Advertisement

ಕನ್ನಡದಲ್ಲೇ ಮತ್ತೆ ಅಂಚೆ ಪರೀಕ್ಷೆ

01:50 AM Jul 17, 2019 | mahesh |

ಹೊಸದಿಲ್ಲಿ: ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮ್ಯಾನ್‌ ಹುದ್ದೆಯ ಆಕಾಂಕ್ಷಿಗಳಾಗಿದ್ದ ಕನ್ನಡಿಗರಿಗೆ ಕೊನೆಗೂ ಜಯ ಸಿಕ್ಕಿದೆ. ಕನ್ನಡ ಭಾಷೆಯಲ್ಲಿ ಮತ್ತೂಮ್ಮೆ ಅಂಚೆ ಇಲಾಖೆಯ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ, ಈಗಾಗಲೇ ಜು.14ರಂದು ನಡೆದಿದ್ದ ಪರೀಕ್ಷೆಯನ್ನು ರದ್ದು ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು, ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ.

Advertisement

ಈ ಅವಕಾಶ ಸಿಗಲು ತಮಿಳುನಾಡಿನ ಪಕ್ಷಗಳ ನಿರಂತರ ಹೋರಾಟವೇ ಕಾರಣ. ಅಂಚೆ ಇಲಾಖೆಯ ಪೋಸ್ಟ್‌ ಮ್ಯಾನ್‌ ಹುದ್ದೆಗೆ ಕಳೆದ ರವಿವಾರ ನಡೆದ ಪರೀಕ್ಷೆಯನ್ನು ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಮಾತ್ರವೇ ಬರೆಯಲು ಅವಕಾಶವಿತ್ತು. ಇದಕ್ಕೆ ಎಐಎಡಿಎಂಕೆ, ಡಿಎಂಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಮಂಗಳವಾರ ಈ ವಿಚಾರಕ್ಕೆ ಸಂಬಂಧಿಸಿ ರಾಜ್ಯಸಭೆ ಯಲ್ಲಿ ಕೋಲಾಹಲವೇ ನಡೆಯಿತು. ತಮಿಳು ಸಹಿತ ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ತಮಿಳುನಾಡಿನ ಪಕ್ಷಗಳ ಸಂಸದರು ಪಟ್ಟುಹಿಡಿದರು. ಕೊನೆಗೆ ವಿಧಿ ಇಲ್ಲದೆ ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಕನ್ನಡ, ತಮಿಳು ಸಹಿತ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡುವುದಾಗಿ ಘೋಷಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next