ದಿಲ್ಲಿ: ಕಾರ್ಮಿಕ ಸಚಿವಾಲಯವು
ಇಪಿಎಫ್ಒನ 6 ಕೋಟಿಗೂ ಹೆಚ್ಚು ಸದಸ್ಯರ ಕನಿಷ್ಠ ಪಿಂಚಣಿಯನ್ನು ಪರಿಷ್ಕರಿಸುವ ಸಾಧ್ಯತೆ ದಟ್ಟವಾಗಿದೆ.
ಕನಿಷ್ಠ ಪಿಂಚಣಿ ಹೆಚ್ಚಿಸುವುದರ ಜತೆಗೆ ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಇದೀಗ ಕನಿಷ್ಠ ಪಿಂಚಣಿ 1,000 ರೂಪಾಯಿಗಳಾಗಿದ್ದು, ಇಪಿಎಫ್ಒ ಸದಸ್ಯರು 2,000 ರೂಪಾಯಿಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆ ಹೊಂದಿದ್ದಾರೆ.
ಬುಧವಾರ, ಇಪಿಎಫ್ಒನ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಪಿಂಚಣಿದಾರರು ಮಾಸಿಕ ಪಿಂಚಣಿಯನ್ನು ಕನಿಷ್ಠ 7,500 ರೂ.ಗೆ ಏರಿಸಬೇಕೆಂಬ ಬೇಡಿಕೆಯೊಂದಿಗೆ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು.
ನೌಕರರ ಇಪಿಎಸ್‌ಗಾಗಿ 30 ವರ್ಷಗಳ ಉದ್ಯೋಗದಲ್ಲಿ 20 ಲಕ್ಷ ರೂ. ಗಳನ್ನು ಸಂಗ್ರಹಿಸಿದರೂ, ಗರಿಷ್ಠ ಮಾಸಿಕ ಪಿಂಚಣಿ ಕೇವಲ 2,500 ರೂ. ಇದರಿಂದ ನೌಕರರು ಮತ್ತು ಅವರ ಕುಟುಂಬಗಳು ಜೀವನ ಸಾಗಿಸುವುದೂ ಕೂಡ ಕಷ್ಟವಾಗುತ್ತದೆ.
ಇಪಿಎಸ್ 95 ರ ಅಡಿಯಲ್ಲಿ ಬರುವ ನೌಕರರ ಮೂಲ ವೇತನದ ರೂ. 15,000 ರೂ. ಭವಿಷ್ಯ ನಿಧಿಗೆ ಹೋಗುತ್ತದೆ. ಅದೇ ಸಮಯದಲ್ಲಿ, ಉದ್ಯೋಗದಾತರ ಶೇ. 12ರಷ್ಟು ಪಾಲು ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹೋಗುತ್ತದೆ. ಇದಕ್ಕೆ ಸರಕಾರವೂ ಶೇ 1.16ರಷ್ಟು ಕೊಡುಗೆ ನೀಡುತ್ತದೆ.