Advertisement

ಸೋಲೆಂಬುದು ಹಾದಿಯಲ್ಲಿ ಸಿಗುವ ಒಂದು ಸಣ್ಣ ಕಲ್ಲು!

07:14 PM Feb 16, 2021 | Team Udayavani |

ನೀವು ಒಬ್ಬರ ಸಾಧನೆಯ ಮಾತುಗಳನ್ನುಕೇಳುತ್ತೀರಿ. ಆಗ, ನಾನೂ ಇವರಂತೆಯೇ ಸಾಧನೆ ಮಾಡಬೇಕು. ಜೀವನದಲ್ಲಿ ಗೆಲ್ಲಬೇಕು, ನನ್ನನ್ನು ಎಲ್ಲರೂ ಗುರುತಿಸುವಂತಾಗಬೇಕು ಎಂದೆಲ್ಲಾ ಅನಿಸುತ್ತದೆ. ಆದರೆ ಈ ಮನಸ್ಥಿತಿನಿಮ್ಮೊಂದಿಗೆ ಸ್ವಲ್ಪ ಹೊತ್ತಷ್ಟೇ ಇರುತ್ತದೆ. ಮರುದಿನ ಬೆಳಿಗ್ಗೆ ಎಂದಿನಂತೆ ದಿನಚರಿ ಮುಗಿಯುತ್ತದೆ ಅಲ್ವಾ? ನಮಗೆಲ್ಲಾ ಯಾಕೆಹೀಗಾಗುತ್ತದೆ ಅಂದರೆ, ಒಂದು ಗೆಲುವಿನಯಾತ್ರೆಯಲ್ಲಿ ಹೆಜ್ಜೆಯಿಡಲು ನಮ್ಮ ಮನಸ್ಸು ಸಿದ್ಧವಾಗಿರುವುದೇ ಇಲ್ಲ. ನನ್ನಿಂದ ಇದು ಸಾಧ್ಯವಾ? ನಾನು ಈ ಪ್ರಯತ್ನದಲ್ಲಿ ಗೆಲ್ತಿàನಾ? ಎಂಬ ಅನುಮಾನ ಜೊತೆಗೇ ಉಳಿದುಬಿಟ್ಟಿರುತ್ತದೆ. ಅದೇ ಕಾರಣಕ್ಕೆ, ಗೆಲ್ಲಬೇಕೆಂಬ ಹುಮ್ಮಸ್ಸು, ಬಂದಷ್ಟೇ ಬೇಗ ವಾಪಸ್‌ ಹೋಗಿಬಿಡುತ್ತದೆ.

Advertisement

ಇಂಥ ಸಂದರ್ಭದಲ್ಲಿ ಗೆಲುವಿನ ಕುದುರೆ ಹತ್ತಲು ನಿರ್ಧರಿಸಿದವರು ಮಾಡಬೇಕಿರುವುದಿಷ್ಟೇ: ನೀವು ಏನುಸಾಧನೆ ಮಾಡಬೇಕು ಮೊದಲು ನಿರ್ಧರಿಸಿಕೊಳ್ಳಿ. ಪ್ರಯತ್ನ ನಿರಂತರವಾಗಿರಲಿ, ಸೋಲು ಜೊತೆಯಾದಾಗ ಕುಗ್ಗಬೇಡಿ. ಸೋಲೆಂಬುದು ಗೆಲುವಿನ ಹಾದಿಯಲ್ಲಿ ಸಿಗುವ ಪುಟ್ಟ ಕಲ್ಲು. ಅದನ್ನು ಪಕ್ಕಕ್ಕೆ ಸರಿಸಿ ಮುನ್ನಡೆಯಿರಿ. ಸದಾ ಯಾವುದಾದರೂ ಒಂದು ವಿಷಯದ ಬಗ್ಗೆ ಓದಿ, ನೋಡಿ ಅಥವಾ ಕೇಳಿಕಲಿಯಿರಿ. ನನಗೆ ಯಾರೂಸಪೋರ್ಟ್‌ ಮಾಡುವುದಿಲ್ಲ ಎಂದು ಕೊರಗಬೇಡಿ. ಕೆಲವೊಮ್ಮೆ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ಸಾಧ್ಯವಾದರೆ ದಿನವೂ ರಾತ್ರಿ ಮಲಗುವ ಮುನ್ನ ಸಾಧಕರ ಕಥೆಗಳನ್ನು ಓದಿ ಅಥವಾ ಅವರ ಸ್ಫೂರ್ತಿದಾಯಕ ಮಾತುಗಳನ್ನು ಕೇಳಿ. ಸಾಧಿಸಲು ಹೊರಟವರಿಗೆ ನೂರೆಂಟು ವಿಘ್ನಗಳು ಜೊತೆಯಾಗುವುದು ಸಹಜ. ಅವನ್ನು ಎದುರಿಸಿ ನಿಂತಾಗ ಗೆಲುವು ನಮ್ಮದೇ.

 

-ರಕ್ಷಿತ ಪ್ರಭು ಪಾಂಬೂರು

Advertisement

Udayavani is now on Telegram. Click here to join our channel and stay updated with the latest news.

Next