Advertisement

ಅಂಚೆ ಕಚೇರಿ ಠೇವಣಿ

09:34 PM Jan 12, 2020 | Sriram |

ಗ್ರಾಮಗಳ ಮೂಲಕ ಇಡೀ ದೇಶವನ್ನು ಬೆಸೆದಿರುವ ಅಂಚೆ ಇಲಾಖೆ ಇಂದು ಪತ್ರವ್ಯವಹಾರಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ಜನರ ಭವಿಷ್ಯಕ್ಕಾಗಿ ಹಲವು ಆರ್ಥಿಕ ಕ್ರಮಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಒಳ್ಳೆಯ ಸೇವೆಗಳನ್ನು ನೀಡುತ್ತಿವೆ.

Advertisement

ಬ್ಯಾಂಕ್‌ಗಳಲ್ಲಿ ದೊರೆಯುವ ಎಲ್ಲ ಉಳಿತಾಯ ಯೋಜನೆಗಳೂ ಅಂಚೆ ಕಚೇರಿಗಳಲ್ಲಿ ತುಂಬಾ ಸರಳವಾದ ರೀತಿಯಲ್ಲಿ (Simple Procedure) ಲಭ್ಯ ಇರು ವುದರಿಂದ ಜನಸಾಮಾನ್ಯರಿಗೆ ತುಂಬಾ ಅನು ಕೂಲವಾಗಿದೆ. ಇಂದು ಬ್ಯಾಂಕ್‌ಗಳು ಹಲವು ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಆ ಊರುಗಳಲ್ಲಿ ಅಂಚೆ ಕಚೇರಿಗಳು ಇರುವುದ ರಿಂದ ಈ ವ್ಯವಸ್ಥೆಯ ಸದುಪಯೋಗ ಪಡೆ ಯಬಹುದು. ಶೇ. 4 ರಿಂದ ಶೇ.8.3ರ ವರೆಗೆ ಬಡ್ಡಿ ದರ ನೀಡುವ ಯೋಜನೆಗಳು ಇವೆ. ಉಳಿತಾಯ ಖಾತೆ, ಚಾಲ್ತಿ ಖಾತೆ, ಹಿರಿಯ ನಾಗರಿಕರ ಖಾತೆ, ಪಿಪಿಎಫ್, ಕಿಸಾನ್‌ ವಿಕಾಸ್‌ ಪತ್ರ, ಸುಕನ್ಯ ಸಮೃದ್ಧಿ ಯೋಜನೆ. ಈ ರೀತಿ ಹಲವು ವಿಭಾಗಗಳಲ್ಲಿ ಯೋಜನೆ ಯನ್ನು ನೀಡಲಾಗಿದೆ.

ಅಂಚೆ ಕಚೇರಿಗಳಲ್ಲಿ ಅವಧಿ ಠೇವಣಿ (Term Deposit) ಇರುವುದು ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಮಾಸಿಕ ಆದಾಯ ಯೋಜನೆ, ಕಿಸಾನ್‌ ಪತ್ರ, ಎನ್‌.ಎಸ್‌.ಸಿ.ಇವೆಲ್ಲವೂ ಎಲ್ಲ ವರ್ಗದವರಿಗೆ ಬಹು ಉಪಕಾರಿ. ಆದಾಯ ತೆರಿಗೆ ಉಳಿಸುವ ದೃಷ್ಟಿಯಿಂದ ಪಿ.ಪಿ.ಎಫ್., ಎನ್‌.ಎಸ್‌.ಸಿ., ಹಿರಿಯ ನಾಗರಿಕರ ಠೇವಣಿ, 5 ವರ್ಷಗಳ ಅವಧಿ ಠೇವಣಿ ಹಾಗೂ ಕಿಸಾನ್‌ ವಿಕಾಸ ಪತ್ರ ಉಪಯುಕ್ತವಾಗಿದೆ. ಅಂಚೆ ಕಚೇರಿ ಠೇವಣಿಗಳನ್ನು ಸಣ್ಣ ಉಳಿತಾಯ ಏಜೆಂಟರ ಮುಖಾಂತರ ಮಾಡಬಹುದು. ಇದರಿಂದ ಏಜೆಂಟರಿಗೂ ಠೇವಣಿದಾರರಿಗೂ ಅನುಕೂಲವಾಗುತ್ತದೆ. ಇಲ್ಲಿ ತೊಡಗಿಸಿದ ಹಣಕ್ಕೆ ಭಾರತ ಸರ್ಕಾರದ ಶೇ. 100 ಭದ್ರತೆ ಇರುತ್ತದೆ. ಆ ವಿಚಾರದಲ್ಲಿ ಬೇರೊಂದು ಮಾತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next