Advertisement

ಪೋಷಣ್‌ ಅಭಿಯಾನ್‌ ಸೀರೆ ವ್ಯರ್ಥ: ಒಪ್ಪಿದ ಸರಕಾರ

11:09 PM Mar 17, 2022 | Team Udayavani |

ಬೆಂಗಳೂರು: ಪೋಷಣ್‌ ಅಭಿಯಾನ್‌ ಯೋಜನೆಯಲ್ಲಿ 9.9 ಕೋ.ರೂ. ವೆಚ್ಚದಲ್ಲಿ ಖರೀದಿಸಿದ 2.56 ಲಕ್ಷ ಸೀರೆಗಳನ್ನು ಅಂಗನವಾಡಿ ಸಿಬಂದಿ ಸ್ವೀಕರಿಸಲಿಲ್ಲ. ಅವರಿಗೆ ನಿಯಮಗಳನ್ನು ಮನದಟ್ಟು ಮಾಡಲಾಗಿದೆ ಎಂದು ಸದನದಲ್ಲಿ ಹೇಳಿರುವ ಸರಕಾರ ಈ ಮೂಲಕ ಅದು ವ್ಯರ್ಥವಾದಂತಾಗಿದೆ ಎಂದು ಒಪ್ಪಿಕೊಂಡಿದೆ.

Advertisement

ತಲಾ 385.75 ರೂ.ಗಳಂತೆ 2,56,982 ಸೀರೆಗಳನ್ನು 9,91,30,806 ರೂ. ನೀಡಿ ಖರೀದಿಸಲಾಗಿದೆ. ಕೇಂದ್ರ ಸರಕಾರದ 2020ರ ಸೆ. 4ರ ಮಾರ್ಗಸೂಚಿ ಷರತ್ತಿನಲ್ಲಿ ಪೋಷಣ್‌ ಅಭಿಯಾನ್‌ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ನೀಡುವ ಸಮವಸ್ತ್ರದಲ್ಲಿ ಪೋಷಣ್‌ಅಭಿಯಾನ್‌ ಲೋಗೋವನ್ನು ಮುದ್ರಿಸಲು ತಿಳಿಸಲಾಗಿದೆ. ಅದರಂತೆ 2.56 ಲಕ್ಷ ಸೀರೆಗಳನ್ನು ವಿತರಿಸಲಾಗಿದೆ. ಆದರೆ ಈ ಸೀರೆಗಳನ್ನು ಧರಿಸಲು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ವಿರೋಧಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಘಟನೆಗಳ ಸಭೆ ನಡೆಸಿ ಕೇಂದ್ರ ಸರಕಾರದ ಷರತ್ತುಗಳನ್ನು ಮನದಟ್ಟು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಅವರು ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಉತ್ತರಿಸಿದ್ದಾರೆ. ಅಂತೆಯೇ ಪೋಷಣ್‌ ಅಭಿಯಾನ್‌ ಯೋಜನೆಗೆ 85 ಕೋ.ರೂ. ನಿಗದಿಯಾಗಿದ್ದು ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇದರಿಂದಾಗಿ ಸಿಬಂದಿಗೆ ವೇತನ ನೀಡಲು ಸಾಧ್ಯವಾಗಿಲ್ಲ.

ಉದಯವಾಣಿ’ ವರದಿ :

ಪೋಷಣ್‌ ಅಭಿಯಾನದಲ್ಲಿ ಖರೀದಿಸಿದ 2.56 ಲಕ್ಷ ಸೀರೆಗಳು ಇನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೋದಾಮಿನಲ್ಲಿದೆ. ಉಪಯೋಗ ಇಲ್ಲ ಎಂದು “ಉದಯವಾಣಿ’ ಫೆ. 24ರಂದು ವರದಿ ಮಾಡಿತ್ತು. ಅಂತೆಯೇ ಪೋಷಣ್‌ ಅಭಿಯಾನ್‌ ಸಿಬಂದಿಗೆ ವೇತನ ನೀಡಲು ಸಮಸ್ಯೆಯಾದ ಕುರಿತು “ಉದಯವಾಣಿ’ ಜ. 21ರಂದು “ಪೋಷಣ್‌ ಅಭಿಯಾನ ಸಿಬಂದಿಗೆ ಆರ್ಥಿಕ ಅಪೌಷ್ಟಿಕತೆ’ ಎಂದು ವರದಿ ಮಾಡಿತ್ತು. ಈ ಎರಡೂ ವರದಿಗಳ ಆಧಾರದಲ್ಲಿ ಸದನದಲ್ಲಿ ಪ್ರಶ್ನೆ ಮಂಡನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next