Advertisement

ಪೋಷಣ್‌ ಅಭಿಯಾನ ಸೀರೆ ಗೋದಾಮಿನಲ್ಲೇ

02:13 AM Feb 24, 2022 | Team Udayavani |

ಕುಂದಾಪುರ: ಕೇಂದ್ರ ಸರಕಾರದ ಸಹಯೋಗದಲ್ಲಿ ನಡೆಸಲ್ಪಡುತ್ತಿರುವ ಪೋಷಣ್‌ ಅಭಿಯಾನದಲ್ಲಿ ವಿತರಿಸಲೆಂದು ರಾಜ್ಯ ಸರಕಾರ ಖರೀದಿಸಿರುವ ಸೀರೆಗಳನ್ನು ಸ್ವೀಕರಿಸಲು ಅಂಗನ ವಾಡಿ ಕಾರ್ಯಕರ್ತೆಯರು ನಿರಾಕರಿಸಿದ್ದು, ಸುಮಾರು 9.4 ಕೋ.ರೂ. ಮೌಲ್ಯದ 2.5 ಲಕ್ಷ ಸೀರೆಗಳು ಐದು ತಿಂಗಳು ಗಳಿಂದ ಸಿಡಿ ಪಿಒ ಕಚೇರಿ ಗಳಲ್ಲಿ ರಾಶಿ ಬಿದ್ದಿವೆ.

Advertisement

ಗರ್ಭಧಾರಣೆಯಿಂದ ಆರಂಭಿಸಿ ಶಿಶು ಮತ್ತು ತಾಯಿ 1,000 ದಿನ ಪೌಷ್ಟಿಕಾಹಾರ ಪಡೆದು, ಆರೋಗ್ಯವಂತ ರಾಗಿರುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದ ಪೋಷಣ್‌ ಅಭಿಯಾನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅನುಷ್ಠಾನವಾಗುತ್ತಿದೆ. ಅಂಗನವಾಡಿ ಸಿಬಂದಿ ಇದರ ಭಾಗವಾಗಿದ್ದಾರೆ.

ಅಭಿಯಾನದ ಅಂಗವಾಗಿ ಎಲ್ಲ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರಿಗೆ ತಲಾ 2ರಂತೆ ಸೀರೆ ನೀಡಲು ನಿರ್ಧರಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಟೆಂಡರ್‌ ಆಗಿ ಬಣ್ಣ, ಗುಣಮಟ್ಟ, ವಿನ್ಯಾಸ ಇತ್ಯಾದಿ ನಿರ್ಧರಿಸಿ 367 ರೂ. ಬೆಲೆಯ ಸೀರೆಗಳನ್ನು ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಸರಬರಾಜು ಮಾಡಲಾಗಿದೆ.

2.5 ಲಕ್ಷ ಸೀರೆ
ರಾಜ್ಯದಲ್ಲಿ 204 ವಲಯಗಳಿದ್ದು 62,580 ಅಂಗನವಾಡಿ ಕೇಂದ್ರಗಳಿವೆ. ಇಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿದ್ದು ಅವರಿಗೆ ತಲಾ2ರಂತೆಯೂ 3,331 ಮಿನಿ ಅಂಗನವಾಡಿಗಳಲ್ಲಿರುವ ಕಾರ್ಯಕರ್ತೆಯರಿಗೆ ತಲಾ 2ರಂತೆ ಒಟ್ಟು 2,56,982 ಸೀರೆಗಳನ್ನು ಸರಬರಾಜು ಮಾಡಲಾಗಿದೆ. ಒಟ್ಟು 9.43 ಕೋ.ರೂ. ಪಾವತಿಗೆ ಒಪ್ಪಲಾಗಿದೆ.

ಬಿಲ್‌ ನೀಡಿಲ್ಲ
ರಾಜ್ಯದ 204 ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಳಿಗೆ 5 ತಿಂಗಳ ಹಿಂದೆ ಸೀರೆಗಳು ಬಂದಿವೆ. ಬಿಲ್‌ ಪಾವತಿಸಲು ಅವರಿಗೆ ಸರಕಾರದಿಂದ ಸೂಚನೆ ಬಂದಿ ದ್ದರೂ ಅನೇಕ ಕಡೆ ನೀಡಲಾಗಿಲ್ಲ.

Advertisement

ಗುತ್ತಿಗೆ ಸಿಬಂದಿಗೆ ವೇತನ ನೀಡಲು ಹಣವಿಲ್ಲ!
ರಾಷ್ಟ್ರೀಯ ಪೋಷಣ್‌ ಅಭಿ ಯಾನದಲ್ಲಿ ಗುತ್ತಿಗೆ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 490 ಉದ್ಯೋಗಿಗಳಿಗೆ 7 ತಿಂಗಳಿನಿಂದ ಕೇಂದ್ರದ ಅನುದಾನ ಬಂದಿಲ್ಲ ಎಂದು ನೆವ ಹೇಳಿ ವೇತನ ನೀಡದ ಸರಕಾರ ಇಂತಹ ಕೆಲಸಗಳಿಗೆ ಹಣ ಪೋಲು ಮಾಡುತ್ತಿದೆ.

ನಿರಾಕರಣೆ ಯಾಕೆ?
ಸೀರೆಯಲ್ಲಿ ದೊಡ್ಡದಾಗಿ ಕನ್ನಡ ಅಕ್ಷರ ದಲ್ಲಿ ಪೋಷಣ್‌ ಅಭಿಯಾನ್‌ ಎಂದು ಮುದ್ರಿಸ ಲಾಗಿದೆ. ಅಭಿಯಾನದ ಮುದ್ರೆ ಹೂಗಳ ವಿನ್ಯಾಸ ದಲ್ಲಿದೆ. ಇದು ಬ್ಯಾನರ್‌ನಂತೆ ತೋರು ತ್ತಿದ್ದು, ನಮ್ಮನ್ನು ಪ್ರಚಾರದ ಸರಕಾಗಿ ಬಳಸ ಲಾಗುತ್ತಿದೆ. ಸೌಂದರ್ಯಕ್ಕೆ ಪೂರಕ ವಾದ ಸೀರೆ ಕೊಟ್ಟರೆ ಮಾತ್ರ ಧರಿಸು ತ್ತೇವೆ ಎಂದು ಅಂಗನವಾಡಿ ನೌಕರರ ಒಕ್ಕೂಟ ದವರು ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಬ್ಯಾನರ್‌ನಂಥ ಸೀರೆ ನೀಡುವ ಬದಲು ನಮಗೆ ಬೋನಸ್‌ ನೀಡಲಿ. ನಾವೇ ಖರೀ ದಿಸು ತ್ತೇವೆ. ನಮ್ಮ ಗೌರವಧನ ಹೆಚ್ಚಿಸಿಲ್ಲ, ಕೋವಿಡ್‌ ಸಂದರ್ಭ ದುಡಿದುದಕ್ಕೆ ಪರಿಹಾರ ನೀಡಿಲ್ಲ. ನಮ್ಮನ್ನು ಪ್ರಚಾರದ ಸರಕಿನಂತೆ ಮಾಡುವ ಸೀರೆ  ಬೇಡ ಎಂದು ಸರಕಾರಕ್ಕೆ ಪತ್ರ ಬರೆದಿದ್ದೇವೆ.
– ಉಷಾ ಕೆ., ಸಂಘಟನ ಕಾರ್ಯದರ್ಶಿ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ

ಪೋಷಣ್‌ ಅಭಿಯಾನ ಸೀರೆ ಖರೀದಿ ನನ್ನ ಅವಧಿಯಲ್ಲಿ ನಡೆದಿಲ್ಲ. ರಾಜ್ಯದ ಅಂಗನವಾಡಿ ನೌಕರರ 6 ಒಕ್ಕೂಟದವರೂ ಸೀರೆ ಪಡೆಯಲು ನಿರಾಕರಿಸಿ ದ್ದಾರೆ. ಡಾಟಾ ಎಂಟ್ರಿ ಆಪರೇಟರ್‌ಗಳ ವೇತನಕ್ಕೆ ಅನುದಾನ ಬಿಡುಗಡೆಗಾಗಿ ಕೇಂದ್ರಕ್ಕೆ ಬರೆಯಲಾಗುವುದು.
ಹಾಲಪ್ಪ ಬಿ. ಆಚಾರ್‌
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ

- ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next