ಮಾಗಡಿ: ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ಚಂದ್ರಶೇಖರಯ್ಯ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಮತ್ತು ಆರೋಗ್ಯಾಧಿಕಾರಿಗಳ ಕಚೇರಿ ಪುರಸಭೆ, ಪಂಚಾಯ್ತಿ ಹಾಗೂ ಮಾಗಡಿ ತಾಪಂ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ದೊರೆತಾಗ ಕೇವಲ 36 ಕೋಟಿಜನಸಂಖ್ಯೆಯಿತ್ತು. ಈಗ 136 ಕೋಟಿ ದಾಟಿದೆ. 2025 ಕ್ಕೆ ಭಾರತವು 150 ಕೋಟಿ ಜನಸಂಖ್ಯೆ ಹೆಚ್ಚಲಿದೆ. ಚೀನಾವನ್ನುಹಿಂದಿಕ್ಕಿ ವಿಶ್ವದ ಹೆಚ್ಚು ಜನಸಂಖ್ಯೆ ಹೊಂದಿರುವದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವ ಸಂಸ್ಥೆ ವರದಿಹೇಳಿದೆ. ಇದರಿಂದ ದೇಶವು ಅನೇಕ ಸಮಸ್ಯೆಎದುರಿಸಬೇಕಾಗುತ್ತದೆ. ಆದ್ದರಿಂದ ಗ್ರಾಮೀಣ ಜನರು ಜಾಗೃತರಾಗಬೇಕು ಎಂದು ಹೇಳಿದರು.
ಗಂಡು ಮಗು ಬೇಕು ಎಂಬ ಮೂಡನಂಬಿಕೆಯಿಂದ ಹೊರಬೇಕು. ಹೆಣ್ಣಾಗಲಿ, ಗಂಡಾಗಲಿ ಒಂದೇ ಮಗು ಸಾಕು ಎಂಬ ನಿರ್ಧಾರಕ್ಕೆ ಬರಬೇಕು. ಜನಸಂಖ್ಯಾ ಹೆಚ್ಚಳದಿಂದ ಉಂಟಾಗುತ್ತಿರುವ ಜಾಗತಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಲಿಂಗ ಅಸಮಾನತೆ, ಲೈಂಗಿಕ, ಶಿಕ್ಷಣದ ಕೊರತೆ, ಆರೋಗ್ಯಕ್ಕಾಗಿಹಕ್ಕು, ಹುಟ್ಟಲಿರುವ ಮಗುವಿನ ಲಿಂಗ ಪತ್ತೆ, ಗರ್ಭನಿರೋಧಕ ವಸ್ತುಗಳ ಬಳಕೆ ಇವುಗಳ ಕುರಿತು ಕೂಡ ಈ ದಿನ ಬೆಳಕು ಚಲ್ಲಲಾಗುತ್ತದೆ ಎಂದರು.
ನಡೆಯುತ್ತಿದೆ ಜಾಗೃತಿ ಕಾರ್ಯ: ಡಾ.ರಶ್ಮಿ ಮಾತನಾಡಿ, ಜಿಲ್ಲೆಗಳಲ್ಲಿ ಭೂ ಕುಸಿತ, ಭಾರಿ ಮಳೆ ಸೇರಿದಂತೆ ವಿವಿಧ ಬಗೆಯ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಇದಕ್ಕೆ ಜನಸಂಖ್ಯೆ ಏರಿಕೆ ಕಾರಣ. ಹಿಂದೆ ಆರೋಗ್ಯ ಸೌಲಭ್ಯಗಳು ಕಡಿಮೆ ಇದ್ದಿದ್ದರಿಂದ ಆತಂಕವಿತ್ತು. ಆದರೆ, ಇಂದುಆರೋಗ್ಯ ಸೌಲಭ್ಯಗಳು ಉತ್ತಮವಾಗಿರುವುದರಿಂದ ಆಆತಂಕ ಈಗಿಲ್ಲ. ಹಿಂದಿಗಿಂತಲೂ ಜೀವನ ಗುಣಮಟ್ಟ ಈಗ ಹೆಚ್ಚಿದೆ. ಆದ್ದರಿಂದ ಸಣ್ಣ ಸಂಸಾರವಿದ್ದರೆ ಆರ್ಥಿಕತೆಉತ್ತಮವಾಗಿರುತ್ತದೆ. ಈ ಬಗ್ಗೆ ಹೆಚ್ಚು ಅರಿವುಮೂಡಿಸುವ ಕೆಲಸವಾಗಬೇಕಿದೆ. ಕುಟುಂಬ ಯೋಜನೆಯ ಜಾರಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಇನ್ನಷ್ಟು ಜಾಗೃತಿ ಕಾರ್ಯ ನಡೆಯುತ್ತಿದೆ. ನಾಗರಿಕರು ಕುಟುಂಬ ಕಲ್ಯಾಣ ಯೋಜನೆ ಅನುಸರಿಸಿ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರಯ್ಯ, ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿಆರ್.ರಂಗನಾಥ್, ಡಾ.ದಿವ್ಯಾ, ಡಾ.ಸ್ವಾಮಿ, ಡಾ.ಪ್ರತಿಮಾ, ಡಾ.ಶರ್ಮಿಳಾ, ಆರೋಗ್ಯ ಸಹಾಯಕರಾದ ಭೈರೇಗೌಡ, ತುಕಾರಾಂ, ಶಿವಸ್ವಾಮಿ ಇದ್ದರು.