Advertisement

3ನೇ ದಿನಕ್ಕೆ ಅಂಚೆ ನೌಕರರ ಮುಷ್ಕರ

10:50 AM Aug 19, 2017 | |

ಜೇವರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎದುರಿಗಿರುವ ಅಂಚೆ ಕಚೇರಿ ಎದುರು ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಬೇಕು, ಗ್ರಾಮೀಣ ಅಂಚೆ ನೌಕರರ ಸೇವೆ ಕಾಯಂಗೊಳಿಸಬೇಕು, ಜಿಡಿಎಸ್‌ ನೌಕರರಿಗೆ ವೇತನ ಹೆಚ್ಚಳ ಮಾಡಬೇಕು, ಜಿಡಿಎಸ್‌ ಸಮಿತಿ ವರದಿ ಜಾರಿಗೊಳಿಸಬೇಕು, ಮಾಸಿಕ ಕನಿಷ್ಠ 18 ಸಾವಿರ ರೂ.ವೇತನದ ಜೊತೆಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಮುಷ್ಕರ
ನಡೆಸಲಾಗುತ್ತಿದೆ. ಮುಷ್ಕರದಲ್ಲಿ ಚಂದ್ರಶ್ಯಾ, ಕಲ್ಯಾಣಿ ಜೇರಟಗಿ, ಗುರುರಾಜ ನೆಲೋಗಿ, ಬಾಪುಗೌಡ ಕಟ್ಟಿಸಂಗಾವಿ, ರಾಜಣ್ಣ ಯಾಳವಾರ, ಶಿವುಗೌಡ ಕೆಲ್ಲೂರ, ದವಲಸಾಬ ನರಿಬೋಳ, ಸುಭಾಶ್ಚಂದ್ರ ಬಳ್ಳುಂಡಗಿ, ಗೋವಿಂದರಾವ್‌ ಕಲ್ಲೂರ.ಕೆ, ಚನ್ನಬಸಪ್ಪ ಪಾಟೀಲ ಜೇರಟಗಿ, ಶಿವುಕುಮಾರ ಯಾಳವಾರ, ಮುತ್ತು ಕೋಳಕೂರ, ಸಿದ್ದಣ್ಣ ರಾಸಣಗಿ, ಖಾನ್‌ ಪಟೇಲ ಕೂಡಿ, ಈರಣ್ಣ ಮುದಬಾಳ, ಶಿವಾನಂದ ಹರವಾಳ ಹಾಗೂ ಮತ್ತಿತರ ನೌಕರರು ಭಾಗವಹಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next