Advertisement
ಸರಕಾರಿ ವಿ.ವಿ. ಮತ್ತು ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುದಾನಿತ ಕೋರ್ಸ್‌ಗಳಾದ ಎಂಬಿಎ, ಎಂಸಿಎ, ಎಂಇ, ಎಂ ಟೆಕ್ ಕೋರ್ಸ್‌ಗಳಿಗೆ 20 ಸಾವಿರ ರೂ. ವಾರ್ಷಿಕ ಬೋಧನ ಶುಲ್ಕವನ್ನು ರಾಜ್ಯ ಸರಕಾರ ವಿಧಿಸಿದೆ. ಅದೇ ರೀತಿ ಅನುದಾನ ರಹಿತ ಸಂಸ್ಥೆಗಳ ಅನುದಾನ ರಹಿತ ಕೋರ್ಸ್‌ಗಳಾದ ಎಂಬಿಎ, ಎಂಸಿಎಗೆ 57,750 ರೂ. ಹಾಗೂ ಎಂಇ ಮತ್ತು ಎಂ ಟೆಕ್ ಕೋರ್ಸ್‌ಗಳಿಗೆ 69,300 ರೂ. ವಾರ್ಷಿಕ ಬೋಧನ ಶುಲ್ಕ ನಿಗದಿಪಡಿಸಲಾಗಿದೆ.2023-24ರ ಸಾಲಿನಲ್ಲಿ ಈ ಸ್ನಾತಕೋತ್ತರ ಕೋರ್ಸ್‌ಗಳಿಗೆ ನಿಗದಿ ಪಡಿಸಿದ ಬೋಧನ ಶುಲ್ಕವನ್ನೇ 2024-25ನೇ ಶೈಕ್ಷಣಿಕ ಸಾಲಿಗೂ ಅನ್ವಯಿಸುವಂತೆ ಸರಕಾರ ಸೂಚನೆ ನೀಡಿದೆ.
ವಿದ್ಯಾರ್ಥಿಗಳು ಬೋಧನ ಶುಲ್ಕದೊಂದಿಗೆ ವಿಶ್ವವಿದ್ಯಾನಿಲಯ ಶುಲ್ಕವನ್ನು ಕೂಡ ಪಾವತಿಸಬೇಕು. ಭರ್ತಿಯಾಗದ ಉಳಿದ ಸೀಟುಗಳನ್ನು ಭರ್ತಿ ಮಾಡುವ ಅವಕಾಶ ಆಡಳಿತ ಮಂಡಳಿಗೆ ನೀಡಬೇಕು. ಯಾವುದೇ ಸಂಸ್ಥೆ ಹೆಚ್ಚುವರಿ ಶುಲ್ಕವನ್ನು ಕೇಳಿದರೆ ವಿದ್ಯಾರ್ಥಿ ಅಥವಾ ಪೋಷಕರು ಪ್ರವೇಶ ಮೇಲ್ವಿಚಾರಣ ಸಮಿತಿಗೆ ದೂರನ್ನು ನೀಡಬೇಕು ಎಂದು ಸರಕಾರ ತನ್ನ ಆದೇಶದಲ್ಲಿ ಹೇಳಿದೆ.