Advertisement
ಸಾಮಾಜಿಕ ಭದ್ರತಾ ಪಿಂಚಣಿ ಯನ್ನು ಅಂಚೆ ಇಲಾಖೆ ಪಾವತಿಸುತ್ತಿದೆ. ಸುಮಾರು ಶೇ. 70ರಷ್ಟು ಡಿಜಿಟಲ್ ಪಾವತಿ ಮೂಲಕ ನಡೆಯುತ್ತಿದ್ದು ಉಳಿದಂತೆ ಮನಿ ಆರ್ಡರ್ ಮೂಲಕ ಪೋಸ್ಟ್‌ಮನ್ ವಿತರಿಸುತ್ತಿದ್ದಾರೆ. ಡಿಜಿಟಲ್ ಪಾವತಿಯೂ ಅಂಚೆ ಕಚೇರಿ ಪಾಸ್‌ಬುಕ್‌ನಲ್ಲಿದ್ದರೆ ಅಂಚೆ ಸಿಬಂದಿ ಗ್ರಾಹಕರಿಗೆ ಸ್ಯಾನಿಟೈಸ್ ಮುಂಜಾಗ್ರತೆ ಮೂಲಕ ನೀಡುತ್ತಿದ್ದಾರೆ. ವೈದ್ಯಕೀಯ ಅಗತ್ಯಗಳನ್ನು ಅಂಚೆ ಮೂಲಕ ಕಳುಹಿಸಿದರೆ ಅವುಗಳನ್ನು ಸಾಧ್ಯವಿರುವಲ್ಲಿ ಮನೆಗಳಿಗೆ ತಲುಪಿಸಲಾಗುತ್ತಿದೆ.ಗ್ರಾಮೀಣ ಅಂಚೆ ಕಚೇರಿಗಳೂ ಸಹಿತ ಬಹುತೇಕ ಎಲ್ಲ ಅಂಚೆ ಕಚೇರಿಗಳೂ ತೆರೆದಿದ್ದು ಠೇವಣಿ ಸ್ವೀಕಾರ ಮತ್ತು ಹಣ ಪಾವತಿಯನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಮಾಡಲಾಗುತ್ತಿದೆ. ಬ್ಯಾಂಕುಗಳ ಎಟಿಎಂ ಜತೆ ಅಂಚೆ ಇಲಾಖೆ ಎಟಿಎಂಗೆ ಸಂಪರ್ಕವಿದ್ದು ಈ ಇಂಟರ್ ಆಪರೇಬಲ್ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ.
ಮಂಗಳೂರು: ಮಾರ್ಚ್‌ನಲ್ಲಿ ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳಲ್ಲಿ 25,777 ಜನರಿಗೆ ಪಾವತಿಯಾಗಬೇಕಾಗಿರುವ 2,18,45,000 ರೂ. ಫಲಾನು ಭವಿಗಳ ಖಾತೆಗಳಿಗೆ ಜಮೆ ಯಾಗಿದ್ದು ಸಮೀಪದ ಅಂಚೆ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಬಲ್ಮಠ ವಿಭಾಗೀಯ ಕಚೇರಿಯ ವಾಟ್ಸ್ ಆ್ಯಪ್ ಸಂಖ್ಯೆ 9448291072ಕ್ಕೆ ಸಂದೇಶ ಕಳುಹಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟನೆ ತಿಳಿಸಿದೆ.