Advertisement

ಅತ್ಯಾಚಾರ ಪ್ರಕರಣ : ಜೈಲು ಶಿಕ್ಷೆಗೊಳಗಾಗಿರುವ ಕ್ರೈಸ್ತ ಧರ್ಮಗುರು ಉಚ್ಛಾಟನೆ

09:57 AM Mar 02, 2020 | Hari Prasad |

ತಿರುವನಂತಪುರಂ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾಗಿ ತನ್ನ ಶೂನ್ಯ ಸಹನೆಯನ್ನು ಪ್ರದರ್ಶಿಸಿರುವ ವ್ಯಾಟಿಕನ್ ಅತ್ಯಾಚಾರ ಆರೋಪ ಸಾಬೀತುಗೊಂಡು ಇದೀಗ ಜೈಲುಶಿಕ್ಷೆಯನ್ನು ಅನುಭವಿಸುತ್ತಿರುವ ಕೇರಳದ ಧರ್ಮಗುರುವೊಬ್ಬರನ್ನು ಅವರ ಎಲ್ಲಾ ಧಾರ್ಮಿಕ ಕರ್ತವ್ಯ ಹಾಗೂ ಹಕ್ಕುಗಳಿಂದ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಅವರು ಉಚ್ಛಾಟಿಸಿದ್ದಾರೆ. ಈ ಮಾಹಿತಿಯನ್ನು ಚರ್ಚ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

Advertisement

ಇಲ್ಲಿನ ಮನಾಂತವಾದಿ ಡಯೋಸಿಸ್ ನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಪೋಕ್ಸೋ ನ್ಯಾಯಾಲಯದಲ್ಲಿ ಸಾಬೀತುಗೊಂಡು ಇದೀಗ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಿರಿಯೋ-ಮಲಬಾರ್ ಚರ್ಚ್ ಧರ್ಮಗುರು ರಾಬಿನ್ ವಡಕ್ಕುಂಶ್ಯೇರಿ ಅವರೇ ವ್ಯಾಟಿಕನ್ ನಿಂದ ಉಚ್ಛಾಟನೆಗೊಳಗಾದವರಾಗಿದ್ದಾರೆ.

2017ರಲ್ಲಿ ಈ ಪ್ರಕರಣ ಬೆಳಕಿಗೆ ಬಂದ ದಿನದಂದೇ ರಾಬಿನ್ ಅವರನ್ನು ಧರ್ಮಗುರು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ತಲಶ್ಯೇರಿಯ ಪೋಕ್ಸೋ ನ್ಯಾಯಾಲಯವು ಕಳೆದ ವರ್ಷವಷ್ಟೇ ರಾಬಿನ್ ವಡಕ್ಕುಂಶ್ಯೇರಿ ಅವರಿಗೆ 20 ವರ್ಷದ ಕಠಿಣ ಸೆರೆವಾಸ ಶಿಕ್ಷೆ ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next