Advertisement
ಧರ್ಮ ಸಂಘರ್ಷದ ಕಾರಣಕ್ಕೆ ಕಳೆದೆರಡು ದಶಕಗಳಲ್ಲಿ ಇರಾಕ್ನಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಭಾರೀ ಕುಸಿತ ಕಂಡಿದೆ. ಪೋಪ್ ಭೇಟಿ ಮೂಲಕ ದೇಶದಲ್ಲಿ ಕ್ರೈಸ್ತರಿಗೆ ಸುರಕ್ಷಿತವಾಗಿ ನೆಲೆಸಲು ಅಭಯ ಸಿಕ್ಕಂತಾಗಿದೆ. “ಪೋಪ್ ಅವರ ಭೇಟಿಯನ್ನು ಇರಾಕಿಗಳು ತುಂಬು ಹೃದಯದಿಂದ ಸ್ವಾಗತಿಸುತ್ತಿರುವುದು, ಶಾಂತಿ ಮತ್ತು ಸಹಿಷ್ಣುತೆಯ ಸಂಕೇತ’ ಎಂದು ಇರಾಕ್ ವಿದೇಶಾಂಗ ಸಚಿವ ಫವಾದ್ ಹುಸ್ಸೇನ್ ಮೆಚ್ಚುಗೆ ಸೂಚಿಸಿದ್ದಾರೆ.
“ಧಾರ್ಮಿಕ ಅಲ್ಪಸಂಖ್ಯಾತರ ಮೌಲ್ಯಗಳನ್ನು ಇರಾಕಿ ಪ್ರಜೆಗಳು ಗೌರವಿಸಬೇಕು. ಅಲ್ಪಸಂಖ್ಯಾತರನ್ನು ಹೊರಗಟ್ಟುವ ಬದಲು, ಅವರನ್ನು ಅಮೂಲ್ಯ ಸಂಪತ್ತು ಎಂದು ಪರಿಗಣಿಸಿ ಸಂರಕ್ಷಿಸಲು ಮುಂದಾಗಬೇಕು’- ಇದು ಪೋಪ್ ಫ್ರಾನ್ಸಿಸ್, ಇರಾಕಿಗಳಿಗೆ ಹೇಳಿದ ಬುದ್ಧಿಮಾತು!
“ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮೀರಿ ನೋಡಿದಾಗ, ಇತರ ಜನಾಂಗದ ಸದಸ್ಯರನ್ನೂ ನಮ್ಮ ಕುಟುಂಬದವರೆಂದು ಪರಿಗಣಿಸಿದಾಗ ಮಾತ್ರವೇ ರಾಷ್ಟ್ರವನ್ನು ಮರುಕಟ್ಟಲು ಸಾಧ್ಯ. ಮುಂದಿನ ಪೀಳಿಗೆ ಸುಖ-ಶಾಂತಿಯಿಂದ ಬದುಕಲೂ ಈ ನೀತಿ ಅಳವಡಿಕೆ ಅತ್ಯವಶ್ಯ’ ಎಂದು ತಿಳಿ ಹೇಳಿದರು.