ಹೊಸದಿಲ್ಲಿ: ಕೇರಳದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗೆ ಚೀನದಿಂದ ಹಣದ ಹರಿವು ಬರುತ್ತಿದ್ದು, ಆ ಹಣವನ್ನು ಸಂಘಟನೆಯು ಬೆಂಗಳೂರು ಕೆ.ಜಿ. ಹಳ್ಳಿ- ಡಿಜೆ ಹಳ್ಳಿ ಪೊಲೀಸ್ ಠಾಣೆಗಳ ಮೇಲಿನ ದಾಳಿ ಪ್ರಕರಣ, ದಿಲ್ಲಿ ಗಲಭೆ ಸೇರಿ ದೇಶಾದ್ಯಂತ ನಡೆದ ಹಲವಾರು ವಿಧ್ವಂಸಕ ಕೃತ್ಯಗಳಿಗೆ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದೆ.
ಪಿಎಫ್ಐ ನಾಯಕ ಕೆ.ಎ. ರವೂಫ್ ಶೆರೀಫ್ಗೆ ಚೀನದ ಜತೆಗೆ ನೇರ ಸಂಪರ್ಕವಿದ್ದು, ಆ ದೇಶದವರಿಂದ 1 ಕೋಟಿ ರೂ. ದೇಣಿಗೆ ಪಡೆದಿದ್ದಾನೆ. ಇದನ್ನು ಆತ ಮಾಸ್ಕ್ ಟ್ರೇಡಿಂಗ್ ಎಂಬ ನಕಲಿ ಸ್ವರೂಪದ ವ್ಯವಹಾರಗಳಿಂದ ಪಡೆದಿದ್ದಾರೆ. 2019, 2020ರಲ್ಲಿ ಈತ ಚೀನಕ್ಕೆ ಭೇಟಿ ನೀಡಿದ್ದ. ಅಲ್ಲಿಂದ ಬಂದ ಅನಂತರ ಆತನ ಇಂಡಿಯನ್ ಬ್ಯಾಂಕ್‌ನ ಖಾತೆಗೆ ಹಣದ ದೇಣಿಗೆ ಬಂದಿದೆ ಎಂದು ಇ.ಡಿ. ತಿಳಿಸಿರುವುದಾಗಿ “ಮಾತೃಭೂಮಿ’ ತಿಳಿಸಿದೆ.
ಪತ್ರಕರ್ತರಿಗೆ ಸಹಾಯ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದ್ದ ದಲಿತ ಮಹಿಳೆಯ ಗ್ಯಾಂಗ್ ರೇಪ್ ಪ್ರಕರಣಕ್ಕೂ, ರವೂಫ್ಗೂ ನಂಟಿದೆ ಎಂದು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣ ಹೊರಗೆ ಬರುತ್ತಲೇ ಸಿದ್ದಿಕೆ ಕಪ್ಪನ್ ಎಂಬ ದಿಲ್ಲಿ ಮೂಲದ ಕೇರಳ ಪತ್ರಕರ್ತ ಹಾಗೂ ಇನ್ನಿತರ ಮೂವರು ಪತ್ರಕರ್ತರು ಹತ್ರಾಸ್‌ಗೆ ಭೇಟಿ ನೀಡಿದ್ದರು. ಅವರು ಹತ್ರಾಸ್‌ಗೆ ಪ್ರಯಾಣ ಬೆಳೆಸುವ ಎಲ್ಲ ಖರ್ಚುವೆಚ್ಚಗಳನ್ನೂ ಇದೇ ರವೂಫ್ ನೋಡಿಕೊಂಡಿದ್ದ ಎಂದು ಇ.ಡಿ. ಆರೋಪಿಸಿದೆ.
ಯುಎಇಯಲ್ಲಿ ಸಮಿತಿಗಳು!: ಪಿಎಫ್ಐ ಸಂಘಟನೆಯು, ಯುನೈಟೆಡ್ ಅರಬ್ ಎಮಿ ರೇಟ್ಸ್‌ನಲ್ಲಿ (ಯುಎಇ) ಜಿಲ್ಲಾ ಮಟ್ಟದ ಕಾರ್ಯ ಕಾರಿ ಸಮಿತಿಗಳನ್ನು ರಚಿಸ ಲಾಗಿ ತ್ತೆಂದು ಇ.ಡಿ., ತನ್ನ ಆರೋಪ ಪಟ್ಟಿ ತಿಳಿಸಿದೆ. ಒಮನ್, ಕತಾರ್, ಕುವೈತ್, ಬಹ್ರೈನ್, ಸೌದಿ ಅರೇಬಿಯಾ ಮುಂತಾ ದೆಡೆ ಈ ಸಮಿತಿ ಗಳು ನಿಧಿ ಸಂಗ್ರಹಣೆಯ ಕೆಲಸ ಮಾಡುತ್ತಿವೆ. ಅಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯ ಕರ್ತರಿಗೆ ಇಂತಿಷ್ಟೇ ನಿಧಿ ಸಂಗ್ರಹಿಸಬೇಕೆಂದು ಗುರಿ ಗಳನ್ನು (ಟಾರ್ಗೆಟ್) ನೀಡ ಲಾಗುತ್ತಿದೆ. ಅಲ್ಲಿ ರುವ ಸದಸ್ಯರು ನಿಧಿ ಸಂಗ್ರಹಿಸಿ ಅದನ್ನು ಭಾರ ತಕ್ಕೆ ಕಳುಹಿಸಿಕೊಡುತ್ತಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ. ಮೇಲ್ನೋಟಕ್ಕೆ ವಾಣಿಜ್ಯ ವ್ಯವಹಾರ ಎಂದು ಕಾಣುವ ರೀತಿಯಲ್ಲಿ ಈ ನಿಧಿ ಸಂಗ್ರಹಣೆ ನಡೆಯುತ್ತಿತ್ತೆಂದು ಅಧಿಕಾರಿಗಳು ವಿವರಿಸಿದ್ದಾರೆ.
ಹವಾಲಾ ಮಾರ್ಗದಿಂದ ಹಣ: ಈ ಹವಾಲಾ ಮಾರ್ಗ ಗಳಿಂದ ಭಾರತದಲ್ಲಿರುವ ಸುಮಾರು 600 ಬ್ಯಾಂಕ್ ಖಾತೆ ಗಳಿಗೆ, ಅಲ್ಲಿಂದ ಸಂಘಟನೆಯ ಸುಮಾರು 2,600 ಫಲಾನು ಭವಿಗಳಿಗೆ ಹಣ ಜಮಾವಣೆಯಾಗಿದೆ. ಈ ಖಾತೆಗಳ ವಿವರ ಗಳನ್ನು ಪಡೆದಾಗ ಈ ಖಾತೆಗಳು ನಕಲಿ ಯಾಗಿರುವುದು ಪತ್ತೆ ಯಾಗಿದೆ.
ದಾಳಿಗೆ ಸಂಚು: ಪಿಎಫ್ಐ ಸಂಘಟನೆಯು ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದಾಳಿಗೆ ಸಂಚು ರೂಪಿಸಿತ್ತೆಂಬ ಮತ್ತೂಂದು ಆಘಾತಕಾರಿ ವಿಚಾರವನ್ನು ಇ.ಡಿ. ಆರೋಪಪಟ್ಟಿಯಲ್ಲಿ ದಾಖಲಿಸಿದೆ. 2020ರ ಡಿ. 3ರಂದು ಇಂಥದ್ದೊಂದು ದಾಳಿಗೆ ಸಂಚು ರೂಪಿಸಲಾಗಿತ್ತು. ಆದರೆ ಅಷ್ಟರಲ್ಲಿ ಸಂಘಟನೆಯ ಮೇಲೆ ಇ.ಡಿ. ದಾಳಿ ನಡೆದಿದ್ದರಿಂದ ಆ ಸಂಚು ವಿಫಲವಾಯಿತು ಎಂದು ಹೇಳಲಾಗಿದೆ.
ಕರ್ನಾಟಕದ ಹಿಜಾಬ್ ಗಲಭೆಗೂ ಲಿಂಕ್ :
ಪಿಎಫ್ಐ ವಿಭಾಗೀಯ ಅಧ್ಯಕ್ಷ ಅಬ್ದುಲ್ ರಜಾಕ್ ನಿವಾಸದ ಮೇಲೆ ನಡೆಸಲಾಗಿದ್ದ ದಾಳಿಯ ಸಂದರ್ಭದಲ್ಲಿ ಸಿಕ್ಕ ದಾಖಲೆಗಳ ಪ್ರಕಾರ, 151 ವಿವಿಧ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಪಿಎಫ್ಐ ತೀರ್ಮಾನಿಸಿತ್ತು. ಇದರಲ್ಲಿ ಪಿಎಫ್ಐ ಲಾಂಛನವನ್ನು ಧರಿಸುವುದು ಪ್ರತಿಭಟನೆಯ ಒಂದು ಮಾದರಿಯನ್ನಾಗಿ ದಾಖಲಿಸಲಾಗಿತ್ತು. ಕರ್ನಾಟಕದ ಹಿಜಾಬ್ ಗಲಭೆಯಲ್ಲಿ ಅನುಸರಿಸಲಾದ ಪ್ರತಿಭಟನ ಶೈಲಿಯನ್ನು ಇದು ಹೋಲುತ್ತದೆ ಎಂದು ಇ.ಡಿ. ತಿಳಿಸಿದೆ.
ಬೆಂಗಳೂರು ಗಲಭೆ ಆರೋಪಿಗೆ 5 ಲಕ್ಷ ರೂ. :
ಪಿಎಫ್ಐನ ಸೋದರ ಸಂಘಟನೆಯಾದ ಎಸ್‌ಡಿ ಪಿಐನ ನಾಯಕ ಖಲೀಂ ಪಾಷಾಗೂ, ಚೀನ ಮೂಲದ “ಜಂಪ್‌ಮಂಕಿ ಪ್ರೊಮೋಶನ್ ಇಂಡಿಯಾ’ ಸಂಸ್ಥೆಯಿಂದ 5 ಲಕ್ಷ ರೂ. ದೇಣಿಗೆ ಬಂದಿತ್ತು. 2020ರಲ್ಲಿ ನಡೆದಿದ್ದ ಬೆಂಗಳೂರು ಕೆಜಿ ಹಳ್ಳಿ- ಡಿ.ಜೆ. ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿ ಖಲೀಂ ಪಾಷಾ ಬಂಧಿತನಾಗಿದ್ದಾನೆ.