Advertisement

ತಮಿಳು ಸಿನಿಮಾದಲ್ಲಿ ಶಿವಣ್ಣ ನಟನೆ ಸಾಧ್ಯತೆ

12:19 PM Jan 04, 2021 | Team Udayavani |

ತಮಿಳು ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರಾ?  -ಹೀಗೊಂದು ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಎದ್ದಿದೆ. ಅದಕ್ಕೆ ಕಾರಣ ಕಾರ್ತಿಕ್‌ ಸುಬ್ಬರಾಜು.

Advertisement

ತಮಿಳು ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ನಟ ವಿಕ್ರಂ ಅವರಿಗೆ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಪ್ರಮುಖ ಪಾತ್ರ ಮಾಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು, ಶಿವರಾಜ್‌ಕುಮಾರ್‌ ಅವರನ್ನು ಭೇಟಿಯಾಗಿ ಸಿನಿಮಾದ ಕಥೆ ನಿರೂಪಿಸಿದ್ದಾರೆ. ಕಥೆ ಹಾಗೂ ತಮ್ಮ ಪಾತ್ರದ ಬಗ್ಗೆ ಕೇಳಿದ ಶಿವರಾಜ್ ‌ಕುಮಾರ್‌ ಕೂಡಾ ಖುಷಿಯಾಗಿದ್ದಾರೆನ್ನ ಲಾಗಿದೆ.  ಆದರೆ, ಅಧಿಕೃತ ವಾಗಿ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಇನ್ನಷ್ಟೇ ಅಂತಿಮವಾಗಬೇಕಿದೆ.

ಅಂದಹಾಗೆ, ಕಾರ್ತಿಕ್‌ ಸುಬ್ಬರಾಜು, “ಪಿಜ್ಜಾ’, “ಜಿಗರ್‌ಥಂಡಾ’, “ಪೆಟ್ಟಾ’ ಸೇರಿದಂತೆ ಕೆಲವು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಈಗ ವಿಕ್ರಮ್‌ ಅವರಿಗೆ ಸಿನಿಮಾ ಮಾಡಲು ಹೊರಟಿದ್ದು, ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಕೂಡಾ ನಟಿಸಲಿದ್ದಾರೆಂಬ ಸುದ್ದಿಯಂತೂ ಜೋರಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ :ಹುಟ್ಟೂರಿನಲ್ಲಿ ಸಂಗೀತ ಲೋಕ ಸೃಷ್ಟಿಸಿದ ರವಿ ಬಸ್ರೂರ್

Advertisement

Udayavani is now on Telegram. Click here to join our channel and stay updated with the latest news.

Next