Advertisement
ಶುಕ್ರವಾರ ರಾತ್ರಿ ಅಣೆಕಟ್ಟಿನ ನಾರ್ಥ್ ಗೇಟ್‌ನ ಉದ್ಯಾನದ ಬಳಿ ಚಿರತೆ ಹಾಗೂ ಮುಳ್ಳುಹಂದಿ ಕಾಣಿಸಿಕೊಳ್ಳುವ ಜೊತೆಗೆ ಒಂದಕ್ಕೊಂದು ಜಗಳವಾಡಿರುವ ದೃಷ್ಯ ಸಿಸಿ ಟಿವಿಗಳಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇವುಗಳ ಪೈಕಿ ಅಣೆಕಟ್ಟೆಯ ನಾರ್ಥ್ ಗೇಟ್‌ನ ಉದ್ಯಾನದ ಬಳಿಯಿಂದ ಇರಿಸಲಾಗಿದ್ದ, 1 ಬೋನನ್ನು ಶುಕ್ರವಾರ ಬೆಳಗ್ಗೆ ಪಾಂಡವಪುರ ಅರಣ್ಯ ಇಲಾಖೆ ಅಧಿಕಾರಿಗಳು ನಿಗಮದ ಅಧಿಕಾರಿಗಳು ವಿರೋಧದ ನಡುವೆಯೂ ಸ್ಥಳಾಂತರಿಸಿದ್ದಾರೆ. ಕಾಕತಾಳೀಯ ಎಂಬಂತೆ ಸ್ಥಳಾಂತರಿಸಿದ ದಿನದಂದೇ ಅದೇ ಸ್ಥಳದಲ್ಲಿ ಚಿರತೆ ಹಾಗೂ ಮುಳ್ಳುಹಂದಿ ಪ್ರತ್ಯಕ್ಷವಾಗಿರುವುದು ನಿಗಮದ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಆಕ್ರೋಶ ವ್ಯಕ್ತವಾಗಿದೆ.