Advertisement
ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 70ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ‘ತುಟಿ ತೆರೆದು ನಗುವುದು ಹೇಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಅಧ್ಯಾತ್ಮದ ಒಲವು ಬೆಳೆಸಿಕೊಂಡರೆ ವ್ಯಕ್ತಿ ಮಾನಸಿಕ ಸ್ಥಿಮಿತ ಸಾಧಿಸುತ್ತಾನೆ. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಕಷ್ಟಗಳನ್ನು ದೊಡ್ಡದಾಗಿ ಪರಿಗಣಿಸದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಅಧಿಕ ಹೊತ್ತು ಬಾಧಿಸದೇ ದೂರವಾಗಬೇಕೆಂದರೆ ನಗುವ ವ್ಯವಧಾನ ರೂಢಿಸಿಕೊಳ್ಳಬೇಕು ಎಂದರು.
Related Articles
Advertisement
ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿದ್ದು, ಈ ಬಗೆಗೆ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಮನಷ್ಯನ ಸ್ವಾರ್ಥ,ಲಾಲಸೆಗಳು ಆತನನ್ನು ಕೌಟುಂಬಿಕ ಸಂಕೋಲೆಯಿಂದ ಹೊರತಂದು ಮಾನ ವೀಯ ಮೌಲ್ಯಗಳು ಮರೆ ಯಾಗುವಂತೆ ಮಾಡಿವೆ.
ದ್ವೇಷ, ಅಸೂಯೆ, ಮತ್ಸರ ಮನುಕುಲವನ್ನು ವಿನಾಶದಂಚಿಗೆ ಕರೆದೊಯ್ಯುತ್ತಿದ್ದು, ಇದೆಲ್ಲದರಿಂದ ಮನುಷ್ಯ ದೂರ ಉಳಿದು ಉತ್ತಮ ಬದುಕು ನಡೆಸಬೇಕಿದೆ ಎಂದರು.
ಕಬ್ಬಳಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ವಿಶ್ವದ್ಯಾನಿಲಯದ ರಿಜಿಸ್ಟಾರ್ ಸುಬ್ಬರಾಯ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್ ಮುದ್ದೇಗೌಡ, ಅರಸೀಕೆರೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತಕುಮಾರ್, ಶ್ರೀ ಮಠದ ವ್ಯವಸ್ಥಾಪಕ ಎಚ್.ಕೆ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕಾಲಭೈರವೇಶ್ವರ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಿಕೊಟ್ಟರು. ಆದಿಚುಂಚನಗಿರಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರಾರ್ಥನೆ ಮಾಡಿದರು. ಅರಕಲಗೂಡಿನ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ಸ್ವಾಗತಿಸಿದರು. ಹಾಸನ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ವಂದಿಸಿದರು. ಸಂಸ್ಕೃತ ಉಪನ್ಯಾಸಕ ಎಚ್.ಕೆ ಲಕ್ಷ್ಮೀ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.