Advertisement
ದೇಶದ ಇತರ ಮಹಾನಗರಗಳಲ್ಲಿ ಈಗಾಗಲೇ ಇರುವ ಬಹು ಅಂತಸ್ತು ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೇ ಇಲ್ಲಿಯೂ ಅಳವಡಿಸಿಕೊಳ್ಳಬಹುದು. ಕೆಲವು ಕಡೆ ಖಾಲಿ ಬಿದ್ದಿರುವ ಸರಕಾರಿ ಜಾಗವನ್ನು ಸದ್ಬಳಕೆ ಮಾಡಿಕೊಂಡು ಅಥವಾ ಖಾಸಗಿ ಜಾಗವನ್ನು ಪಡೆದುಕೊಂಡು ಸರಕಾರಿ-ಖಾಸಗಿ ಸಹಭಾಗಿತ್ವದೊಂದಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದು.
Related Articles
Advertisement
ಸಾಧ್ಯತೆಯ ಪ್ರದೇಶಗಳು :
ನಗರದಲ್ಲಿ ಕೆಲವು ವಾಣಿಜ್ಯ, ಜನದಟ್ಟ ನೆಯ ಪ್ರದೇಶಗಳನ್ನು ಪರಿಗಣಿಸಿ ಅಲ್ಲಿಗೆ ಹೊಂದಿಕೊಂಡಂತೆ ಲಭ್ಯ ಸರಕಾರಿ ಜಾಗಗಳನ್ನು ಗುರುತಿಸಿ ಬಹುಅಂತಸ್ತು, ವಾವತಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಬಹುದಾಗಿದೆ.
- ಮಂಗಳೂರು ಹಂಪನಕಟ್ಟೆ ಪ್ರದೇಶಕ್ಕೆ ಸಂಬಂಧಪಟ್ಟು ಹಳೆ ಬಸ್ ನಿಲ್ದಾಣದಲ್ಲಿ ಬಹು ಅಂತಸ್ತು ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಯೋಜನೆಗೆ ಚಾಲನೆ.
- ಸ್ಟೇಟ್‌ಬ್ಯಾಂಕ್, ಕೇಂದ್ರ ಮಾರುಕಟ್ಟೆ ಪ್ರದೇಶಕ್ಕೆ ಸಂಬಂಧಪಟ್ಟಂತೆ ನೆಹರೂ ಮೈದಾನ ಬಳಿಯ ಉದ್ಯಾನದ ಪಕ್ಕದಲ್ಲಿರುವ, ಪ್ರಸ್ತುತ ಬೀದಿಬದಿ ವ್ಯಾಪಾರಕ್ಕೆಂದು ಮೀಸಲು ಇಟ್ಟಿರುವ ಜಾಗ.
- ಲಾಲ್‌ಬಾಗ್, ಕೆಎಸ್‌ಆರ್‌ಟಿಸಿ ಪ್ರದೇಶಕ್ಕೆ ಸಂಬಂಧಟ್ಟಂತೆ ಕೆಎಸ್‌ಆರ್‌ಟಿಸಿ ಬಳಿ ಖಾಲಿಯಿರುವ ಸರಕಾರಿ ಜಾಗ ಇದೆ.
- ನಗರದ ಪಿವಿಎಸ್, ಕರಂಗಲ್ಪಾಡಿ, ಕೊಡಿಯಾಲಬೈಲ್ ಪ್ರದೇಶಕ್ಕೆ ಸಂಬಂಧಪಟ್ಟ ಜೈಲ್ ರೋಡ್‌ನಲ್ಲಿರುವ ಸರಕಾರಿ ಜಾಗದ ಪೈಕಿ ಒಂದಷ್ಟು ಜಾಗ ಪಾರ್ಕಿಂಗ್‌ಗೆ ಬಳಸಬಹುದು (ಕೇಂದ್ರ ಕಾರಾಗೃಹ ಮುಡಿಪು ಪ್ರದೇಶಕ್ಕೆ ಸ್ಥಳಾಂತರಿಸುವ ಯೋಜನೆಯಿದೆ).
- ಕದ್ರಿ ಪಾರ್ಕ್, ಕೆಪಿಟಿ, ಪಾದುವಾ ಪ್ರದೇಶಗಳಿಗೆ ಸಂಬಂಧಪಟ್ಟು ಕದ್ರಿ ಪಾರ್ಕ್ ಬಳಿ ಸ್ಕೇಟಿಂಗ್ ಜಾಗದ ಬಳಿಯ ಪ್ರದೇಶ.
- ಬಂಗ್ರ ಕೂಳೂರು, ಕೊಟ್ಟಾರ ಚೌಕಿ ಪ್ರದೇಶಕ್ಕೆ ಸಂಬಂಧಪಟ್ಟು ಬಂಗ್ರ ಕುಳೂರು ಬಳಿ ಅರಣ್ಯ ನಿಗಮಕ್ಕೆ ನೀಡಲು ಉದ್ದೇಶಿಸಿರುವ ಜಾಗ.
- ಮಲ್ಲಿಕಟ್ಟೆ , ಕದ್ರಿ, ಸಿಟಿ ಆಸ್ಪತ್ರೆ ಪ್ರದೇಶಕ್ಕೆ ಸಂಬಂಧಪಟ್ಟು ಆ ಪ್ರದೇಶದಲ್ಲಿರುವ ಇರುವ ಸರಕಾರಿ ಜಾಗದ ಪ್ರದೇಶಗಳನ್ನು ಪರಿಶೀಲಿಸಿ ಹೊಂದಿಸಿಕೊಳ್ಳುವುದು.
- ಕಂಕನಾಡಿ, ಬೆಂದೂರುವೆಲ್ ಪ್ರದೇಶಕ್ಕೆ ಸಂಬಂಧಪಟ್ಟು ಪ್ರಸ್ತುತ ನಿರ್ಮಾಣವಾಗುತ್ತಿರುವ ಕಂಕನಾಡಿ ಮಾರುಕಟ್ಟೆ ಬಳಿ ಜಾಗ ಹೊಂದಿಸಿಕೊಳ್ಳುವುದು.
- ವೆಲೆನ್ಸಿಯಾ ಪ್ರದೇಶಗಳಿಗೆ ಹೊಂದಿಕೊಂಡು, ವೆಲೆನ್ಸಿಯಾ, ನಂದಿಗುಡ್ಡೆ ಪ್ರದೇಶದಲ್ಲಿರುವ ಜಾಗವನ್ನು ಹೊಂದಿಸಿಕೊಳ್ಳುವುದು.
- ಬಿಕರ್ನಕಟ್ಟೆ-ಕೈಕಂಬ ಪ್ರದೇಶದಲ್ಲಿ ಪ್ರಸ್ತುತ ಶನಿವಾರ ಸಂತೆ ನಡೆಯವ ಜಾಗದಲ್ಲಿ ಕೆಳಗಿನ ಪ್ರದೇಶವನ್ನು ಈಗಿನಂತೆ ಸಂತೆಗೆ ಮೀಸಲಿಟ್ಟು ಬಹುಅಂತಸ್ತು ಪಾರ್ಕಿಂಗ್ ವ್ಯವಸ್ಥೆಗೆ ಹೊಂದಿಸಿಕೊಳ್ಳುವುದು.
- ಮಂಗಳಾದೇವಿ ಪ್ರದೇಶಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ಮಹಾನಗರಪಾಲಿಕೆ ನಿರ್ಮಿಸಲು ಉದ್ದೇಶಿಸಿರುವ ನೂತನ ಸಂಕೀಣದಲ್ಲಿ ಬಹು ಅಂತಸ್ತು ಪಾರ್ಕಿಂಗ್ ಜೋಡಿಸಿಕೊಳ್ಳುವುದು
- ಕಾರ್‌ಸ್ಟ್ರೀಟ್ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಸೆಂಟ್ರಲ್ ಮಾರುಕಟ್ಟೆ ಸಂಕೀìಣದಲ್ಲಿ ಬಹು ಅಂತಸ್ತು ಪಾರ್ಕಿಂಗ್ ವ್ಯವಸ್ಥೆ ಜೋಡಿಸಿಕೊಳ್ಳುವುದು
- ಜ್ಯೋತಿ, ಬಂಟ್ಸ್ ಹಾಸ್ಟೆಲ್ ಪ್ರದೇಶಗಳಿಗೆ ಸಂಬಂಧಪಟ್ಟು ಪಿಪಿಪಿ ಮಾದರಿಯಲ್ಲಿ ಜಾಗ ಹೊಂದಿಸಿಕೊಳ್ಳುವುದು
- ಫಳ್ನೀರು ಪ್ರದೇಶಕ್ಕೆ ಸಂಬಂಧಪಟ್ಟು ಪಿಪಿಪಿ ಮಾದರಿಯಲ್ಲಿ ಜಾಗ ಹೊಂದಿಸಿಕೊಳ್ಳುವುದು
- ಬಂದರು ಪ್ರದೇಶದಲ್ಲಿ ಇರುವ ಸರಕಾರಿ ಜಾಗಗಳಲ್ಲಿ ಯಾವುದಾದರೂ ಒಂದು ಜಾಗವನ್ನು ಬಹುಅಂತಸ್ತು ಪಾರ್ಕಿಂಗ್ ನಿರ್ಮಾಣಕ್ಕೆ ಹೊಂದಿಸಿಕೊಳ್ಳುವುದು.