Advertisement

4ನೇ ಶನಿವಾರ ಸರಕಾರಿ ರಜೆ, ಸರಕಾರಿ ಕಚೇರಿಗಳಲ್ಲಿ ಜನಸಂಖ್ಯೆ ವಿರಳ

11:44 PM Jun 22, 2019 | sudhir |

ಕುಂದಾಪುರ: ರಾಜ್ಯ ಸರಕಾರದ ಆದೇಶದಂತೆ 4ನೇ ಶನಿವಾರವೂ ಕೂಡ ಸರಕಾರಿ ರಜೆ ಘೋಷಿಸಲಾಗಿದ್ದು, ಅದರಂತೆ ನಾಲ್ಕನೇ ಶನಿವಾರವಾದ ಜೂ.22ರಂದು ಕುಂದಾಪುರದ ತಾ. ಪಂ. ಹಾಗೂ ಮಿನಿ ವಿಧಾನಸೌಧಕ್ಕೂ ರಜೆ ಸಾರಲಾಗಿದ್ದು, ಇದರಿಂದ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ.

Advertisement

ಮಿನಿ ವಿಧಾನಸೌಧದಲ್ಲಿ ಹಿಂದಿನ ದಿನಗಳಲ್ಲಿ ಬಂದಿದ್ದ ಜನರಿಗೆ ಈ ಮೊದಲೇ 4ನೇ ಶನಿವಾರ ರಜೆ ಎಂದು ತಿಳಿಸಿದ್ದರಿಂದ ಆಧಾರ್‌ ತಿದ್ದುಪಡಿ, ಪಡಿತರ ಚೀಟಿ ತಿದ್ದುಪಡಿ, ಜಾಗದ ನೋಂದಣಿ ಸಹಿತ ಯಾವುದೇ ಕೆಲಸಕ್ಕೆ ಆಗಮಿಸುವವರ ಸಂಖ್ಯೆ ವಿರಳವಾಗಿತ್ತು. ಆದರೂ ಮಿನಿ ವಿಧಾನಸೌಧದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಗ್ರಾಮೀಣ ಭಾಗದಿಂದ ರಜೆ ವಿಷಯ ತಿಳಿಯದೇ 4-5 ಜನ ಬಂದಿರಬಹುದು ಎನ್ನುವುದು ಇಲ್ಲಿದ್ದ ಸಿಬಂದಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಇನ್ನು ಮಿನಿವಿಧಾನಸೌಧದಲ್ಲಿ ‘ಇಂದು ರಜೆ’ ಎಂದು ತಿಳಿಸುವ ಫಲಕವನ್ನು ಹೊರಗಡೆ ಹಾಕಲಾಗಿತ್ತು. ಆದರೆ ಕುಂದಾಪುರ ತಾಲೂಕು ಪಂಚಾಯತ್‌ ಕಚೇರಿಯಲ್ಲಿ ಮಾತ್ರ ಈ ತರಹ ರಜೆ ಎಂದು ಬಂದವರಿಗೆ ತಿಳಿಸುವ ಯಾವುದೇ ನೋಟಿಸ್‌ಗಳನ್ನು ಹಾಕಿರ ಲಿಲ್ಲ. ಇದರಿಂದ ತೀರಾ ಗ್ರಾಮೀಣ ಪ್ರದೇಶಗಳಿಂದ ಬಂದವರಿಗೆ ಕಚೇರಿಗೆ ಬೀಗ ಹಾಕಿರುವುದು ಯಾಕೆಂದು ತಿಳಿಯದೇ ಹಾಗೇ ವಾಪಸು ಹೋದ ನಿದರ್ಶನಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next