Advertisement
2016ರಿಂದ ರಾಜ್ಯದಲ್ಲಿ ಪಿಒಪಿ ಗಣೇಶ ಮಾರಾಟ ಮತ್ತು ಬಳಕೆ ನಿಷೇಧವಾಗಿದ್ದು, ಸಾರ್ವಜನಿಕರಲ್ಲಿ ಪರಿಸರ ಸ್ನೇಹ ಗಣೇಶ ಹಬ್ಬದ ಜಾಗೃತಿ ಹೆಚ್ಚಾಗಿದೆ. ಈ ನಡುವೆಯೂ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕೆಂಬ ಉತ್ಸಾಹವುಳ್ಳ ಯುವಕರು 2016ರಲ್ಲಿ ತಂದಿರುವ ಪಿಒಪಿ ಗಣೇಶ ಮೂರ್ತಿಯನ್ನು ಉತ್ಸವಕ್ಕೆ ಬಳಸುತಿದ್ದಾರೆ.
Related Articles
Advertisement
ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಈ ಉತ್ಸವ ಸಮಿತಿಗಳು ಬೆಂಗಳೂರಿನ ಅತೀ ಹಳೆಯ ಗಣೇಶ ಉತ್ಸವ ಸಮಿತಿಗಳಾಗಿವೆ. ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಇಲ್ಲಿನ ಆಚರಣೆಗಳು ವಿಭಿನ್ನ ಮತ್ತು ಅದ್ದೂರಿಯಾಗಿರುತ್ತವೆ. ಪಿಒಪಿ ಗಣೇಶ ಮೂರ್ತಿ ನಿಷೇಧದ ಬಳಿಕ ಈ ಎಲ್ಲಾ ಉತ್ಸವ ಸಮಿತಿಗಳು ಒಂದೇ ಗಣೇಶ ಮೂರ್ತಿಯನ್ನು ಉತ್ಸವಕ್ಕೆ ಬಳಸುತ್ತಿವೆ. ಬಿಬಿಎಂಪಿಯಿಂದ ಪಿಒಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶ ನೀಡದಿರುವುದು
ಮತ್ತು ಪರಿಸರ ರಕ್ಷಣೆ ಬಗ್ಗೆ ಹೆಚ್ಚಾದ ಜಾಗೃತಿಯಿಂದ ಕ್ರಮೇಣವಾಗಿ ಗಣೇಶ ಮೂರ್ತಿ ಮರು ಬಳಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಶಿವಾಜಿನಗರ ಗಣೇಶ ಉತ್ಸವ ಸಮಿತಿ ಸದಸ್ಯ ಶ್ರೀನಿವಾಸ್. ಟ್ಯಾನೆರಿ ರಸ್ತೆ ಮತ್ತು ಬಂಬೂ ಬಜಾರ್‌ನಲ್ಲೂ ಹಳೆಯ ಗಣೇಶ ಮೂರ್ತಿಗಳನ್ನು ಉತ್ಸವಕ್ಕೆ ಬಳಸಲಾಗುತ್ತಿದೆ. ಇಲ್ಲಿ ಸುಮಾರು 21 ರಿಂದ 23 ಅಡಿಯ ಗಣೇಶ ಮೂರ್ತಿಯನ್ನು ಉತ್ಸವಕ್ಕೆ ಬಳಸಲಿದ್ದು, ಉತ್ಸವದ ಬಳಿಕ ಮೂರ್ತಿಯನ್ನಿರಿಸಲು ದೇವಸ್ಥಾನದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಉತ್ಸವಕ್ಕೊಂದು, ಪೂಜೆಗೊಂದು ಗಣಪ: ಗಣೇಶ ಹಬ್ಬ ಆಚರಣೆ ಬಳಿಕ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವುದು ಪ್ರತೀತಿ. ಅದರಂತೆಯೇ ನೀರಿನಲ್ಲಿ ಮುಳುಗಿಸಲೆಂದೇ ಒಂದು ಸಣ್ಣ ಮಣ್ಣಿನ ಗಣೇಶ ಮೂರ್ತಿಯನ್ನು ಪೂಜೆಗೆ ಬಳಸಲಾಗುತ್ತದೆ. ಇನ್ನು ಅಲಂಕಾರ, ಉತ್ಸವಕ್ಕಾಗಿ ಹಳೆಯ ಪಿಒಪಿ ಗಣೇಶ ಮೂರ್ತಿಯನ್ನು ಬಳಸಲಾಗುತ್ತದೆ.
ಪಿಒಪಿ ಮೂರ್ತಿ ಬಳಸಲು ಕಾರಣವೇನು?: ಮಣ್ಣಿನ ಗಣೇಶ ಮೂರ್ತಿಯನ್ನು ಗರಿಷ್ಠ ಐದು ದಿನಗಳ ಕಾಲ ಕೂರಿಸಬಹುದು, ಇದಕ್ಕಿಂತ ಹೆಚ್ಚು ಕಾಲ ಕೂರಿಸಿದರೆ ಮೂರ್ತಿ ಬಿರುಕು ಬಿಡುತ್ತದೆ. ಮಣ್ಣಿನ ಮೂರ್ತಿಗೆ ಹೆಚ್ಚಿನ ತೂಕದ ಲೈಟಿಂಗ್ಸ್ ಮತ್ತು ಹೂವುಗಳಿಂದ ಅಲಂಕಾರ ಮಾಡಲು ಸಾಧ್ಯವಿಲ್ಲ.
ಬಣ್ಣ ಹೆಚ್ಚು ಕಾಲ ಉಳಿಯುವುದಿಲ್ಲ, ಸಾಗಾಟದ ವೇಳೆ ಮೂರ್ತಿ ಹಾಳಾಗುವ ಸಾದ್ಯತೆ ಹೆಚ್ಚಿದೆ ಮತ್ತು ಹೆಚ್ಚು ಭಾರ ಹೊಂದಿರುತ್ತದೆ. ಇದಲ್ಲದೇ ಐದು ಅಡಿಗಿಂತ ಗೊಡ್ಡ ಗಾತ್ರದ ಮೂರ್ತಿಗಳನ್ನು ಮಣ್ಣಿನಿಂದ ನಿರ್ಮಿಸಲು ಕಷ್ಟ ಎಂಬ ಕಾರಣಕ್ಕೆ ಬಹುತೇಕ ಮಂದಿ ಪಿಒಪಿ ಗಣೇಶ ಮೂರ್ತಿಯನ್ನೇ ಬಳಸಲು ಬಯಸುತ್ತಾರೆ.
* ಲೋಕೇಶ್ ರಾಮ್