Advertisement

ಧನಾತ್ಮಕ ಚಿಂತನೆ ಅಗತ್ಯ : ಮಾಣಿಲ ಶ್ರೀ

06:25 AM Jul 31, 2017 | Team Udayavani |

ವಿಟ್ಲ : ಮತ್ಸರ ನಮ್ಮನ್ನು ಕೊಲ್ಲುತ್ತದೆ. ಇತರರನ್ನು ನಿಂದಿಸುವುದಕ್ಕಿಂತ, ಇತರರ ತಪ್ಪುಗಳನ್ನೇ ತೋರಿಸುವುದಕ್ಕಿಂತ ಮೊದಲು ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕು. ಧನಾತ್ಮಕ ಚಿಂತನೆ ಬೇಕು,  ಋಣಾತ್ಮಕವಲ್ಲ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. 

Advertisement

ಅವರು ರವಿವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ 48 ದಿನಗಳ ಸಾಮೂಹಿಕ ಲಕ್ಷ್ಮೀ ಪೂಜೆಯ ಅಂಗವಾಗಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಹಾಲಕ್ಷ್ಮೀ ತ್ಯಾಗ ಮತ್ತು ಸೇವೆಗೆ ಇನ್ನೊಂದು ಹೆಸರು. ಸದ್ಭಾವನೆಯೊಂದಿಗೆ ದೇಶದ ಸಾರ್ವಭೌಮತ್ವವನ್ನು ಉಳಿಸುವ ಕೈಂಕರ್ಯ ನಮ್ಮದಾಗಬೇಕು ಎಂದರು.

ಬೆಂಗಳೂರು ಶ್ರೀಧಾಮ ಸೇವಾ ಸಮಿತಿಯ ಪದಾಧಿಕಾರಿ, ಉದ್ಯಮಿ ಪುರುಷೋತ್ತಮ ಚೇಂಡ್ಲ   ಮಾತನಾಡಿ ಬೆಂಗಳೂರಿಗೆ ಸ್ವಾಮೀಜಿ ಆಗಮಿಸಿ, ಮನೆ ಮನೆ ಸಂಸ್ಕಾರ ನೀಡುವ ಸಲುವಾಗಿ ಆರಂಭಿಸಿದ ಲಕ್ಷ್ಮೀ ಪೂಜೆಯು ಅತ್ಯಂತ ಪರಿಣಾಮಕಾರಿಯಾಗಿ ಮುಂದುವರಿಯುತ್ತಿದೆ. ಮನೆ ಮನೆಗಳಲ್ಲಿ ಪರಿವರ್ತನೆ ಕಂಡುಬರುತ್ತಿದೆ. ಮಹಿಳೆ
ಯರು ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದಾರೆ. ಪುರುಷರು ಕೂಡ  ಜತೆಗೂಡಿ, ತುಂಬು ಸಂಸಾರ ತುಂಬು ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ದ.ಕ. ಜಿಲ್ಲೆ ಕುಲಾಲ ಸಂಘದ ಬೆಂಗಳೂರಿನ ಮಾಜಿ ಅಧ್ಯಕ್ಷ ಕೃಷ್ಣಪ್ಪ ಕಣ್ವತೀರ್ಥ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಕುಲಾಲ್‌, ಬೆಂಗಳೂರಿನ ಅಮೂಲ್ಯ ರಬ್ಬರ್‌ ಸಂಸ್ಥೆಯ ದಿವಾಕರ ಮೂಲ್ಯ, ದ.ಕ. ಜಿಲ್ಲೆ ಕುಲಾಲ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಅನಸೂಯಾ ಕೃಷ್ಣಪ್ಪ, ಮಹಿಳಾ ಘಟಕದ ಪದಾಧಿಕಾರಿ ಅನಿತಾ, ವ್ಯವಸ್ಥಾಪಕ ವಿಟuಲ ಶೆಟ್ಟಿ ಸುಣ್ಣಂಬಳ  ಮೊದಲಾದವರು ಉಪಸ್ಥಿತರಿದ್ದರು.

ಶ್ರೀಧಾಮ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ  ಸ್ವಾಗತಿಸಿದರು. ಶ್ರೀಧಾಮ ಮಹಿಳಾ ಸೇವಾ ಸಮಿತಿಯ ಕಾರ್ಯದರ್ಶಿ ಗೀತಾ ಪುರುಷೋತ್ತಮ್‌  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Advertisement

ಶ್ರೀ ಕ್ಷೇತ್ರದಲ್ಲಿ ವೇ| ಮೂ| ನಯನಕೃಷ್ಣ ಜಾಲೂÕರು ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಪಂಚಾಮƒತ ಅಭಿಷೇಕ, ಕಲೊ³àಕ್ತ ಲಕ್ಷ್ಮೀ ಪೂಜೆ,  ಶ್ರೀಗುರುಪೂಜೆ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ಸಾಮೂಹಿಕ ಕುಂಕುಮಾರ್ಚನೆ,  ಕನಕಧಾರ ಯಾಗ, ಶ್ರೀ ವಿಠೊಭ ರುಕಾ¾ಯಿ ಧ್ಯಾನ ಮಂದಿರದಲ್ಲಿ ಭಜನ ಸಂಕೀರ್ತನೆ, ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ, ಶ್ರೀ ಲಕ್ಷ್ಮೀ ಪೂಜೆ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next