Advertisement

ಧನಾತ್ಮಕವಾಗಿರುವುದೇ ನಮ್ಮ ಮೂಲಗುಣ, ಅದನ್ನೇ ಉಳಿಸಿಕೊಳ್ಳೋಣ

12:39 AM Oct 16, 2020 | mahesh |

ನಾವು ಹಲವು ಬಾರಿ ಸೋಲುವುದು ಯಾವುದಕ್ಕೆ? ಅಹಂಕಾರ, ಋಣಾತ್ಮಕ ಅಥವಾ ನೇತ್ಯಾತ್ಮಕ ಮನೋಭಾವ, ಮತ್ತು ಕೋಪಕ್ಕೆ. ಈ ಮೂರನ್ನು ಹೊರತುಪಡಿಸಿ ದರೆ ಬೇರೆ ಎಲ್ಲವನ್ನೂ ನಾವು ಗೆಲ್ಲಬಹುದು. ಈ ಮೂರನ್ನು ಗೆಲ್ಲಬೇಕೆಂದೇ ಹೊರಡು ತ್ತೇವೆ. ಆದರೆ ಯಾವುದೋ ಒಂದು ಅಂಕದಲ್ಲಿ ಸೋತು ಬಿಡುತ್ತೇವೆ. ಹಾಗಾದರೆ ಇದನ್ನು ಗೆಲ್ಲುವುದು ಹೇಗೆ? ಅಥವಾ ಸಾಧ್ಯವೇ ಇಲ್ಲವೇ?

Advertisement

ಇಂಥದೊಂದು ಪ್ರಶ್ನೆ ವ್ಯಕ್ತಿಯೋರ್ವನಿಗೆ ಹುಟ್ಟಿತು. ಅದರಲ್ಲೂ ಬಹಳ ಮುಖ್ಯವಾಗಿ ಕೋಪ. ಯಾವುದೇ ಕ್ಷಣದಲ್ಲಿ ಕೆಂಡದಂಥ ಕೋಪ ಬಂದುಬಿಡುತ್ತಿತ್ತು. ಅನಂತರದ ಘಟನೆಗಳನ್ನು ವಿವರಿಸಬೇಕಿಲ್ಲ. ಹಲವು ಬಾರಿ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿದನಾದರೂ ಪ್ರಯೋಜನವಾಗ ಲಿಲ್ಲ. ಪ್ರತೀ ಬಾರಿಯೂ ಅದೇ ಮೆರೆಯುತ್ತಿತ್ತು.

ಇದನ್ನು ಕಂಡ ಒಬ್ಬ ಅಜ್ಜ, “ನಿನಗೆ ಕೋಪ ಎಂಬುದು ಸಿಕ್ಕಾಪಟ್ಟೆ ಇದೆ. ಯಾವಾಗ ಎಂದರೆ ಆಗ ಬರುತ್ತದೆ. ಇದರಿಂದ ನಿನಗೆ ಭವಿಷ್ಯ ದಲ್ಲಿ ಒಳ್ಳೆಯದಾಗದು. ಇಂಥ ಸಿಟ್ಟನ್ನು ಇಟ್ಟು ಕೊಂಡು ಒಳ್ಳೆಯವನಾಗುವುದಾದರೂ ಹೇಗೆ? ಸಾಧ್ಯವಿಲ್ಲ. ಈ ಊರಿನಲ್ಲಿ ಒಬ್ಬ ಗುರು ಇದ್ದಾನೆ. ಅವನನ್ನು ಕಾಣು’ ಎಂದರು.

ಆಯಿತು ಎಂದು ಅಜ್ಜನಿಗೆ ನಮಸ್ಕರಿಸಿ ಈತ ಗುರುವನ್ನು ಹುಡುಕಿಕೊಂಡು ಹೊರಟ. ಸಾಕಷ್ಟು ಸುತ್ತಿದ ಮೇಲೆ ಆ ಊರಿನ ಮತ್ತೂಂದು ಬದಿಯಲ್ಲಿದ್ದ ಗುರು ಸಿಕ್ಕರು. ಈತ ಗುರುವಿಗೆ ಎಲ್ಲವನ್ನೂ ವಿವರಿಸಿದ. ಹೇಗಾದರೂ ಮಾಡಿ ನನ್ನ ಕೋಪವನ್ನು ನಾನು ಕಡಿಮೆ ಮಾಡಿಕೊಳ್ಳು ವುದು ಹೇಗೆ ಎಂಬುದನ್ನು ಕಲಿಸಿ ಎಂದು ಮನವಿ ಮಾಡಿದ.

ಝೆನ್‌ ಗುರು ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡರು. ಆ ಬಳಿಕ ಕುಡಿಯಲು ಚಹಾ ನೀಡಿ, ನಿನಗೆ ಸಿಟ್ಟು ಎಂದರೆ ಎಷ್ಟಿರ ಬಹುದು? ಎಂದು ಕೇಳಿದರು. ಅದಕ್ಕೆ ಆತ, ಬಹಳಷ್ಟು, ಇಷ್ಟೆಂದು ಹೇಳಲಾಗದು ಎಂದ. ಹಾಗಾದರೆ ಒಂದು ಕೆಲಸ ಮಾಡು. ನನಗೆ ತೋರಿಸು ಎಂದರು ಗುರುಗಳು.

Advertisement

ಆಗ ಆತ, “ಈಗ ಸಾಧ್ಯವಿಲ್ಲ. ಅದು ಹೇಳಿ ಕೇಳಿ ಬರುವುದಿಲ್ಲ. ಇದ್ದಕ್ಕಿದ್ದಂತೆ ಬರುತ್ತದೆ. ಆಗ ನಿಯಂತ್ರಣ ಮಾಡುವುದ ಕ್ಕಾಗುವುದಿಲ್ಲ’ ಎಂದು ವಿವರಿಸಿದ. ಮನಸ್ಸಿನಲ್ಲೇ ಏನೋ ಲೆಕ್ಕ ಹಾಕಿಕೊಂಡು ಗುರುಗಳು, ಹಾಗಾದರೆ ಅದು ನಿನ್ನ ಮೂಲ ಸ್ವಭಾವವಲ್ಲ ಎಂದರು. ಆಗಲೂ ಆತ, “ಅದು ನನಗೆ ಗೊತ್ತಿಲ್ಲ. ಆದರೆ ಸಿಟ್ಟು ಬಹಳ ಬರುತ್ತದೆ’ ಎಂದು ಹೇಳಿದ. ಅದರರ್ಥವೇ ಕೋಪ ನಿನ್ನ ಮೂಲ ಸ್ವಭಾವದ್ದಲ್ಲ; ಹೊರಗಿನದ್ದು ಮತ್ತು ನಿನ್ನದಲ್ಲದ್ದು. ಯಾಕೆಂದರೆ, ಯಾವುದು ನಮ್ಮದೋ ಅದು ನಾವು ಎಣಿಸಿಕೊಳ್ಳ ದಿದ್ದರೂ ಪ್ರಕಟವಾಗುವಂತಿರಬೇಕು. ಯಾವಾಗ ಬೇಕೆಂದರೆ ಆಗ ಅದನ್ನು ತೋರಿಸಬಹುದು. ಕೋಪ ನಿನ್ನದಲ್ಲ. ನಿನ್ನ ದಲ್ಲದ್ದನ್ನು ಯಾಕೆ ಅಷ್ಟೊಂದು ಯೋಚಿ ಸುತ್ತೀ? ಎಂದು ಪ್ರಶ್ನಿಸಿದರು.

ಹೌದೆನ್ನಿಸಿತು ಆತನಿಗೆ. ಅಂದಿನಿಂದ ಆತ ಕೋಪ ಬಂದಾಗಲೆಲ್ಲ ಗುರುಗಳ ಮಾತನ್ನು ನೆನಪಿಸಿಕೊಳ್ಳುತ್ತಿದ್ದ, ಶಾಂತವಾಗಿ ಬಿಡುತ್ತಿದ್ದ. ಅಹಂಕಾರ, ಋಣಾತ್ಮಕ ಮನೋಭಾವವೂ ನಮ್ಮ ಮೂಲ ಗುಣಗಳಲ್ಲ. ನಮ್ಮ ಮೂಲ ಗುಣಗಳೆಂದರೆ, ಎಲ್ಲರನ್ನೂ ಗೌರವದಿಂದ ಕಾಣುವುದು, ಎಲ್ಲವನ್ನೂ ಧನಾತ್ಮಕ ದೃಷ್ಟಿ ಯಲ್ಲಿ ನೋಡುವುದು. ಬದುಕಿನ ಸೌಂದ ರ್ಯವನ್ನು ಅನುಭವಿಸುವುದು. ನಾವು ನಮ್ಮದಲ್ಲದ್ದರ ಬಗ್ಗೆ ಏಕೆ ಯೋಚಿಸ ಬೇಕಲ್ಲವೇ?

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next