ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖನಾಗಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ.ಆಸ್ಪತ್ರೆಯಿಂದ ಡಿಸಾcರ್ಜ್ ಆಗಿ 20 ದಿನ ಕಳೆದಿದೆ.ಉತ್ತಮ ಚಿಕಿತ್ಸೆ ನೀಡಿ ಪುನರ್ಜನ್ಮ ನೀಡಿದ ವೈದ್ಯರಬಗ್ಗೆ ನಾನು ಎಷ್ಟು ಹೇಳಿದರೂ ಸಾಲದು.
ಧೈರ್ಯವಿದ್ದರೆಕೊರೊನಾ ನಮಗೇ ಹೆದರುತ್ತೆ’.ಒಂದು ದಿನ ಇದ್ದಕ್ಕಿದ್ದಂತೆ ಜ್ವರ ಆವರಿಸಿತು, ತಂದೆಜತೆ ಕ್ಲಿನಿಕ್‌ನಲ್ಲಿ ತೋರಿಸಿಕೊಂಡೆ. ವಾರವಾದರೂಕೊಂಚವು ಜ್ವರ ಕಡಿಮೆಯಾಗಲಿಲ್ಲ. ನಂತರ ಕೆಮ್ಮುಪ್ರಾರಂಭವಾಯಿತು. ಮತ್ತೆ ಬೇರೊಂದು ಕ್ಲಿನಿಕ್‌ನವೈದ್ಯರ ಬಳಿ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದಾಗ,ಕೊರೊನಾ ದೃಢಪಟ್ಟಿತ್ತು.
ಬಳಿಕ, ದೊಡ್ಡಬಳ್ಳಾಪುರಸರ್ಕಾರಿ ಆಸ್ಪತ್ರೆಯ ವಾರ್ಡ್‌ಗೆದಾಖಲಾಗಿದೆ. ಎರಡು ದಿನಗಳಬಳಿಕ ಅಲ್ಪ ಪ್ರಮಾಣದಲ್ಲಿಉಸಿರಾಟದ ಸಮಸ್ಯೆ ಕಾಡಿತ್ತು.ಸ್ಯಾಚುರೇಷನ್ 35-40ಕ್ಕೆ ಇಳಿಯಿತು, ಆಕ್ಸಿಜನ್ ಪಡೆಯಬೇಕಾಯಿತು. ಪರಿಸ್ಥಿತಿಯಗಂಭೀರತೆ ಅರಿತ ವೈದ್ಯರು ಐಸಿಯು ವಾರ್ಡ್‌ಗೆ ಶಿಫ್ಟ್ಮಾಡಿದರು. ಸರಿಯಾಗಿ ಊಟ ಮಾಡಲು ಸಹ ಆಗುತ್ತಿರಲಿಲ್ಲ. ಮನೆಯಿಂದಲೇ ಊಟ ರವಾನೆಆಗುತ್ತಿತ್ತು. ವಾಂತಿಗೆ ಬಂದರೂ ಅಲ್ಪ ಪ್ರಮಾಣದಲ್ಲೇ ಊಟ ಸೇವನೆ ಮಾಡಿ ಧೈರ್ಯದಿಂದಲೇ ಇದ್ದೆ.
ದಿನಕಳೆದಂತೆ ರಕ್ತದಲ್ಲಿ ಆಕ್ಸಿಜನ್ ಹೆಚ್ಚಾಯಿತು, ಪಲ್ಸ್‌ಸಹಜ ಸ್ಥಿತಿಗೆ ಬಂದಿತು. ಬಳಿಕ, ವೈದ್ಯರು ಮಾತ್ರೆಗಳನ್ನುಬರೆದುಕೊಟ್ಟು ಮನೆಗೆ ಕಳುಹಿಸಿದರು.ಸೋಂಕಿನ ವಿರುದ್ಧ 15 ದಿನ ಹೋರಾಟ ನಡೆಸಿಗೆದ್ದು ಬಂದಿದ್ದೇನೆ. ಆ ಸಂದರ್ಭದಲ್ಲಿ ವೈದ್ಯರಾದಡಾ.ಅರುಣ್, ಚನ್ನಕೇಶವ ಅವರು ನೀಡಿದ ಚಿಕಿತ್ಸೆಧೈರ್ಯದಮಾತುಗಳೇ ನನ ° ಪ್ರಾಣವನ್ನುಉಳಿಸಿದವು.ಆ ವೈದ್ಯರಿಗೆ ನನ್ನದೊಂದು ಸಲಾಂ.ಈಗ, ಆರಾಮಾಗಿದ್ದೇನೆ. ಚೆನ್ನಾಗಿ ಊಟ ಮಾಡುತ್ತಿದ್ದೇನೆ.
ವೈದ್ಯರು ಕೊಟ್ಟ ಮಾತ್ರೆಗಳೆಲ್ಲವೂ ಮುಗಿದುಹೋಗಿವೆ. ನಾನು ಸ್ಪÐವಾಗಿ r ಹೇಳಬೇಕೆಂದರೆಸೋಂಕು ಆವರಿಸಿದಾಗ ಯಾರೂ ಭಯಪಡದೇ,ಧೈರ್ಯದಿಂದ ಎದುರಿಸಬೇಕು. ನಾವು ಭಯಪಟ್ಟರೇಸೋಂಕು ನಮ್ಮನ್ನೇ ಆವರಿಸುತ್ತೆ.
ಮನೋಜ್ ಕುಮಾರ್
ದ್ವಿತೀಯ ಪಿಯುಸಿ,
ದೊಡ್ಡಬಳ್ಳಾಪುರ