಬಂದರೆ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಬಹುದು.

ಅವಧಿ ಪೂರ್ವ ಚುನಾವಣೆ ಘೋಷಣೆ: ಜೂನ್‌ 6 ಮತ್ತು 9ರಂದು ಐರೋಪ್ಯ ಒಕ್ಕೂಟ ಸಂಸ ತ್ತಿಗೆ ಚುನಾವಣೆ ನಡೆಯಿತು. ಈ ಚುನಾ ವ ಣೆ ಯಲ್ಲಿ ಸೆಂಟ ರಿ ಸ್ಟ್‌ ಅಲ ಯನ್ಸ್‌ ಸೋಲು ಕಂಡ ಹಿನ್ನೆ ಲೆ ಯಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌ ಅವರು ನ್ಯಾಶನಲ್‌ ಅಸೆಂಬ್ಲಿಗೂ ಅವಧಿಪೂರ್ವ ಚುನಾವಣೆ ಯನ್ನು ಘೋಷಿಸಿದರು. ಐರೋಪ್ಯ ಒಕ್ಕೂಟ ಸಂಸ ತ್ತಿನ ಚುನಾ ವ ಣೆ ಯಲ್ಲಿ ಯುರೋ ಪಿ ಯನ್‌ ಪೀಪಲ್ಸ್‌ ಪಾರ್ಟಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡು, ಅಧಿಕಾರಕ್ಕೇರಿದೆ.

ಫ್ರಾನ್ಸ್‌ನ ಪ್ರಮುಖ ಪಕ್ಷ, ಕೂಟಗಳು: ಬಲ ಪಂಥ ಸಿದ್ಧಾಂತಗಳನ್ನು ಹೊಂದಿರುವ ಜೋರ್ಡಾನ್‌ ಬಾರ್ಡೆಲ್ಲಾ ಮತ್ತು ಮರೀನ್‌ ಲೆ ಪೆನ್‌ ನೇತೃ ತ್ವದ ದಿ ನ್ಯಾಶನಲ್‌ ರ್ಯಾಲಿ  (ಆರ್‌ ಎ ನ್‌), ಅಧ್ಯಕ್ಷ ಎಮ್ಯಾನು ಯೆಲ್‌ ಮ್ಯಾಕ್ರಾನ್‌ ಹಾಗೂ ಪ್ರಧಾ ನಿ ಗೇ ಬ್ರಿಯಲ್‌ ಅಟ್ಟಲ್‌ ನೇತೃತ್ವದ ದಿ ಸೆಂಟ ರಿಸ್ಟ್‌ ಟುಗೆದ ರ್‌ ( ಆ್ಯನ್‌ ಸಾಂಬ ಲ್‌) ಕೂಟ, ಜೀನ್‌-ಲುಕ್‌ ಮೆಲೆಂಚನ್‌ ಅವರ ಫ್ರಾನ್ಸ್‌ ಅನ್‌ ಬೋವ್‌x ಕಮ್ಯು ನಿಸ್ಟ್‌ ಪಾರ್ಟಿ ಮತ್ತು ರಾಫೆಲ್‌ ಗ್ಲಕ್ಸ್‌ ಮೆನ್‌ ಸಮಾ ಜ ವಾದಿ ಪಕ್ಷಗಳನ್ನು ಒಳಗೊಂಡ ನ್ಯೂ ಪಾಪ್ಯುಲರ್‌ ಫ್ರಂಟ್‌ ( ಎನ್‌ ಪಿ ಎ ಫ್) ಈ ಚುನಾವಣೆಯಲ್ಲಿರುವ ಪ್ರಮುಖ ಪಕ್ಷ  ಹಾಗೂ ಒಕ್ಕೂ ಟ ಗಳಾ ಗಿವೆ. ಈ ಮೂರೂ ಪೈಕಿ ಸದ್ಯ  ಬ ಲ ಪಂಥೀಯ ಆರ್‌ ಎನ್‌ ಚುನಾವಣೆ ಗೆಲ್ಲುವ ಹಾಟ್‌ ಫೇವರಿಟ್‌ ಆಗಿದೆ.

Advertisement

ಫ್ರಾನ್ಸ್‌ನಲ್ಲಿ ಅತಂತ್ರ ಸಂಸತ್ತು?
ಮೊದಲ ಸುತ್ತಿನ ಚುನಾವಣೆಯಲ್ಲಿ ಆರ್‌ ಎನ್‌ ಮುನ್ನಡೆ ಕಾಯ್ದು ಕೊಂಡಿದೆ. ಹಾಗಿದ್ದೂ ಜುಲೈ 7ರಂದು ನಡೆ ಯುವ 2ನೇ ಹಂತ ದಲ್ಲೂ ಆರ್‌ಎನ್‌ ಸರ ಳ ಬಹು ಮತ ಪಡೆ ಯು ವುದು ಕಷ್ಟ ಎನ್ನ ಲಾ ಗು ತ್ತಿದೆ. 577 ಸ್ಥಾನಗಳಿರುವ ಫ್ರಾನ್ಸ್‌ ಸಂಸ ತ್ತಿನ ಕೆಳ ಮನೆಯಲ್ಲಿ ಬಹು ಮ ತಕ್ಕೆ 289 ಸ್ಥಾನ ಗ ಳನ್ನು ಗೆಲ್ಲ ಬೇಕು. ಆಡ ಳಿ ತಾ ರೂಢ “ಆ್ಯನ್‌ ಸಾಂಬಲ್‌’ ಕೂಟ ಗೆಲ್ಲುವ ಸಾಧ್ಯತೆ ಗ ಳಿಲ್ಲ ಎಂಬುದು ಸಮೀ ಕ್ಷೆ ಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಫ್ರಾನ್ಸ್‌ ನಲ್ಲಿ ಅತಂತ್ರ ಸಂಸತ್ತು ನಿರ್ಮಾಣ ದ ಸಾಧ್ಯ ತೆಯೇ ಹೆಚ್ಚು.

ನಾಳೆ 2ನೇ ಸುತ್ತಿನ ಚುನಾವಣೆ
ಫ್ರಾನ್ಸ್‌ ನ್ಯಾಶನಲ್‌ ಅಸೆಂಬ್ಲಿಗೆ 2ನೇ ಸುತ್ತಿನ ಚುನಾವಣೆ ಜುಲೈ 7ರಂದು ನಡೆ ಯ ಲಿದೆ. ಮೊದಲ ಸುತ್ತಿ ನಲ್ಲಿ ಆರ್‌ ಎನ್‌ ಶೇ.33.14, ನ್ಯೂ ಪಾಪ್ಯುಲರ್‌ ಫ್ರಂಟ್‌ ಶೇ.27.99 ಹಾಗೂ ಮ್ಯಾಕ್ರಾನ್‌ ನೇತೃ ತ್ವದ ಆ್ಯನ್‌ ಸಾಂಬಲ್‌ ಕೇವಲ ಶೇ.20.04 ಹಾಗೂ ರಿಪ ಬ್ಲಿ ಕನ್‌ ಮತ್ತು ಉಳಿದವರು ಶೇ.10.17 ಮತಗಳನ್ನು ಪಡೆ ದಿವೆ. 1997ರ ಬಳಿಕ ಇದೇ ಮೊದಲ ಬಾರಿಗೆ ಶೇ.66.71ರಷ್ಟು ಮತ ದಾನ ನಡೆ ದಿದೆ. ಈ ಮತ ಪ್ರಮಾಣವನ್ನು ಗಮನಿಸಿ ದರೆ 306 ಕ್ಷೇತ್ರ ಗ ಳಲ್ಲಿ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ.

ಅಧ್ಯಕ್ಷ, ಪ್ರಧಾನಿ ಬೇರೆ ಬೇರೆ ಪಕ್ಷ!
ಫ್ರಾನ್ಸ್‌ನ ಯುದ್ಧೋತ್ತರ ಇತಿಹಾಸದಲ್ಲೇ 3 ಬಾರಿ ಮಾತ್ರ ಅಧ್ಯಕ್ಷ ಹಾಗೂ ಪ್ರಧಾನಿ ಬೇರೆ ಬೇರೆ ಪಕ್ಷ ದವರಾಗಿದ್ದಾರೆ. ಈಗ ಮತ್ತೆ ಅಂಥದ್ದೇ ಸ್ಥಿತಿ ನಿರ್ಮಾಣದ ಸಾಧ್ಯತೆಗಳಿವೆ. ಫ್ರಾನ್ಸ್‌ನ ಈ ರಾಜಕೀಯ ಪರಿಸ್ಥಿತಿಗೆ ಕೋಹ್ಯಾ ಬಿಟೇಶನ್‌ ಎನ್ನ ಲಾ ಗು ತ್ತದೆ. 2ನೇ ಸುತ್ತಿನ ಮತ ದಾ ನ ದಲ್ಲಿ ಮ್ಯಾಕ್ರಾನ್‌ ನೇತೃ ತ್ವದ ಕೂಟಕ್ಕೆ ಗೆಲುವು ಸಿಗ ದಿ ದ್ದರೆ, ಅತೀ ಹೆಚ್ಚು ಸ್ಥಾನ ಗ ಳನ್ನು ಗೆಲ್ಲುವ ಸಾಧ್ಯತೆ ಇರುವ ಬಲ ಪಂಥೀಯ ಜಾನ್‌ ಬಾರ್ಡೆಲ್ಲಾ ಪ್ರಧಾನಿಯಾಗುವುದು ಖಚಿತ. ಆಗ ಫ್ರಾನ್ಸ್‌ ನಲ್ಲಿ ಪ್ರಧಾನಿ ಮತ್ತು ಅಧ್ಯ ಕ್ಷರು ಬೇರೆ ಬೇರೆ ಪಕ್ಷದವರಾಗಿರುತ್ತಾರೆ. ಒಳಾಡಳಿತಕ್ಕೆ ಸಂಬಂಧಿ ಸಿ ದಂತೆ ಪ್ರಧಾನಿ ಹೆಚ್ಚು ಶಕ್ತಿ ಶಾ ಲಿ. ಅಧ್ಯ ಕ್ಷರು ಸೇನಾ ಮುಖ್ಯ ಸ್ಥ ರಾ ಗಿದ್ದು, ವಿದೇಶ ಗ ಳಲ್ಲಿ ದೇಶ ವನ್ನು ಪ್ರತಿ ನಿ ಧಿ ಸು ತ್ತಾರೆ. ಆದರೆ ವಿದೇ ಶಾಂಗ ನೀತಿ ಸಂಬಂಧ ಪ್ರಧಾನಿ ಹಾಗೂ ಅಧ್ಯಕ್ಷರ ಅಧಿಕಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲ. 2022ರಲ್ಲಿ ಅಧ್ಯ ಕ್ಷೀಯ ಚುನಾ ವಣೆ ಗೆದ್ದಿ ರುವ ಮ್ಯಾಕ್ರಾನ್‌ ಇನ್ನೂ 3 ವರ್ಷ ಗಳ ಅಧಿ ಕಾ ರಾವ ಧಿ ಯನ್ನು ಹೊಂದಿ ದ್ದಾರೆ. ಹಾಗಾಗಿ ಅವಧಿ ಪೂರ್ವ ಸರಕಾರ ವಾ ಗಲಿ ಅಥವಾ ಸಂಸ ತ್ತಾ ಗಲಿ ಅವ ರನ್ನು ಹೊರ ಹಾಕಲು ಸಾಧ್ಯವಿಲ್ಲ!

2 ಸುತ್ತುಗಳ ಚುನಾವಣೆ ಏಕೆ?
ಫ್ರಾನ್ಸ್‌ನಲ್ಲಿ 2 ಸುತ್ತಿನ ಮತದಾನ ವ್ಯವಸ್ಥೆ ಇದೆ. ಮೊದ ಲ ಸುತ್ತಿ ನಲ್ಲಿ ಅತೀ ಹೆಚ್ಚು ಮತ ಪಡೆದ ಅಗ್ರ 2 ಅಭ್ಯ ರ್ಥಿ ಗಳು 2ನೇ ಸುತ್ತಿಗೆ ಅರ್ಹತೆ  ಪಡೆಯುತ್ತಾರೆ. ಆದರೆ ಅಭ್ಯ ರ್ಥಿ ನೋಂದಾಯಿತ ಮತದಾರರ ಪೈಕಿ ಕನಿ ಷ್ಠ ಶೇ.12.5 ಮತ  ಪಡೆ ಯ ಲೇ ಬೇಕು. ಬಳಿಕ 2ನೇ ಮತದಾನಲ್ಲಿ ಯಾರು ಅತೀ ಹೆಚ್ಚು ಮತ ಗಳಿಸುತ್ತಾರೆಯೋ ಅವರು ವಿಜೇತರಾಗುತ್ತಾರೆ.

200 ವರ್ಷ ಬಳಿಕ ಇತಿಹಾಸ ಸೃಷ್ಟಿ ?
ಸಮೀಕ್ಷೆಗಳ ಪ್ರಕಾರ 2ನೇ ಸುತ್ತಿನಲ್ಲೂ ನ್ಯಾಶನಲ್‌ ರ್ಯಾಲಿ ಹೆಚ್ಚುಸ್ಥಾನ ಗೆಲ್ಲಲಿದೆ. ಫ‌ಲಿತಾಂಶ ಕೂಡ ಸಮೀ ಕ್ಷೆ ಯಂತೆ ಬಂದರೆ, ರ್ಯಾಲಿ ಪಕ್ಷ ದ ಅಧ್ಯಕ್ಷ 28 ವರ್ಷದ ಜಾನ್‌ ಬಾರ್ಡೆಲ್ಲಾ ಪ್ರಧಾನಿಯಾಗುವುದು ಖಚಿತ. ಹಾಗಾದರೆ ಫ್ರಾನ್ಸ್‌ ಮತ್ತು ಯುರೋ ಪ್‌ನಲ್ಲೇ 200 ವರ್ಷ ಗಳ ಬಳಿಕ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

– ಮಲ್ಲಿಕಾರ್ಜುನ ತಿಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next