Advertisement

ಗೋವಾವನ್ನು ಪೋರ್ಚುಗೀಸರು ಲೂಟಿ ಮಾಡಿದ್ದನ್ನು ಅಲ್ಲಗಳೆಯುವಂತಿಲ್ಲ: ಸಾವಂತ್

04:51 PM Aug 12, 2022 | Team Udayavani |

ಪಣಜಿ: ಶ್ರೀಮಂತ ಗೋವಾವನ್ನು ಪೋರ್ಚುಗೀಸರು 450 ವರ್ಷಗಳ ಕಾಲ ಲೂಟಿ ಮಾಡಿದರು ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಈ ಹೋರಾಟವನ್ನು ಹೊಸ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಆಗ್ವಾದ್  ಜೈಲಿನಲ್ಲಿ ಭವ್ಯ ವಸ್ತುಪ್ರದರ್ಶನ ಏರ್ಪಡಿಸಲಾಗುತ್ತಿದೆ. ದೇಶದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಗ್ವಾದ್ ಜೈಲ್ ಮ್ಯೂಸಿಯಂ ಅನ್ನು ಇಡೀ ವರ್ಷ ವಿದ್ಯಾರ್ಥಿಗಳಿಗೆ ತೆರೆದಿಡಲಾಗುವುದು ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.

Advertisement

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರಲ್ಲಿ ಹಲವರು ಆಗ್ವಾದ್  ಜೈಲಿನಲ್ಲಿ ಬಂಧಿಯಾಗಿದ್ದರು. ಇಂದು ಆ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ಜೈಲಿನ ಪರಂಪರೆ ಹಾಗೂ ವಿಮೋಚನಾ ಹೋರಾಟದ ಚಾರಿತ್ರಿಕ ವಿವರಣೆ ಇಲ್ಲಿ ನಿಂತಿದೆ. ಸೆ.1ರಂದು ಈ ಮ್ಯೂಸಿಯಂ  ಉದ್ಘಾಟನೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಸಿಕೇರಿಯ ಕೋಟೆ ಅಗವಾಡ ಜೈಲಿನಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಅವರು ಮಾತನಾಡಿದರು
.
ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಮೈಕಲ್ ಲೋಬೋ, ಸಚಿವ ರೋಹನ್ ಖಂವಟೆ, ಪೊಲೀಸ್ ಮಹಾನಿರ್ದೇಶಕ ಜಸ್ಪಾಲ್ ಸಿಂಗ್, ಶಾಸಕ ಗಣೇಶ ಗಾಂವ್ಕರ್ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ರಾಯ ಶಿರೋಡ್ಕರ್ , ಶ್ಯಾಮಸುಂದರ್ ಕಲಾಂಗುಟ್ಕರ್ , ಪ್ರಭಾಕರ ನಾಯ್ಕ್ , ಸಂತಾನಾ ಡಯಾಸ್ , ರೋಹಿದಾಸ್ ದೇಸಾಯಿ  ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.

ದೇಶಕ್ಕಾಗಿ ಸಾಯಬೇಡಿ, ಕಲ್ಪನೆಗಳನ್ನು ನೀಡಿ!
ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರ ಕೆಲವು ನಿರ್ಣಯಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದರ ಅಡಿಯಲ್ಲಿ, ಶಾಲಾ ವಿದ್ಯಾರ್ಥಿಗಳು ಮತ್ತು ಯುವಕರು ದೇಶದ ಮುಂದಿನ 25 ವರ್ಷಗಳವರೆಗೆ 75 ಹೊಸ ಆಲೋಚನೆಗಳು, ನಿರ್ಣಯಗಳು, ಕಾರ್ಯಗಳು ಮತ್ತು ಸಾಧನೆಗಳನ್ನು ಸೂಚಿಸಬೇಕು. ಈಗ ದೇಶಕ್ಕಾಗಿ ಜೀವ ನೀಡುವ ಅಗತ್ಯವಿಲ್ಲ, ಆದರೆ ಹೊಸ ಆಲೋಚನೆಗಳನ್ನು ಪ್ರಸ್ತುತಪಡಿಸುವ ಅವಶ್ಯಕತೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next