Advertisement
ಎನ್.ಎ.ಪಿ.ಇ.ಯು. ವಿಭಾಗ ಕಾರ್ಯದರ್ಶಿ ರಾಜೇಶ್ ಕುಮಾರ್ ಅವರು ಮಾತನಾಡಿ, 7ನೇ ವೇತನ ಆಯೋಗ ಸಲ್ಲಿಸಿದ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಿ ನೌಕರರ ಜಂಟಿ ಕ್ರಿಯಾ ಸಮಿತಿಯು ಕೆಲವು ತಿದ್ದುಪಡಿಗಳಿಗಾಗಿ ಮನವಿಯನ್ನು ಕ್ಯಾಬಿನೆಟ್ ಸೆಕ್ರೆಟರಿಯವರಿಗೆ 2015ರ ಡಿ. 10ರಂದು ಸಲ್ಲಿಸಿತ್ತು ಎಂದರು.
ಸಮಿತಿ ರಚನೆ ಮಾಡದೇ ಇರುವುದು ಸರಕಾರ ನಮಗೆ ಮಾಡಿದ ಮೋಸ. ಈ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಈ ಮುಷ್ಕರ ನಡೆಯುತ್ತಿದ್ದು ಪುತ್ತೂರಿ ನಲ್ಲೂ ನಾವು ನಡೆಸಿದ್ದೇವೆ. ಹೋರಾಟ ಮಾಡದೆ ವಿಧಿಯಿಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಸರಕಾರ ಇನ್ನಾದರೂ ಕಣ್ಣು ತೆರೆದು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
Related Articles
ಪ್ರಧಾನ ಅಂಚೆ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಲಾಯಿತು. ಅಂಚೆ ಕಚೇರಿಯನ್ನು ಬಂದ್ ಮಾಡಲಾಗಿತ್ತು.
Advertisement
ಸುಳ್ಯದಲ್ಲಿ ಮುಷ್ಕರಸುಳ್ಯ ನಗರದ ಅಂಚೆ ಕಚೇರಿಯ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು. ತಮ್ಮ ಬೇಡಿಕೆ ಯನ್ನು ಶೀಘ್ರವೇ ಈಡೇರಿಸುವಂತೆ ಆಗ್ರಹಿಸಿದರು. ಬೇಡಿಕೆಗಳ ಒತ್ತಾಯ
ಕ್ರಿಯಾ ಸಮಿತಿಯ ಬೇಡಿಕೆಗಳಾದ ಕನಿಷ್ಠ ವೇತನ ಮಿತಿ ಹೆಚ್ಚಿಸುವುದು, ಮನೆ ಬಾಡಿಗೆ ಭತ್ಯೆ, ಇತರ ಭತ್ಯೆಗಳನ್ನು ಮುಂದುವರಿಸುವುದು, ಜಿ.ಡಿ.ಎಸ್. ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು, ನಿವೃತ್ತಿ ವೇತನ ಮತ್ತು ಇತರ ಭತ್ಯೆಗಳನ್ನು ನೀಡಬೇಕು, ಜಿ.ಡಿ.ಎಸ್. ನೌಕರರ ವೇತನ ಆಯೋಗದ ವರದಿಯನ್ನು ತತ್‌ಕ್ಷಣ ಜಾರಿಗೊಳಿಸಬೇಕು, ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹೊಸ ಪಿಂಚಣಿ ಯೋಜನೆ ಹಿಂದೆಗೆದುಕೊಂಡು ಕಡ್ಡಾಯ ಪಿಂಚಣಿ ನೀಡಬೇಕು, ನೌಕ ರರ ಯೂನಿಯನ್‌ಗಳಲ್ಲಿ ತೊಡ ಗಿಸಿಕೊಂಡವರನ್ನು ಪೀಡಿಸುವ ಪ್ರವೃತ್ತಿ ಕೊನೆಗಾಣಿಸಬೇಕು ಮತ್ತು ಖಾಸಗೀಕರಣ, ಇಲಾಖಾ ನೌಕರರ ಸಂಖ್ಯೆಯಲ್ಲಿ ಕಡಿತ, ಹೊರಗುತ್ತಿಗೆ ಮೊದಲಾದ ಕಾರ್ಮಿಕ ವಿರೋಧಿ ನೀತಿ ಗಳನ್ನು ಕೂಡಲೇ ಕೈಬಿಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.