Advertisement

ಯೋಜನೆ ಲಾಭ ತಲುಪಿಸಿ

05:23 PM Sep 23, 2020 | Suhan S |

ಶಹಾಬಾದ: ಯೋಜನೆಗಳು ಇರುವುದೇ ಜನರಿಗೋಸ್ಕರ. ಆ ಯೋಜನೆಗಳು ಜನರಿಗೆ ಮುಟ್ಟಬೇಕಾದರೆ ಅಧಿಕಾರಿ ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ ಹೇಳಿದರು.

Advertisement

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾದ ಪೋಷಣ್‌ ಅಭಿಯಾನ ಯೋಜನೆಯಡಿ ಪೋಷಣ್‌ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನವಜಾತಶಿಶುಗಳ ಮರಣ ಹಾಗೂ ಹುಟ್ಟು ಮಗುವಿನ ಅಪೌಷ್ಟಿಕತೆ ಪ್ರಮಾಣ ತಗ್ಗಿಸಲು ಸರ್ಕಾರಜಾರಿಗೆ ತಂದ ಯೋಜನೆಯೇ ಪೋಷಣ್‌ಅಭಿಯಾನ. ಸರ್ಕಾರವು ಯೋಜನೆಜಾರಿಗೊಳಿಸಿದ್ದು, ಗರ್ಭಿಣಿಯರುಅಂಗನವಾಡಿ ಕೇಂದ್ರಗಳ ಮುಖಾಂತರ ಇದರ ಸದುಪಯೋಗಪಡಿಸಿಕೊಳ್ಳಿ ಮತ್ತು ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದ್ದು, ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದೆ. ಉತ್ತಮ ಆರೋಗ್ಯ ಪಡೆಯಬೇಕಾದರೆ ಪೌಷ್ಟಿಕ ಅಂಶ ಹೊಂದಿರುವ ಆಹಾರವನ್ನು ಬಾಣಂತಿಯರು ಮತ್ತು ಗರ್ಭಿಣಿಯರು ಸೇವಿಸಬೇಕು ಎಂದರು.

ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಮಾತನಾಡಿ, ತಾಲೂಕಿನಿಂದ ರಾವೂರ, ವಾಡಿ, ನಾಲವಾರ, ಕೊಲ್ಲೂರ, ಪೇಠಸಿರೂರ, ಭಂಕೂರ, ಇಂಗಗಿ, ಹೊನಗುಂಟಾ ಮುಖಾಂತರ ಶಹಾಬಾದ ನಗರದಲ್ಲಿ ರಥ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸಲಿದೆ ಎಂದರು. ಅಂಗನವಾಡಿ ಮೇಲ್ವಿಚಾರಕಿನೇತ್ರಾವತಿ, ಶಕುಂತಲಾ ಸಾಕ್ರೆ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಜಗನ್ನಾಥ,ಸಾಬಣ್ಣ ಸುಂಗಲರ್‌, ಅಶೋಕ ತುಂಗಳ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ರೈತರು ಸಂಘಟಿತರಾಗಲು ಸಲಹೆ : ಅಫಜಲಪುರ: ರೈತರು ಸಂಘಟಿತರಾಗಿ ಇರದೇ ಇರುವುದಕ್ಕಾಗಿ ಅನೇಕರು ರೈತರೊಂದಿಗೆ ಚೆಲ್ಲಾಟವಾಡುತ್ತಾರೆ. ಆದರೆಇನ್ನು ಮುಂದೆ ಹಾಗಾಗುವುದಿಲ್ಲ. ರೈತ ಸಂಘಗಳ ರಚನೆಯಿಂದ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಐಎಸ್‌ಎಪಿ ಪ್ರತಿನಿಧಿ  ಮಹಮ್ಮದ್‌ಇಸ್ಮಾಯಿಲ್‌ ಹೇಳಿದರು.

ತಾಲೂಕಿನ ಬಡದಾಳದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿ, ರಚಿತ ರೈತ ಉತ್ಪಾದಕರ ಸಂಸ್ಥೆಗಳ ಮೂಲ ಮಾಹಿತಿ ಸಮೀಕ್ಷೆ, ಜಲಾನಯಾನಅಭಿವೃದ್ಧಿ ಇಲಾಖೆ ಬೆಂಗಳೂರುಹಾಗೂ ಐಎಸ್‌ಎಪಿ ನವದೆಹಲಿ ಇದರ ಸಹಯೋಗದೊಂದಿಗೆ ರೈತರಿಗೆ ವಿಶೇಷ

Advertisement

ತರಬೇತಿ ಶಿಬಿರ ಮತ್ತು ಸಂಘ ಸ್ಥಾಪನೆಗಾಗಿ ಸಭೆ ನಡೆಸಲಾಗುತ್ತಿದೆ. ಅಫಜಲಪುರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ 1 ಸಾವಿರ ರೈತರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಈ ಸಂಘದಲ್ಲಿ 10 ನಿರ್ದೇಶಕರು ಇರಲಿದ್ದಾರೆ. ಉಳಿದವರೆಲ್ಲ ಸದಸ್ಯರಾಗಿರುತ್ತಾರೆ. ಈ ಸಂಘ

ಸ್ಥಾಪನೆಯಾದ ಬಳಿಕ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸಂಘದ ವತಿಯಿಂದ ರೈತರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆಯಾಗಲಿದೆ. ಯಾವುದೇ ಸೌಲಭ್ಯಗಳು ರೈತರಿಗಾಗಿ ಬಂದಾಗ ಇಂತಹ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ರೈತರಏಳಿಗೆಗೆ ಸಂಘ ಸಹಾಯಕವಾಗಿರಲಿದೆ ಹೀಗಾಗಿ ರೈತರು ಆಸಕ್ತಿ ವಹಿಸಿ ಸಂಘದ ಸದಸ್ಯರಾಗಬೇಕು ಎಂದು ಮನವಿ ಮಾಡಿಕೊಂಡರು.

ಎಲ್‌ಆರ್‌ಪಿ ಮಡಿವಾಳಪ್ಪ ಹೊಳ್ಕರ್‌ ಮಾತನಾಡಿದರು. ರೈತರಾದ ಶ್ರೀಕಾಂತ ನಿಂಬಾಳ, ರಾಜು ಜಮಾಣೆ, ಭೋಜರಾಜ ಅತನೂರೆ, ಚಂದ್ರಕಾಂತ ಕಲ್ಲೂರ, ಈರಣ್ಣ ಸಾಲೇಗಾಂವ, ಪರಮೇಶ್ವರ ಶಿರೂರ,ವಿಜಯ ಭತ್ತಾ, ಮರೆಪ್ಪ ಸಿಂಗೆ, ಬಸು ಹಡಪದ, ಮಂಜು ಶಿರೂರ, ಪುತ್ರಪ್ಪ  ಸಿಂಗಡಗಾಂವ, ಶಾಮರಾವ ಡಬ್ಬಿ, ಅಮೃತ ಮಾತಾರಿ, ಶಂಭು ಮಾತಾರಿ, ಸುಭಾಷ ಪೂಜಾರಿ, ಶಿವಲಿಂಗ ಮೇತ್ರಿ, ದುಂಡಪ್ಪ ಮೇತ್ರಿ, ಶರಣು ಹಡಪದ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next