Advertisement
ವೆಂಕಟ್ ಸಾಮಾನ್ಯವಾಗಿ “ನನ್ ಮಗಂದ್… ನನ್ ಎಕ್ಕಡ …’ ಎಂದು ಹೇಳುತ್ತಲೇ ಇರುತ್ತಾರೆ. ಹೀಗೆ ಮಾತ್ ಮಾತಿಗೂ ಡೈಲಾಗ್ ಹೇಳಿ ಎಲ್ಲೆಡೆ ಜೋರು ಸುದ್ದಿಯಾಗಿದ್ದ ವೆಂಕಟ್, ಯಾಕೆ ಹಾಗೆ ಹೇಳುತ್ತಿದ್ದರು, ಹಾಗೆಲ್ಲ ವರ್ತಿಸುತ್ತಿದ್ದದ್ದು ಯಾಕೆ ಎಂಬುದಕ್ಕೆ ರಿಲೀಸ್ಆಗುತ್ತಿರುವ ಅವರ “ಪೊರ್ಕಿ ಹುಚ್ಚ ವೆಂಕಟ್’ ಚಿತ್ರದಲ್ಲಿ ಉತ್ತರ ಕೊಟ್ಟಿದ್ದಾರಂತೆ. “ಪೊರ್ಕಿ ಹುಚ್ಚ ವೆಂಕಟ್’ ಚಿತ್ರ ನೋಡಿದವರೆಲ್ಲರಿಗೂ ಇಷ್ಟವಾಗುತ್ತೆ ಎಂಬ ವಿಶ್ವಾಸ ವೆಂಕಟ್ಗಿದೆ. ಈ ಚಿತ್ರಕ್ಕೆ ಚವ್ಹಾಣ್ ಕ್ಯಾಮೆರಾ ಹಿಡಿದಿದ್ದಾರೆ. ಅವರಿಗೆ ಇದು ವೆಂಕಟ್ ಜತೆ ಮೂರನೇ ಸಿನಿಮಾ. ಇನ್ನು, ಸತೀಶ್ ಬಾಬು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವೆಂಕಟ್ ಸಹ ಒಂದು ಹಾಡು ಹಾಡಿದ್ದಾರೆ.
ಇತರರು ಚಿತ್ರದಲ್ಲಿದ್ದಾರೆ.