Advertisement

ಪೋರ್ಷೆ –ಬೋಯಿಂಗ್‌ ಸಹಭಾಗಿತ್ವದಲ್ಲಿ ಬರಲಿದೆ ಹಾರುವ ವಿದ್ಯುತ್‌ಚಾಲಿತ ಕಾರು

10:00 AM Oct 15, 2019 | sudhir |

ಆಟೋ ಮೊಬೈಲ್‌ ವಲಯಗಳಲ್ಲಿ ಅಪಾರ ಕೀರ್ತಿಗಳಿಸಿರುವ ಪೋರ್ಷೆ ಹಾಗೂ ಬೋಯಿಂಗ್‌ ಕಂಪೆನಿಗಳು ನೂತನ ಕಾರ್ಯ ಯೋಜನೆಯನ್ನು ಹಾಕಿಕೊಂಡಿದ್ದು, ಹಾರುವ ಎಲೆಕ್ಟ್ರಾನಿಕ್‌ ಕಾರನ್ನು ತಯಾರಿಸಲು ಮುಂದಾಗಿದೆ.

Advertisement

ಈ ಕುರಿತು ಇತ್ತೀಚೆಗೆ ಪತ್ರಿಕಾ ಗೋಷ್ಠಿ ನಡೆಸಿದ್ದು, ಪೋರ್ಷೆ ಮತ್ತು ಬೋಯಿಂಗ್‌ ಫ್ಲೈಯಿಂಗ್‌ ಕಾರನ್ನು ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಕಾರು ಸಂಪೂರ್ಣ ವಿದ್ಯುತ್‌ ಚಾಲಿತ ನಿಯಂತ್ರಣದಿಂದ ಕಾರ್ಯ ನಿರ್ವಹಿಸಲಿದೆಯಂತೆ.

ಶ್ರೀಮಂತ ಐಷಾರಾಮಿ ಕಾರು ಖರೀದಿದಾರರನ್ನು ಗುರಿಯಾಗಿರಿಸಿಕೊಂಡು ಪ್ರೀಮಿಯಂ ಫ್ಲೈಯಿಂಗ್‌ ಕಾರನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪೋರ್ಷೆ ಹಾಗೂ ಬೋಯಿಂಗ್‌ ಕಂಪೆನಿಗಳು ಜಂಟಿಯಾಗಿ ಈ ಯೋಜನೆಯನ್ನು ಪ್ರಾರಂಭಿಸಿದೆ.

ಈ ಕಾರುಗಳ ತಯಾರಿಕೆಯಿಂದ ವಾಹನ ದಟ್ಟನೆ ಸಮಸ್ಯೆಗೆ ಪರಿಹಾರ ದೊರೆಯುವುದರೊಂದಿಗೆ,ವಾಯು ಮಾಲಿನ್ಯದಂತಹ ಸಮಸ್ಯೆಗಳು ಇದರಿಂದ ನಿವಾರಣೆಯಾಗಲಿದೆ ಎಂದು ವರದಿ ತಿಳಿಸಿದೆ.

ಸದ್ಯ ಕಾರು ತಯಾರಿಸಲ್ಲಿದ್ದೇವೆ ಎಂಬ ಮಾಹಿತಿಯನ್ನು ಮಾತ್ರ ಹಂಚಿಕೊಂಡಿರುವ ಕಂಪನಿಗಳು, ಕಾರಿನ ಬೆಲೆ- ಯಾವಾಗ ಬಿಡುಗಡೆಗೊಳ್ಳಲಿದೆ ಎಂಬಿತ್ಯಾದಿ ವಿಷಯಗಳನ್ನು ಬಹಿರಂಗ ಪಡಿಸುವಲ್ಲಿ ಅಂತರ ಕಾಯ್ದು ಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next