Advertisement

ಶಿಷ್ಟಾಚಾರದ ಭಾಗವಾಗಿ ಭಾವಚಿತ್ರ: ಲಿಂಬಾವಳಿ

09:44 PM Apr 12, 2020 | Sriram |

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಕಾರ ಬಡವರಿಗೆ ವಿತರಿಸುತ್ತಿರುವ ಆಹಾರ ಚೀಲಗಳ ಮೇಲೆ ಶಿಷ್ಟಾ ಚಾರದ ಭಾಗವಾಗಿ ಸ್ಥಳೀಯ ಶಾಸಕನಾದ ನನ್ನ ಭಾವಚಿತ್ರ ಬಳಸಿದ್ದಾರೆ ಎಂಬುದು ನನಗಿರುವ ಮಾಹಿತಿ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

Advertisement

ಬಡವರಿಗೆ ಸರಕಾರ ನೀಡುತ್ತಿರುವ ಆಹಾರ ಚೀಲಗಳ ಮೇಲೆ ಅರವಿಂದ ಲಿಂಬಾವಳಿ ಅವರ ಭಾವಚಿತ್ರವಿರುವ ಬಗ್ಗೆ ವ್ಯಕ್ತವಾದ ಆಕ್ಷೇಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರಕಾರವು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸುವಾಗ ಶಿಷ್ಟಾಚಾರದಂತೆ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸಿ ಅವರ ಭಾವಚಿತ್ರ ಬಳಸಲಾಗುತ್ತದೆ. ಲಾಕ್‌ಡೌನ್‌ನಂತಹ ವಿಶೇಷ ಸಂದರ್ಭದಲ್ಲಿ ಜನರನ್ನು ಒಂದು ಕಡೆ ಸೇರಿಸಲು ನಿಷೇಧವಿದೆ.

ಆ ಹಿನ್ನೆಲೆಯಲ್ಲಿ ಆಹಾರಚೀಲ ವಿತರಣೆ ಕಾರ್ಯಕ್ರಮದ ಶಿಷ್ಟಾಚಾರ ಭಾಗ ವಾಗಿ ಪ್ರಧಾನಮಂತ್ರಿ, ಮುಖ್ಯ ಮಂತ್ರಿ ಹಾಗೂ ಸ್ಥಳೀಯ ಶಾಸಕರ ಭಾವಚಿತ್ರಗಳನ್ನು ಬಳಸಿಕೊಳ್ಳ ಲಾಗುತ್ತಿದೆ ಎಂಬುದು ನನಗಿರುವ ಮಾಹಿತಿ ಎಂದು ಹೇಳಿದ್ದಾರೆ.

ಈ ಶಿಷ್ಟಾಚಾರದ ಬಗ್ಗೆ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಸ್ಪಷ್ಟ ಪಡಿಸಿದರೆ ಅದನ್ನು ಪಾಲಿಸಲು ಸ್ಥಳೀಯ ಅಧಿಕಾರಿಗಳು ಸಿದ್ಧರಿ ದ್ದಾರೆ. ರಾಷ್ಟ್ರೀಯ ಸಂಕಷ್ಟದ ಈ ಸಂದರ್ಭ ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡಬಾರದು ಎಂಬುದು ನನ್ನ ನಿಲುವು ಹಾಗೂ ವಿನಂತಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next