Advertisement

ಕಷ್ಟಪಟ್ರೆ ನೀವೂ ಈ ರೀತಿ  ಫೋಟೋ ತೆಗೀಬಹುದು…

12:00 PM Sep 09, 2017 | |

“ಸಾರ್‌, ಒಳಗೆ ಬರಬಹುದಾ?’ ಜೊತೆಗಿದ್ದ ಮೇಷ್ಟ್ರು ಕೇಳಿದರು.  ಆ ಅಂದಿತು ದನಿ.  ಮೇಷ್ಟ್ರ ಜೊತೆಗೆ ಒಳಗೆ ಕಾಲಿಟ್ಟರೆ ಟೇಬಲ್‌ ಪೂರ್ತಿ ಹಕ್ಕಿಗಳು ಹಾರಾಡುತ್ತಿವೆ. ಅಷ್ಟೊಂದು ಚಿತ್ರಗಳು.  ತುಂಬು ಗಡ್ಡದ ವ್ಯಕ್ತಿ ಕೂತಿದ್ದರು.  ಆ ತನಕ ತೇಜಸ್ವಿ ಅನ್ನೋ ಹೆಸರನ್ನು ಪದೇ ಪದೇ ಪುಸ್ತಕದಲ್ಲಿ ಓದಿದ್ದೆ ಅಷ್ಟೇ. ಆವತ್ತೇನಾಗಿತ್ತು ಅಂದರೆ. ನಮ್ಮ ಮೇಷ್ಟ್ರು ತೇಜಸ್ವಿ ಸಂದರ್ಶನಕ್ಕೆ ಅಪಾಯಿಂಟ್‌ಮೆಂಟ್‌ ತಗೊಂಡಿದ್ದರು. ಆ ಸಲುವಾಗಿ ಮೂಡಿಗೆರೆಯ ಅವರ ಮನೆಗೆ ಹೋದೆವು.  ನಿಜ ಹೇಳಬೇಕೆಂದರೆ, ಫೋಟೋಗ್ರಫಿ ಅಂದರೇನು, ಅದನ್ನು ಹೇಗೆಲ್ಲಾ ಬಳಸಿ ಹಕ್ಕಿ ಸೆರೆಹಿಡಿಯಬಹುದು ಅನ್ನೋ ಕಲ್ಪನೆಯೂ ಅವತ್ತಿನ ತನಕ ನನಗೆ ಇರಲಿಲ್ಲ.  ಟೇಬಲ್‌ ಮೇಲಿದ್ದ ಹಕ್ಕಿ ಫೋಟೋಗಳನ್ನು ನೋಡಿ,  “ಇವೆಲ್ಲಾ ನಮ್ಮ ಕೈಲಿ ತೆಗೆಯೊಕಾಗಲ್ಲ’ ಅಂದುಬಿಟ್ಟೆ.   

Advertisement

“ಅಲ್ರೀ, ನಾನೂ ನಿಮ್ಮಂತೆ ಮನುಷ್ಯ. ಕಷ್ಟಪಟ್ರೆ ನೀವು ಕೂಡ ಈ ರೀತಿ ಫೋಟೋ ತೆಗೀಬಹುದು’ ಅಂದರು ತೇಜಸ್ವಿ. 

ಸಂದರ್ಶನ ಮುಗೀತು, ಮನೆಗೆ ಬಂದ ಮೇಲೆ ಕನಸಿನಲ್ಲೂ ಕಾಡಿದ್ದು ತೇಜಸ್ವಿ, ಅವರ ಫೋಟೋಗಳು.  ಆಮೇಲೆ, ಪಕ್ಷಿ ಮತ್ತು ಕೀಟ ಜಗತ್ತಿನೆಡೆಗೆ ಬೆರಗಿನಿಂದ  ನೋಡಲಾರಂಭಿಸಿದುದು ತೇಜಸ್ವಿಯವರಿಂದ. ಶಾಲೆಯಲ್ಲಿ ವಿಜಾnನ ಪುಸ್ತಕಗಳಿಂದಲೂ ಮಾಡಲಾಗದ ಕೆಲಸವನ್ನು ಅವರ ಪುಸ್ತಕಗಳು ಮಾಡಿದವು. ಅದರಿಂದ ಸ್ಫೂರ್ತಿ ಹೊಂದಿ ನಾನು ಹಕ್ಕಿ ವೀಕ್ಷಣೆ ಮಾಡಿದೆ. ಕ್ಯಾಮರ ಕೊಳ್ಳುವ ಆಸೆ ಶುರುವಾಯಿತು. ಆದರೆ ಕೈಯಲ್ಲಿ ದುಡ್ಡಿಲ್ಲ. ಪಿಗ್ಮಿ ಕಟ್ಟಿ ಒಂದಷ್ಟು ದುಡ್ಡು ಹೊಂದಿಸಿ, “ಸಾರ್‌, ಕ್ಯಾಮರ ಕೊಳ್ಳಬೇಕೆಂದಿದ್ದೇನೆ, ಯಾವುದನ್ನು ಕೊಳ್ಳೋದು?’ ಅಂತ ಪತ್ರ ಬರೆದೆ. ಅವರದಕ್ಕೆ ಉತ್ತರಿಸಿ ಪ್ರೇರೇಪಿಸಿದ್ದರು.

“ಪಕ್ಷಿ ಛಾಯಾಗ್ರಹಣ ಅಂತಂದ್ರೆ ಸಂಪೂರ್ಣವಾಗಿ ಪರಿಸರದಲ್ಲಿ ಕಳೆದುಹೋಗಬೇಕು, ಕೈಲಿರೋ ಕ್ಯಾಮರಾನೂ ಮರೆತುಹೋಗಬೇಕು’ ಅಂತ ಹೇಳುತ್ತಿದ್ದರು ತೇಜಸ್ವಿ.  ಆಮೇಲೆ   “ಈಗ ಮತ್ತೆ ನನ್ನ ನಿಲುವು ಬದಲಾಯಿಸ್ಕೊಂಡಿದೀನಿ. ಯಾಕೆ ಅಂದ್ರೆ ಲೀನವಾದ್ರೂ ಬರೋದಿಲ್ಲ ಕಣ್ರೀ…ಯು ನೀಡ್‌ ಸೂಪರ್‌ ಹ್ಯೂಮನ್‌ ಪೇಷನ್ಸ್‌. ಬೆಳಗ್ಗಿಂದ ಸಾಯಂಕಾಲದವರೆಗೆ ಕಷ್ಟಪಟ್ಟು, ಏನೂ ಸಾಧನೆ ಮಾಡದೆ ಮತ್ತೆ ಅದೇ ನೆಮ್ಮದಿಯಲ್ಲಿ ಮನೆಗೆ ಬಂದು ನಿದ್ದೆ ಮಾಡೋದಿಕ್ಕೆ ತಯಾರಿದ್ರೆ ಮಾತ್ರ ಆಗುತ್ತೆ… ಹಿಂಗ್‌ ಹೋಗಿ ಛಕ್ಕಂತ ಹಕ್ಕಿ 

ಫೋಟೊ ತಕ್ಕೊಂಡು ಬಂದ್‌ಬಿಡಬಹುದು ಅಂತ ತಿಳ್ಕೊಂಡಿದ್ರೆ ಅದು ತಪ್ಪು’ ಅಂದರು.

Advertisement

ಚಿತ್ರಕಲಾ ಪರಿಷತ್‌ನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಫೋಟೊ ಎಕ್ಸಿಬಿಷನ್‌ ನಡೆದಿತ್ತು.  ಅಲ್ಲಿ ತೇಜಸ್ವಿ  ಹಕ್ಕಿ ಛಾಯಾಗ್ರಹಣದ ಸೂಕ್ಷ್ಮಗಳ ಬಗ್ಗೆ ಮಾತನಾಡಿದ್ದರು.

“ಒಂದು ಕಲಾಕೃತಿಯ ಹಿಂದೆ ಅತ್ಯಂತ ಕಷ್ಟಪಟ್ಟು, ತಾಳ್ಮೆಯಿಂದ ಮಾಡಿರೋ ಕೆಲಸ 99.5 ಪರ್ಸೆಂಟ್‌ ಇರುತ್ತೆ. ಇನ್ನೊಂದು ಪಾಯಿಂಟ್‌ಫೈವ್‌ ಪರ್ಸೆಂಟ್‌ ಅವನಿಗೆ ಸ್ಫೂರ್ತಿನೊ ಅಥವಾ ಇನ್ನೊಂದೋ ಸಹಾಯ ಮಾಡಿರುತ್ತಷ್ಟೇ. ಶ್ರೇಷ್ಠ ಕಲಾಕೃತಿಗಳನ್ನ ನೋಡಾªಗ ಯಾವ ಕಾರಣಕ್ಕಾಗಿ ಇವು ಶ್ರೇಷ್ಠ ಅಂತ ನನಗನ್ನಿಸುತ್ತಿದೆ ಅಂತ ಅನ್ನೋದನ್ನ ಅರ್ಥ ಮಾಡಿಕೋಬೇಕು. ನಮ್ಮದನ್ನ ಅಷ್ಟು ಶ್ರೇಷ್ಠ ಮಾಡೋದು ಹೇಗೆ ಅಂತ ಕಷ್ಟಪಟ್ಟು ಯೋಚೆ° ಮಾಡ್ಬೇಕು. ಮೂರು ನಾಲ್ಕು ಐದು ಮಾಡೆಲ್‌ ಮಾಡಿ ತುಂಬಾ ಕ್ರಿಟಿಕಲ್‌ ಆಗಿ ನೋಡಬೇಕು. ಕಸದ ಬುಟ್ಟಿ ರೆಡಿ ಇಟ್ಕಂಡು,  ಕುಂದುಕೊರತೆ ಇದೆ ಅನ್ಸಿದ್ರೆ ಬಿಸಾಕಬೇಕು. ಗ್ಲೋಬಲ್‌ ಸ್ಟಾಂಡರ್ಡ್‌ಗೆ ಕಂಪೇರ್‌ ಮಾಡಿ ನಮ್ಮದು ಸೆಕೆಂಡ್‌ ರೇಟ್‌ ಆದ್ರು ಪರ್ವಾಗಿಲ್ಲ. ಯು ಹ್ಯಾವ್‌ ಟು ಬಿ ಎಕ್ಸ್‌ಟ್ರೀಮ್‌ಲಿ ಕ್ರಿಟಿಕಲ್‌. ಸ್ಫೂರ್ತಿ, ಏಕಾಗ್ರತೆ, ತನ್ಮಯತೆ ಇವೆಲ್ಲಾ ಅಗತ್ಯ ಇದೆ. ಅವುಗಳಿಂದ ಪ್ರಯೋಜನಾನೇ ಇಲ್ಲ, ನಮ್ಮ ಯಂಗ್‌ಸ್ಟರ್‌ಗಳೆಲ್ಲಾ ಮೈಗಳ್ಳರು, ಎಲ್ಲೋ ಒಂದ್‌ ಒಳದಾರಿ ಇದೆ, ಅದ್ಭುತಗಳನ್ನ ಸಾಧಿಸೋಕೆ ಅಂತ ಕೆಲಸ ಮಾಡದನ್ನೇ ನಿಲ್ಲಿಸಿಬಿಟ್ಟು ಕಾಲ್ದಾರಿ ಹುಡುಕ್ತಾ ಓಡಾಡ್ತಾರೆ. ಅದ್ರಿಂದ ನಾನು ಈ ವಿಷಯ ಹೇಳ್ತಾ ಇರೋದು’ ಎಂದು ಈಗಿನ ಯುವಕರಿಗೂ ಕಿವಿಮಾತು ಹೇಳಿದ್ದು ಈಗಲೂ ನೆನಪಿದೆ. 

ಚಿತ್ರಗಳಲ್ಲಿ ನೆರಳು, ಬೆಳಕು, ಸಂಯೋಜನೆ, ಮನಸ್ಸನ್ನು ಸೆರೆ ಹಿಡಿದಿಡುವ ಅಂಶಗಳು ಬೇಕೆನ್ನುವಂತೆ ತೇಜಸ್ವಿಯವರು ಹಕ್ಕಿಯ ಭಾವವನ್ನು ಹಿಡಿದಿಡಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಸಫ‌ಲತೆ ಪಡೆಯುವವರೆಗೂ ಪ್ರಯತ್ನಿಸುತ್ತಿದ್ದರು.

ಕಪ್ಪು ಬಿಳುಪು ಛಾಯಾಗ್ರಹಣ ಮಾಡುತ್ತಾ ಮನೆಯಲ್ಲಿಯೇ ಸಂಸ್ಕರಣೆ ಮಾಡಿಕೊಳ್ಳುತ್ತಿದ್ದ ತೇಜಸ್ವಿಯವರು ಕಲರ್‌ ಫೋಟೊಗ್ರಫಿ ಬರುತ್ತಿದ್ದಂತೆಯೇ ಲ್ಯಾಬ್‌ಗ ತೆಗೆದುಕೊಂಡು ಹೋಗಿ ಸಂಸ್ಕರಣೆ ಮಾಡಿಸಬೇಕೆಂದು, ಅದರಿಂದ ಸಮಯ ವ್ಯರ್ಥವಾಗುತ್ತದೆಂದು ಕ್ಯಾಮರಾದಿಂದ ದೂರವುಳಿದುಬಿಟ್ಟರು. ನಂತರ ಡಿಜಿಟಲ್‌ ತಂತ್ರಜಾnನ ಬರುತ್ತಿದ್ದಂತೆಯೇ ಪುನಃ ಛಾಯಾಗ್ರಹಣವನ್ನು ಪ್ರಾರಂಭಿಸಿದರು. ಆಗ ಹೊಸದಾಗಿ ಬಂದಿದ್ದ ಫ್ಲಾಪಿ ಡಿಸ್ಕ್ ಹಾಕುವ ಕ್ಯಾಮೆರಾವನ್ನು ತರಿಸಿ ಹಕ್ಕಿಗಳ ಛಾಯಾಗ್ರಹಣವನ್ನು ಪ್ರಾರಂಭಿಸಿದರು. ನಂತರ ಪ್ರಿಸ್ಯೂಮರ್‌ ರೀತಿಯ ಡಿಜಿಟಲ್‌ ಕ್ಯಾಮೆರಾ ತರಿಸಿ ಅದರಲ್ಲಿ ಛಾಯಾಗ್ರಹಣ ಮಾಡುತ್ತಿದ್ದರು. ಡಿಜಿಟಲ್‌ ತಂತ್ರಜಾnನ ಬಂದ ಪ್ರಾರಂಭಿಕ ಹಂತದಲ್ಲಿ ಕ್ಯಾಮೆರಾಗಳ ಬೆಲೆ ದುಬಾರಿಯಾಗಿತ್ತು. ಡಿಜಿಟಲ್‌ ಎಸ್‌.ಎಲ್‌.ಆರ್‌ ಬರುವಷ್ಟರಲ್ಲಿ ತೇಜಸ್ವಿಯವರು ನಮ್ಮನ್ನಗಲಿದ್ದರು.  ನಂತರದ ದಿನಗಳಲ್ಲಿ ಕ್ಯಾಮೆರಾ ತಂತ್ರಜಾnನದಲ್ಲಿ ತ್ವರಿತವಾಗಿ ಬದಲಾವಣೆ ಕಂಡಿತು.  ಈಗ ತಂತ್ರಜಾnನದ ಸಹಾಯದಿಂದ ಬಹಳಷ್ಟು ಮಂದಿ ಹವ್ಯಾಸಿ ಛಾಯಾಗ್ರಾಹಕರಾಗಿದ್ದಾರೆ. ದಶಕಗಳ ಕಾಲ ಜೀವವೈವಿಧ್ಯ ಹಾಗೂ ಹಕ್ಕಿಗಳನ್ನು ಅಧ್ಯಯನ ಮಾಡಿದ್ದ ತೇಜಸ್ವಿಯವರಿಗೆ ಈಗಿನ ಕ್ಯಾಮೆರಾ ಸಿಗಬೇಕಿತ್ತು. ಹಕ್ಕಿಗಳ ಭಾವಕೋಶವನ್ನೇ ಅವರು ತೆರೆದು ತೋರಿಸುತ್ತಿದ್ದರು.

ಈಗ, ಫೋಟೋಗ್ರಫಿಯಲ್ಲಿ ತೊಡಗಿಸಿಕೊಂಡಿರುವ ನನಗೆ ನನ್ನ ಪರಿಶ್ರಮ, ತಾಳ್ಮೆಯ ಫ‌ಲ ದೊರಕುತ್ತಿದೆ. ಅದರಿಂದಾಗುತ್ತಿರುವ ಆನಂದ, ಹೊಂದುತ್ತಿರುವ ಜಾnನಕ್ಕೆ ಬೆಲೆಕಟ್ಟಲಾರೆ!ಎಲ್ಲದಕ್ಕೂ ಸ್ಫೂರ್ತಿ ತೇಜಸ್ವಿ. 

ಡಿ.ಜಿ.ಎಂ

Advertisement

Udayavani is now on Telegram. Click here to join our channel and stay updated with the latest news.

Next