Advertisement

ಬಿಎಸ್‌ಎಫ್ ಸಭೆಯಲ್ಲೇ ಅಶ್ಲೀಲ ಚಿತ್ರ ಪ್ರದರ್ಶನ

01:28 AM Jun 13, 2017 | Team Udayavani |

ಫಿರೋಜ್‌ಪುರ್‌ : ಶನಿವಾರ ಇಲ್ಲಿ ನಡೆದ ಸೈನಿಕ ಸಮ್ಮೇಳನದಲ್ಲಿ ಲ್ಯಾಪ್‌ಟಾಪ್‌ ಬಳಸಿ ವಿಷಯ ಮಂಡಿಸುತ್ತಿದ್ದ ಬಿಎಸ್‌ಎಫ್ ಅಧಿಕಾರಿಯೊಬ್ಬರು ಏಕಾಏಕಿ ಅಶ್ಲೀಲ ಚಿತ್ರದ ತುಣುಕೊಂದನ್ನು ಪ್ರದರ್ಶಿಸಿರುವ ಘಟನೆ ನಡೆದಿದೆ. ಇದರಿಂದ ಮುಜುಗರಕ್ಕೀಡಾಗಿರುವ ಸೇನೆ ಈ ಘಟನೆ ಕುರಿತು ತನಿಖೆಗೆ ಆದೇಶಿಸಿದೆ. ಅಧಿಕಾರಿ ತಮ್ಮ ಅಧಿಕೃತ ಲ್ಯಾಪ್‌ಟಾಪ್‌ ಬಳಸಿ ತರಬೇತಿ ನೀಡುತ್ತಿದ್ದ ವೇಳೆ ಅಶ್ಲೀಲ ಚಿತ್ರದ ತುಣುಕು ತೆರೆ ಮೇಲೆ ಮೂಡಿದೆ. ಇದು 90 ನಿಮಿಷಗಳ ಕಾಲ ಪ್ರಸಾರವಾಗಿದೆ. ಇಂಥ ಘಟನಗಳು ಬಿಎಸ್‌ಎಫ್ನ ಶಿಸ್ತಿಗೆ ಧಕ್ಕೆ ಉಂಟು ಮಾಡುತ್ತವೆ ಎಂದಿರುವ ಡಿಐಜಿ ಆರ್‌.ಎಸ್‌. ಕಟಾರಿಯಾ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next