Advertisement

Paris ಒಲಿಂಪಿಕ್ಸ್‌ಗೆ ಸೋಕಿದ ಕೋವಿಡ್‌ ಸೋಂಕು: ಮೊದಲ ಪ್ರಕರಣ ಪತ್ತೆ

10:08 PM Jul 23, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮೊದಲ ಕೋವಿಡ್‌-19 ಪ್ರಕರಣ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾದ ವಾಟರ್‌ ಪೋಲೊ ತಂಡದ ಆಟಗಾರ್ತಿಯೊಬ್ಬರ ಫ‌ಲಿತಾಂಶ ಪಾಸಿಟಿವ್‌ ಬಂದಿದೆ. ಆಸೀಸ್‌ ಒಲಿಂಪಿಕ್ಸ್‌ ತಂಡದ ಮುಖ್ಯಸ್ಥೆ ಅನ್ನಾ ಮಿಯರ್ ಇದನ್ನು ತಿಳಿಸಿದ್ದು, ಅಥ್ಲೀಟ್‌ ಹೆಸರನ್ನು ಪ್ರಕಟಿಸಿಲ್ಲ.

Advertisement

ಸೋಂಕಿತ ಕ್ರೀಡಾಪಟು ಜತೆ ಉಳಿದವರನ್ನೂ ಪರೀಕ್ಷಿಸಲಾಗಿದ್ದು, ಯಾರಲ್ಲೂ ಕೋವಿಡ್‌ ದೃಢಪಟ್ಟಿಲ್ಲ. ಉಳಿದವರೆಲ್ಲ ಯೋಜನೆಯಂತೆ ಅಭ್ಯಾಸ ಪ್ರಾಂಭಿಸಿದ್ದಾರೆ.

ಫ್ರಾನ್ಸ್‌ನಲ್ಲಿ ಕೋವಿಡ್‌ ಅಪಾಯದ ಸ್ಥಿತಿಯೇನೂ ಇಲ್ಲ ಎಂಬುದಾಗಿ ಆರೋಗ್ಯ ಸಚಿವ ಫ್ರೆಡರಿಕ್‌ ವ್ಯಾಲೆಟಾಕ್ಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next