Advertisement

Government ಯೋಜನೆಗಳ ಜನಪ್ರಿಯತೆ ವಿರೋಧ ಪಕ್ಷಗಳಿಗೆ ಮರ್ಮಾಗಾತ: ಸಚಿವ ಕೆ.ವೆಂಕಟೇಶ್ ಲೇವಡಿ

09:57 PM Aug 16, 2023 | Team Udayavani |

ಪಿರಿಯಾಪಟ್ಟಣ: ಸರ್ಕಾರದ ಯೋಜನೆಗಳ ವಿಫಲತೆಯ ಕನಸ್ಸು ಕಂಡಿದ್ದ ಬಿಜೆಪಿ, ಜೆಡಿಎಸ್ ನಾಯಕರು ನಮ್ಮ ಯೋಜನೆಗಳ ಜನಪ್ರಿಯತೆ ಕಂಡು ಈಗ ಮೈಪರಚಿಕೊಳ್ಳುತ್ತಿವೆ ಎಂದು ರೇಷ್ಮೆ ಮತ್ತು ಪಶುಪಾಲನಾ ಸಚಿವ ಕೆ.ವೆಂಕಟೇಶ್ ಲೇವಡಿ ಮಾಡಿದರು.

Advertisement

ತಾಲೂಕಿನ ಮಾಕೋಡು, ಕೆ.ಎಂ.ಕೊಪ್ಪಲು, ಎಂ.ಶೆಟ್ಟಿಹಳ್ಳಿ, ಕಿರನಲ್ಲಿ, ತಾತನಹಳ್ಳಿ, ಹರಿಲಾಪುರ, ಮಲಗನಕೆರೆ, ಸೀಗಡಿಕಟ್ಟೆ ಗ್ರಾಮಗಳಲ್ಲಿ ಬುಧವಾರ ನಡೆದ ಜನಸಂಪರ್ಕ ಅಭಿಯಾನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ನುಡಿದಂತೆ ನಡೆದಿದ್ದೇವೆ:
ಕಾಂಗ್ರೆಸ್ ಬಡವರ ಪಕ್ಷ, ಶ್ರೀಸಾಮಾನ್ಯರ ಅಭಿವೃದ್ದಿಯೇ ನಮ್ಮ ಮೂಲ ಉದ್ದೇಶ, ಕಾಂಗ್ರೆಸ್ ಜಾರಿ ಮಾಡಿದ್ದ ಕಾರ್ಯಕ್ರಮಗಳ ಬಗ್ಗೆ ಬಿಜೆಪಿ ನಾಯಕರಿಗೆ ಹಾಗೂ ಮೋದಿಗೆ ಹೊಟ್ಟೆಉರಿ ಆರಂಭವಾಗಿದೆ, 5 ಗ್ಯಾರೆಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 60 ಸಾವಿರ ಕೋಟಿ ವಿನಿಯೋಗ ಮಾಡುತ್ತಿದೆ. ದೇಶದಲ್ಲಿ ಬಡವರಿಗಾಗಿ ಈ ರೀತಿಯ ಯೋಜನೆಗಳನ್ನು ತಂದಿರುವುದು ಕರ್ನಾಟಕ ಮಾತ್ರ, ಹಾಗಾಗಿ ದೇಶದ ಜನತೆ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಶಕ್ತಿ ಯೋಜನೆಯನ್ನು ಎಲ್ಲಾ ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಜನತೆಗೆ ನೀಡಿದ್ದ 5 ಭರವಸೆಗಳಲ್ಲಿ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ದೇವೆ ಅದೇ ರೀತಿ ನಿರುದ್ಯೋಗಿ ಪದವಿಧರರಿಗಾಗಿ ಡಿಸೆಂಬರ್ ತಿಂಗಳಲ್ಲಿ ಯುವನಿಧಿ ಕಾರ್ಯಕ್ರಮ ಆರಂಭವಾಗಲಿದೆ ನಾವು ನೀಡಿದ್ದ ಎಲ್ಲಾ ಭರವಸೆಗಳನ್ನು ವಿಫಲಗೊಳಿಸಲು ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹಾಗೂ ಸಿದ್ದರಾಮಯ್ಯನವರ ಮುಖಕ್ಕೆ ಮಸಿ ಬಳಿಯಬೇಕು ಎಂಬ ಬಿಜೆಪಿ,ಜೆಡಿಎಸ್ ನಾಯಕರ ಹುನ್ನಾರ ಈಗ ವಿಫಲವಾಗಿದೆ. ಹಾಗಾಗಿ ಈ ನಾಯಕರು ತಾವೇ ಮೈಪರಚಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು ಯಾರೂ ಕೂಡ ಸರ್ಕಾರದ ಯೋಜನೆಗಳಿಂದ ವಂಚಿತವಾಗಬಾರದು ಎಂದು ನೊಂದಣಿ ಪ್ರಕ್ರಿಯೆಯನ್ನು ಇನ್ನೂ ಮುಂದುವರಿಸುತ್ತಿದ್ದೇವೆ ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅಹವಾಲುಗಳ ಸುರಿಮಳೆ:
ತಾಲ್ಲೂಕಿನ ಮಾಕೋಡು ಗ್ರಾಮದ ಆಯುರ್ವೇದ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಮಾರ್ಪಾಡು ಮಾಡಬೇಕು, ಪದವಿ ಪೂರ್ವ ಕಾಲೇಜು ಮಂಜೂರು ಮಾಡಬೇಕು, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ರಸ್ತೆ ಅಭಿವೃದ್ಧಿ, ಕೆರೆ ಏರಿಯ ಅಗಲ ಮಾಡಬೇಕು, ಚೆನ್ನಕೇಶವ ದೇವಾಲಯ ದುರಸ್ತಿ ಮಾಡಿಸಬೇಕು, ಚಿಕ್ಕೆರೆ ಏರಿ ಅಭಿವೃದ್ಧಿ ಪಡಿಸಬೇಕು, ಡೈರಿಗೆ ಸ್ವಂತ ಕಟ್ಟಡ ಕಲ್ಪಿಸಬೇಕು, ಬಸ್ ಸೌಲಭ್ಯ ಕಲ್ಪಿಸಬೇಕು ದೇವಾಲಯಗಳಿಗೆ, ಸಮುದಾಯ ಭವನಗಳಿಗೆ, ಅನುದಾನ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

Advertisement

ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ತಹಸೀಲ್ದಾರ್ ಕುಂಜಿ ಅಹಮದ್, ತಾಪಂ ಇಒ ಸುನೀಲ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಡಾ.ವೈ.ಪ್ರಸಾದ್, ಡಾ.ಸೋಮಯ್ಯ, ವೆಂಕಟೇಶ್, ದಿನೇಶ್, ಮಾದೇಶ್, ಮಮತಾ, ಪ್ರಸಾದ್, ಚಂದ್ರೇಗೌಡ, ಬಸವರಾಜು, ಸಿಪಿಐ ಕೆ.ವಿ.ಶ್ರೀಧರ್, ಪಿಡಿಒ ಪರಮೇಶ್, ಗ್ರಾಪಂ ಅಧ್ಯಕ್ಷರಾದ ಯಶೋಧಮ್ಮ, ಶೈಲಜಾ ಅಶೋಕ್, ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ಮುಖಂಡರಾದ ಡಿ.ಟಿ.ಸ್ವಾಮಿ, ಎಂ.ಲೋಕೇಶ್, ಎಂ.ಕೆ.ಕೃಷ್ಣೇಗೌಡ, ರಮೇಶ್, ಮೊಬಿನ್ ತಾಜ್, ರಹಮತ್ ಜಾನ್ ಬಾಬು, ಕುಮಾರ್ ವಿಜಯ್, ನೀಲಕಂಠ, ಬಸವರಾಜು, ಸತೀಶ್, ಬಲರಾಮ್, ಕಿರನಲ್ಲಿ ರವಿ, ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next