Advertisement
ಬೇಕಾಗುವ ಸಾಮಗ್ರಿಹಿಟ್ಟಿನ ತಯಾರಿಗೆ
ಅಕ್ಕಿ ಒಂದು ಕಪ್
ಉದ್ದಿನಬೇಳೆ ಅರ್ಧ ಕಪ್
ನೆನೆಸಲು ನೀರು ಅರ್ಧ ಕಪ್
ಉಪ್ಪು ಅರ್ಧ ಟೀಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
ಹೂರಣದ ತಯಾರಿಗೆ
ಕಡಲೆಬೇಳೆ ಒಂದು ಕಪ್
ಬೆಲ್ಲ ಒಂದು ಕಪ್
ಏಲಕ್ಕಿ ಅರ್ಧ ಟೀಸ್ಪೂನ್
ಜಾಯಿಕಾಯಿ ಹುಡಿ ಕಾಲು
ಟೀ ಸ್ಪೂನ್ (ಬೇಕಾದಲ್ಲಿ)
ಕಾಯಿತುರಿ ಕಾಲು ಕಪ್ (ಬೇಕಾದಲ್ಲಿ)
ಕರಿಯಲು ಎಣ್ಣೆ
ತುಪ್ಪ ಒಂದು
ಟೇಬಲ್‌ಸ್ಪೂನ್
ಒಂದು ಕಪ್ ಅಕ್ಕಿ ಹಾಗೂ ಅರ್ಧ ಕಪ್ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು ರಾತ್ರಿ ನೀರಿನಲ್ಲಿ ನೆನೆಸಿ. ಮರುದಿನ ನೀರಿನಿಂದ ಅದನ್ನು ತೆಗೆದು ದೋಸೆ ಹಿಟ್ಟಿ ಹದಕ್ಕೆ ರುಬ್ಬಿಕೊಳ್ಳಿ. ಅನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕದಲ್ಲಿಡಿ. ಹೂರಣದ ತಯಾರಿ
ಒಂದು ಕಪ್ ಕಡಲೆಬೇಳೆಯನ್ನು ತೊಳೆದು ಕುಕ್ಕರಿನಲ್ಲಿ ಬೇಯಿಸಿ (ಬೇಕಾದಲ್ಲಿ ಕಡಲೆಬೇಳೆ ನೆನೆಸಿಟ್ಟುಕೊಳ್ಳಬಹುದು). ಕುಕ್ಕರ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ 6 ರಿಂದ 7 ಕೂಗು ಹಾಕಿಸಿಕೊಳ್ಳಬೇಕು. ಬೇಳೆ ತಣ್ಣಗಾದ ಅನಂತರ ಮಿಕ್ಸಿಯಲ್ಲಿ ಒಂದು ಕಪ್ ಬೆಲ್ಲ, ಅರ್ಧ ಟೀಸ್ಪೂನ್ ಜಾಯಿಕಾಯಿಹುಡಿ, ಅರ್ಧ ಟೀಸ್ಪೂನ್ ಏಲಕ್ಕಿ ಹುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಸಾಧ್ಯವಾಗದೇ ಇದ್ದರೆ 2ರಿಂದ 3 ಟೇಬಲ್‌ಸ್ಪೂನ್ ನೀರು ಸೇರಿಸಿಕೊಳ್ಳಬಹುದು.
Related Articles
ಒಂದು ಪ್ಯಾನ್‌ಗೆ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಕಡಲೆಬೇಳೆ ಹಾಗೂ ಬೆಲ್ಲದ ಮಿಶ್ರಣ ಹಾಕಿ ಇದಕ್ಕೆ ಕಾಲು ಕಪ್ ತೆಂಗಿನತುರಿ ಸೇರಿಸಿಕೊಳ್ಳಬಹುದು.. ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಹುರಿದುಕೊಳ್ಳಿ. ಮಿಶ್ರಣ ಪ್ಯಾನ್‌ನ ಬದಿ ಬಿಡುತ್ತಾ ಬಂದರೆ ಸಿದ್ಧವಾಗಿದೆ ಎಂದರ್ಥ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ಅನಂತರ ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಒಣಗದಂತೆ ಮುಚ್ಚಿಡಿ.
Advertisement
ಕರಿಯಲು ಎಣ್ಣೆಯನ್ನು ಸಿದ್ಧಪಡಿಸಿಕೊಂಡು ಗ್ಯಾಸ್ ಮೇಲೆ ಇಡಿ. ಎಣ್ಣೆ ಬಿಸಿಯಾದಾಗ ಮಿಶ್ರಣದ ಉಂಡೆಯನ್ನು ಮೊದಲೇ ಸಿದ್ಧಪಡಿಸಿದ ಅಕ್ಕಿ ಹಾಗೂ ಉದ್ದಿನ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಹೀಗೆ ಮಾಡಿದರೆ ರುಚಿ ರುಚಿಯಾದ, ಗರಿಗರಿಯಾದ ಪೂರ್ಣಮ್ ಬೂರೆಲು ಸವಿಯಲು ಸಿದ್ಧ.
(ಸಂಗ್ರಹ)ರಮ್ಯಾ ಎಂ.ಕೆ.