Advertisement

ಚುನಾವಣೆ ಬಳಿಕ ರೇಶನಿಂಗ್‌:  2 ದಿನಕ್ಕೊಮ್ಮೆ ನೀರು ಪೂರೈಕೆ

03:38 PM May 06, 2023 | Team Udayavani |

ಉಡುಪಿ: ನಗರಕ್ಕೆ ನೀರು ಪೂರೈಸುವ ಹಿರಿಯಡಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರು ಬರಿದಾಗುತ್ತಿದೆ. ಇನ್ನೂ
10 ದಿನಕ್ಕೆ ಪಂಪ್‌ ಮಾಡುವಷ್ಟು ನೀರಿನ ಪ್ರಮಾಣ ಲಭ್ಯವಿದೆ. ದಿನೇದಿನೇ ಬಿಸಿಲ ಪ್ರಮಾಣಕ್ಕೆ ನೀರಿನ ಮೂಲಗಳು ಬತ್ತುತ್ತಿವೆ.

Advertisement

ಮಳೆ ಬಾರದಿದ್ದಲ್ಲಿ ನಗರದಲ್ಲಿಯೂ ನೀರಿಗೆ ಆಹಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ. ಚುನಾವಣೆ ಮುಗಿದ ಕೂಡಲೆ ಮೇ 10ರ ಅನಂತರ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬಹುದು ಎಂದು ನಗರಸಭೆ ಮೂಲಗಳು ತಿಳಿಸಿದೆ. ಪ್ರಸ್ತುತ ಬಜೆ ಡ್ಯಾಂನಲ್ಲಿ 3 ಮೀ. ನಷ್ಟು ನೀರಿದೆ. ಅದರಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನೀರು ಲಭ್ಯವಾಗುವುದಿಲ್ಲ. ಒಂದಷ್ಟು ಪ್ರಮಾಣ ಡೆಡ್‌ ಸ್ಟೋರೇಜ್‌ ಇರಲಿದೆ. ಸದ್ಯಕ್ಕೆ ಪುತ್ತಿಗೆ ಮೇಲಾºಗದ ಗುಂಡಿಗಳಲ್ಲಿ ನೀರನ್ನು ಪಂಪ್‌ ಮಾಡಲಾಗುತ್ತಿದೆ.

ಈ ನೀರನ್ನು ಬಜೆ ಡ್ಯಾಂಅ ಕಡೆಗೆ ಹಾಯಿಸ‌ಲಾಗುತ್ತಿದೆ. ಎಲ್ಲ 35 ವಾರ್ಡ್‌ಗಳಿಗೂ ಸಮಾನ ಒತ್ತಡದಲ್ಲಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಎತ್ತರದ ಪ್ರದೇಶಗಳಲ್ಲಿ ಬಹುತೇಕ ಮನೆ, ಅಪಾರ್ಟ್‌ಮೆಂಟ್‌ಗಳಿಗೆ ನೀರು ಲಭ್ಯವಾಗುತ್ತಿಲ್ಲ. ನಗರದಲ್ಲಿ ಹೊಟೇಲ್‌ ಉದ್ಯಮ ನೀರಿನ ಸಮಸ್ಯೆ ಯಿಂದ ನಲುಗಿ ಹೋಗಿದೆ ಎಂದು ಹೊಟೇಲ್‌ ಮಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರಸಭೆ 35 ವಾರ್ಡ್‌ಗಳಿಗೆ ಸಮಾನ ಒತ್ತಡದಲ್ಲಿ ನೀರು ಪೂರೈಕೆ ಅಸಾಧ್ಯವಾಗಿದೆ. ಇದರಿಂದ ಮೇಲ್ಮಟ್ಟದ ಜಲ ಸಂಗ್ರಹಣಾಗಾರ ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗದೆ ಇರುವುದರಿಂದ. ಅಂತಹ ಮಹಡಿಗಳಲ್ಲಿ ವಾಸಿಸುವ ನಾಗರಿಕರು ನೀರನ್ನು ಶೇಖರಿಸಿಟ್ಟುಕೊಳ್ಳಲು ಸಂಪ್‌ ಟ್ಯಾಂಕ್‌ ಅಥವಾ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಸಹಕರಿಸಬೇಕು.
– ಆರ್‌. ಪಿ. ನಾಯ್ಕ, ಪೌರಾಯುಕ್ತರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next