ಮುಂಬಯಿ, ಡಿ. 6: ದಕ್ಷಿಣ ಮುಂಬಯಿ ಮತ್ತು ನವಿ ಮುಂಬ ಯಿ ಯನ್ನು ಸಂಪರ್ಕಿಸುವ ಮಹತ್ವಾ ಕಾಂಕ್ಷೆಯ ಬಂದರು ಯೋಜನೆಯಾದ ಮುಂಬಯಿ ಟ್ರಾನ್ಸ್ ಹಾರ್ಬರ್ ಲಿಂಕ್ ರಸ್ತೆ (ಎಂಟಿಎಚ್‌ಎಲ್) ಯೋಜ ನೆಯ ಕಾಮಗಾರಿ ಶೇ. 35ರಷ್ಟು ಪೂರ್ಣ ಗೊಂಡಿದ್ದು, ಈ ಯೋಜ ನೆಯು 2022ರ ಸೆಪ್ಟಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಮತ್ತು ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಏಕನಾಥ್ ಶಿಂಧೆ ಹೇಳಿದ್ದಾರೆ.
ಶುಕ್ರವಾರ ಈ ಯೋಜನೆಯನ್ನು ಪರಿಶೀಲಿ ಸಿದ್ದು, ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳ್ಳಲಿದೆ. ಹಲವು ವರ್ಷ ಗಳಿಂದ ಪ್ರಸ್ತಾವಿಸಲಾಗಿರುವ 22 ಕಿ.ಮೀ. ಯೋಜನೆಯನ್ನು ಮಾರ್ಚ್ 2018ರಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ ಎಂಜಿನಿ ಯರ್‌ಗಳು, ನುರಿತ ಕೌಶ ಲ ರಹಿತ ಕಾರ್ಮಿಕರು ಸೇರಿ ದಂತೆ ಸುಮಾರು ಆರು ಸಾವಿರ ಮಾನವ ಶಕ್ತಿ ಈ ಯೋಜನೆ ಯಲ್ಲಿ ಕಾರ್ಯ ನಿರ್ವ ಹಿ ಸು ತ್ತಿದೆ ಎಂದು ಶಿಂಧೆ ಹೇಳಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕೆಲಸದ ಮೇಲೆ ಪರಿಣಾಮ ಬೀರಿದ್ದರಿಂದಾಗಿ ಯೋಜನೆ ವಿಳಂಬವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೆಲಸದ ಅವಧಿ ಹೆಚ್ಚುವುದರೊಂದಿಗೆ ಕಾಮಗಾರಿಯನ್ನು ಚುರುಗೊಳಿಸಲಾಗಿದ್ದು, ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಆದ್ದರಿಂದ ಯೋಜನೆ ಯನ್ನು ಸಮಯಕ್ಕೆ ಪೂರ್ಣಗೊಳಿ ಸಬ ಹುದು ಎಂದು ಎಂಎಂಆರ್‌ಡಿಎ ಮೆಟ್ರೋಪಾಲಿಟನ್ ಆಯುಕ್ತ ಆರ್. ಎ. ರಾಜೀವ್ ಹೇಳಿದ್ದಾರೆ.
ಸೇತುವೆಯ ಕೆಳಗೆ ದೋಣಿಗಳ ಸಂಚಾ ರಕ್ಕೆ ಅನುಕೂಲವಾಗುವಂತೆ ಮತ್ತು ಸಮುದ್ರದಲ್ಲಿನ ತೈಲ ರಿಂಗ್‌ಗಳನ್ನು ಹೊಡೆಯದಂತೆ ಧ್ರುವಗಳ ನಡುವೆ ಹೆಚ್ಚಿನ ಅಂತರವನ್ನು ಇಡು ವುದು ಆವಶ್ಯಕ. ಅತ್ಯಾಧುನಿಕ ಆಥೊì ಟ್ರೊಪಿಕ್ ಸ್ಟೀಲ್ ಡೆಕ್‌ಗಳನ್ನು (ಒಎಸ್‌ಡಿ) ಅಲ್ಲಿ ಬಳಸಲಾಗುತ್ತಿದೆ. ಒಟ್ಟು 22 ಕಿ.ಮೀ ಸೇತುವೆಗಳಲ್ಲಿ 4.1 ಕಿ.ಮೀ ಸ್ಟೀಲ್ ಬಾಕ್ಸ್ ಗಿರ್ಡರ್‌ಗಳಾಗಿರುತ್ತವೆ. 90ರಿಂದ 180 ಮೀಟರ್ ಉದ್ದದ 29 ಒಎಸ್‌ಡಿಗಳನ್ನು ಬಳಸಲಾಗುತ್ತದೆ. ಈ ಉಕ್ಕಿನ ನಿರ್ಮಾಣದ ವೆಚ್ಚ ಸುಮಾರು 4,300 ಕೋಟಿ ರೂ.ಗಳಷ್ಟಾಗಿದೆ.
ಎಂಟಿಎಚ್‌ಎಲ್ ಅನ್ನು ನೇರವಾಗಿ ವಿರಾರ್-ಅಲಿಬಾಗ್ ಮಲ್ಟಿಮೋಡಲ್ ಕಾರಿಡಾರ್‌ಗೆ ವರ್ಲಿ-ಶಿವಿx ಎಲಿವೇಟೆಡ್ ರಸ್ತೆ, ಶಿವಿx ಯಿಂದ ಪೂರ್ವ ಫ್ರೀ ವೇ ಮತ್ತು ನವಿ ಮುಂಬಯಿಯಲ್ಲಿ ಸಂಪರ್ಕಿಸಲಾಗುವುದು. ಜೆಎನ್‌ಪಿಟಿ, ರಾಜ್ಯ ಹೆದ್ದಾರಿ 54, ಮುಂಬಯಿ-ಪುಣೆ ಹಳೆಯ ರಾಷ್ಟ್ರೀಯ ಹೆದ್ದಾರಿ, ನವಿ ಮುಂಬಯಿ ವಿಮಾನ ನಿಲ್ದಾಣದತ್ತ ಪ್ರಯಾಣ ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಮುಂಬಯಿ-ಪುಣೆ ಎಕ್ಸ್‌ಪ್ರೆಸ್ ವೇ ಚಿರ್ಲೆ ನಿಂದ 8 ಕಿ.ಮೀ ದೂರದಲ್ಲಿದೆ.
ಪ್ರಯಾಣ ಅವಧಿ ಇಳಿಕೆ : ಈ ಯೋಜನೆ ಪೂರ್ಣಗೊಂಡ ಅನಂತರ, ದಕ್ಷಿಣ ಮುಂಬಯಿ ಯಿಂದ ನವಿ ಮುಂಬಯಿಗೆ ತಲುಪಲು ವ್ಯಯಿಸುವ ಅವಧಿಯಲ್ಲಿ ಸುಮಾರು 40 ನಿಮಿಷಗಳಷ್ಟು ಉಳಿಕೆ ಯಾಗುತ್ತದೆ. ಆದರೆ ಈ ಮಾರ್ಗದಲ್ಲಿ ರಸ್ತೆ ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಸುಮಾರು 200 ರೂ.ಗಳ ರಸ್ತೆ ತೆರಿಗೆ ವಿಧಿಸಬಹುದು.