ರೋಮ್: ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶ್ವಾಸಕೋಶದ ಸೋಂಕಿನ ಕಾರಣ ರೋಮ್ ಆಸ್ಪತ್ರೆಗೆ ದಾಖಲಾಗಿದ್ದರು.
ಫ್ರಾನ್ಸಿಸ್(86) ಅವರು ಯುವಕರಾಗಿದ್ದಾಗ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದರು. ಆಗ ಅವರ ಒಂದು ಶ್ವಾಸಕೋಶವನ್ನು ತೆಗೆದುಹಾಕಲಾಗಿತ್ತು. ಉಸಿರಾಟ ತೊಂದರೆ ಕಾಣಿಸಿದ್ದರಿಂದ ಬುಧವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಅವರು ಪತ್ರಿಕೆ ಓದುತ್ತಿದ್ದಾರೆ, ಆಹಾರವನ್ನು ಸೇವಿಸಿದ್ದಾರೆ.
ಇನ್ನೂ ಕೆಲವು ದಿನಗಳು ಅವರು ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ ಎಂದು ವ್ಯಾಟಿಕನ್ ಮೂಲಗಳು ತಿಳಿಸಿವೆ.