Advertisement

ಸಾಮಾನ್ಯ ಔಷಧಕ್ಕೆ ಹಾಹಾಕಾರ ಸಾಧ್ಯತೆ!

05:44 PM Apr 04, 2020 | Suhan S |

ವಿಜಯಪುರ: ಕೋವಿಡ್ 19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾರತವೇ ಸಂಪೂರ್ಣ ಸ್ಥಗಿತಗೊಂಡಿದೆ. ಅಗತ್ಯ ವಸ್ತುಗಳು ಹಾಗೂ ಔಷ ಧಧ ಸರಕು ಸಾಗಾಣಿಕೆಗೆ ನಿರ್ಬಂಧ ತೆರವುಗೊಂಡಿದ್ದರೂ ವಾಸ್ತವದಲ್ಲಿ ಔಷಧಧ ಸರಕು ಸಾಗಿಸಲು ವಾಹನಗಳ ಮಾಲಿಕರು ಬುಕಿಂಗ್‌ ಮಾಡಿಕೊಳ್ಳುತ್ತಿಲ್ಲ. ಪರಿಣಾಮ ಜಿಲ್ಲೆಯಲ್ಲಿ ಔಷಧಧ ಒಂದು ವಾರಕ್ಕೆ ಸಾಕಾಗುವಷ್ಟು ಮಾತ್ರ ಸಂಗ್ರಹವಿದೆ.  ಹೀಗಾಗಿ, ಕೋವಿಡ್ 19  ಹೊರತಾದ ಇತರೆ ರೋಗಗಳ ಔಷಧಕ್ಕೆ ಹಾಹಾಕಾರ ಸೃಷ್ಟಿಯಾಗುವ ಭೀತಿ ಎದುರಾಗಿದೆ.

Advertisement

ಜಿಲ್ಲೆಯಲ್ಲಿ 300 ಸಗಟು ಔಷಧಧ ಸರಬರಾಜು ಮಾಡುವ ಲೈಸೆನ್ಸ್‌ದಾರರಿದ್ದು, ಸುಮಾರು 1500 ಔಷಧಧ ಅಂಗಡಿಗಳಿವೆ. ವಿಜಯಪುರ ಜಿಲ್ಲೆಗೆ ಔಷಧ ಸರಬರಾಜು ಪ್ರಮಾಣದಲ್ಲಿ ಶೇ.70ರಷ್ಟು ಬೆಂಗಳೂರಿನಿಂದ ಆಗುತ್ತಿದ್ದರೆ, ಶೇ.5 ರಷ್ಟು ಹುಬ್ಬಳ್ಳಿಯಿಂದ ಸರಬರಾಜು ಆಗುತ್ತದೆ. ಉಳಿದಂತೆ ಶೇ.15 ರಷ್ಟು ಮುಂಬೈ, ಹೈದ್ರಾಬಾದ್‌ನಿಂದ ಬರುತ್ತದೆ. ಶೇ.10 ರಷ್ಟು ಔಷಧ ವಸ್ತುಗಳು ಗುಜರಾತ್‌ನ ಅಹ್ಮದಾಬಾದ್‌, ಇಂದೋರ್‌ ಸೇರಿದಂತೆ ಮಧ್ಯಪ್ರದೇಶದ ವಿವಿಧ ಪ್ರದೇಶಗಳಿಂದ ಪೂರೈಕೆ ಅಗುತ್ತಿದೆ. ಹುಬ್ಬಳ್ಳಿ ಹೊರತಾದ ಇತರೆ ಪ್ರದೇಶಗಳಿಂದ ಒಂದೇ ಒಂದು ಔಷಧ ಸರಕು ಕಳೆದ 12 ದಿನಗಳಿಂದ ವಿಜಯಪುರಕ್ಕೆ ಬಂದಿಲ್ಲ.

ಉತ್ತರ ಭಾರತದ ವಿವಿಧ ರಾಜ್ಯಗಳಲ್ಲೇ ವೈದ್ಯಕೀಯ ವ್ಯವಸ್ಥೆಯ ಕಚ್ಚಾ ಸಾಮಗ್ರಿಗಳು ಹಾಗೂ ಸಿದ್ಧ ವಸ್ತುಗಳು ಉತ್ಪಾದನೆ ಆಗುತ್ತವೆ. ಲಾಕ್‌ ಡೌನ್‌ ಬಳಿಕ ವಿಜಯಪುರ ಜಿಲ್ಲೆಗೆ ಬಹುತೇಕ ಔಷ ಧ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಸರ್ಕಾರ, ಜಿಲ್ಲಾಡಳಿತ ಕೊರೊನಾ ನಿಗ್ರಹಕ್ಕೆ ಪೂರ್ಣ ಆದ್ಯತೆ ನೀಡಿದ್ದು, ಸರ್ಕಾರಿ ಸೇವೆಗೆ ಮೀಸಲಿರಿಸಿದೆ. ಆದರೆ ಖಾಸಗಿ ಜನರಿಗೆ ಕೊರೊನಾ ಸಂಬಂಧಿತ  ಹಾಗೂ ಈ ರೋಗದ ಹೊರತಾದ ರೋಗಗಳ ಔಷಧ ಮುಕ್ತ ಮಾರುಕಟ್ಟೆಯಲ್ಲಿ ಸಿಗದಂತಾಗಿದೆ.

ಲಾಕ್‌ಡೌನ್‌ ಬಳಿಕ ಏಕಾಏಕಿ ಎಲ್ಲ ಸಾರಿಗೆ ಸಂಪೂರ್ಣ ನಿರ್ಬಂಧಿಸಿದ ಕಾರಣ ಔಷಧ ಪೂರೈಕೆ ಮೇಲೂ ಗಂಭೀರ ಪರಿಣಾಮ ಬೀರಿದೆ. ನಂತರ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ವಸ್ತು ಹಾಗೂ ಔಷಧ ಸರಕು ಸಾಗಾಣಿಕೆಗೆ ನಿರ್ಬಂಧ ಇಲ್ಲ ಎಂದು ಹೇಳಿದ್ದರೂ, ವಾಸ್ತವವಾಗಿ ಔಷ ಧ ಸಾರಿಗೆಗೂ ಕಂಟಕ ತಪ್ಪಿಲ್ಲ. ವಿಜಯಪುರ ಜಿಲ್ಲೆಯ ಬಹುತೇಕ ಸಗಟು ವ್ಯಾಪಾರಿಗಳು ಆನ್‌ಲೆ„ನ್‌ ಮೂಲಕ ಲಕ್ಷಾಂತರ ಹಣ ಜಮೆ ಮಾಡಿ, ತಮಗೆ ಬೇಡಿಕೆ ಇರುವ ಔಷಧ ಬುಕಿಂಗ್‌ ಮಾಡಿ 10-12 ದಿನಗಳೇ ಕಳೆದರೂ ಜಿಲ್ಲೆಗೆ ಔಷಧ ಸರಕು ಬರುತ್ತಿಲ್ಲ. ಅದರಲ್ಲೂ ಗರಿಷ್ಠ ಪ್ರಮಾಣದಲ್ಲಿ ಜಿಲ್ಲೆಗೆ ಬರುವ ಬೆಂಗಳೂರಿನ ಔಷಧ ಸರಕು ಸಂಪೂರ್ಣ ಸ್ಥಗಿತಗೊಂಡಿವೆ. ಔಷಧ ಉತ್ಪಾದಕರು, ದಾಸ್ತಾನುದಾರರು ಸರಬರಾಜು ಮಾಡಲು ಮುಂದಾದರೂ ವಾಹನಗಳ ಮಾಲೀಕರು ಬುಕಿಂಗ್‌ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಆತಂಕ ತೋಡಿಕೊಂಡಿದ್ದಾರೆ.

ಸರ್ಕಾರ ಔಷಧ ಸಾಗಾಣಿಕೆಗೆ ನಿರ್ಬಂಧ ಇಲ್ಲ ಎಂದಿದ್ದರೂ ವಾಹನಗಳ ಮಾಲೀಕರು ತಮ್ಮ ವಾಹನಗಳ ಚಾಲಕರು ಹಾಗೂ ಸಿಬ್ಬಂದಿ ಮೇಲೆ ಪೊಲೀಸರು ಹಲ್ಲೆ ನಡೆಸುವ ಭೀತಿಯಿಂದ ಬುಕಿಂಗ್‌ ಮಾಡಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಹಾಗಾಗಿ, ಜಿಲ್ಲೆಯಲ್ಲಿ ಔಷಧ ಹಾಹಾಕಾರ ಸೃಷ್ಟಿಸುವ ಭೀತಿ ತಂದೊಡ್ಡಿದೆ. ಪ್ರಮುಖವಾಗಿ ರಕ್ತದ ಒತ್ತಡ, ಹೃದಯ ರೋಗ, ಅಲರ್ಜಿ, ಕೆಮ್ಮು-ದಮ್ಮು, ಸಾಮಾನ್ಯ ಜ್ವರ, ಮಕ್ಕಳ ಕಾಯಿಲೆಗಳು, ವೃದ್ಧರ ವಯೋಸಹಜ ಕಾಯಿಲೆಗಳಿಗೆ ಬೇಕಾದ ಅಗತ್ಯ ಔಷ ಧಗಳು ಒಂದೆರಡು ವಾರಗಳಲ್ಲಿ ಮುಗಿದು ಹೋಗುವ ಆಪಾಯವಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಕೋವಿಡ್ 19 ರೋಗದ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗೆ ಹೆಚ್ಚಿನ ಬೇಡಿಕೆ ಇದ್ದರೂ ಔಷಧ ಅಂಗಡಿಗಳಲ್ಲಿ ಮಾರಾಟವೇ ಇಲ್ಲವಾಗಿದೆ.

Advertisement

ಔಷಧ ಸಾಗಾಣಿಕೆಗೆ ನಿರ್ಬಂಧ ಇಲ್ಲದಿದ್ದರೂ ವಾಸ್ತವಿಕವಾಗಿ ಔಷ ಧ ಸರಕು ವಾಹನಗಳು ಬುಕಿಂಗ್‌ ಮಾಡಿಕೊಳ್ಳುತ್ತಿಲ್ಲ. ಬುಕಿಂಗ್‌ ಮಾಡಿಕೊಂಡಿರುವ ಸರಕು ಕಳೆದ 10 ದಿನಗಳಿಂದ ಹೆದ್ದಾರಿ ನಿರ್ಬಂಧದಲ್ಲಿ ಎಲ್ಲೆಂದರಲ್ಲಿ ಸಿಕ್ಕಿಕೊಂಡಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕೋವಿಡ್ 19  ಪೂರಕ ಹಾಗೂ ಅದಕ್ಕೆ ಹೊರತಾದ ಔಷ ಧ ಶೀಘ್ರ ಮುಗಿದುಹೋಗುವ ಸಾಧ್ಯತೆ ಇದೆ.-ಕೃಷ್ಣಾ ಗುನಾಳಕರ, ಶ್ರೀ ರಾಘವೇಂದ್ರ ಸರ್ಜಿ ಫಾರ್ಮಾ

ಜಿಲ್ಲಾಡಳಿತ ಸರ್ಕಾರಿ ವ್ಯವಸ್ಥೆಗೆ ಬೇಕಾದ ಕೋವಿಡ್ 19 ಸಂಬಂಧ  ಔಷಧ ಹಾಗೂ ಇತರೆ ಪರಿಕರಗಳನ್ನು ಸಾಮಾನ್ಯ ಅಗತ್ಯಕ್ಕಿಂತ ಹೆಚ್ಚಿಗೆ ದಾಸ್ತಾನು ಮಾಡಿಕೊಂಡಿದೆ. ಜಿಲ್ಲೆಯ ಔಷ ಧ ಸಗಟು ವ್ಯಾಪಾರಿಗಳಿಗೆ ಸಾರಿಗೆ ಸಮಸ್ಯೆ ಎದುರಾಗಿದ್ದರೆ ತಕ್ಷಣವೇ ಪರಿಹಾರಕ್ಕೆ ಸಿದ್ಧರಿದ್ದೇವೆ. ಈ ಕುರಿತು ನನ್ನ ಮೊ.ಸಂ. 9449535101ಕ್ಕೆ ಕರೆ ಮಾಡಲಿ, ಇಲ್ಲವೇ ಎಸ್‌ಎಂಎಸ್‌ ಸಂದೇಶ ಕಳಿಸಿದರೂ ತಕ್ಷಣ ಸ್ಪಂದಿಸುವೆ. -ಡಾ| ಔದ್ರಾಮ್‌, ಅಪರ ಜಿಲ್ಲಾಧಿಕಾರಿ

 

-ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next