Advertisement
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಬೇರಾರೂ ಟೆಂಡರ್ ಸಲ್ಲಿಸದ ಕಾರಣ ಗುತ್ತಿಗೆಗೆ ಅವಕಾಶ ನೀಡಬೇಕಾಗಿ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲಿಸಲಾಗು ವುದು ಎಂದರು. ಯಾರೂ ಮಾಡು ವುದಿಲ್ಲವೆಂದು ಇಂಥ ಕಳಪೆ ಕಾಮಗಾರಿ ನಡೆಸುವವರಿಗೆ ಕೊಡುವುದೇ ಎಂದು ಸುರೇಶ್ ಪ್ರಭು ಪ್ರಶ್ನಿಸಿದರು. ಎಂಜಿನಿ ಯರ್ ಪದ್ಮನಾಭ ಅವರು ಥರ್ಡ್ ಪಾರ್ಟಿ ಎಂಜಿನಿಯರ್ ಮೂಲಕ ವರದಿ ಪಡೆದು ಕ್ರಮ ಜರಗಿಸುವುದಾಗಿ ತಿಳಿಸಿದರು.
Related Articles
Advertisement
ಮಾನ್ಸೂನ್ ಗ್ಯಾಂಗ್ ಬರುವುದೇ ತಡವಾಗಿ, ಹಾಗಾಗಿ ಮಳೆ ಗಾಲದ ಮುನ್ನ ನಡೆಸಬೇಕಾದ ಕೆಲಸ ಮಾಡಿಸಲಾಗುತ್ತಿಲ್ಲ ಎಂದು ಅಧ್ಯಕ್ಷರು ಹೇಳಿದಾಗ ಪಿ.ಕೆ. ಥಾಮಸ್ 15 ವರ್ಷ ಗಳಿಂದಲೂ ಹೀಗಾಗುತ್ತಿದೆ ಎಂದರು.
ಮೂಡುಬಿದಿರೆ ಮೆಸ್ಕಾಂನ್ನು ಸೆಕ್ಷನ್ 2 ಅಥವಾ 3ಗೆ ಏರಿಸಲು ಈಗಾಗಲೇ ಪ್ರಸ್ತಾವನೆ ಹೋಗಿದ್ದರೂ ಕಾರಣಾಂತರದಿಂದ ಎಲ್ಲೋ ಮಿಸ್ ಆಗಿದೆ. ಈ ಬಗ್ಗೆ ತಾನು ಮೆಸ್ಕಾಂ ಎಂಡಿಯವರ ಗಮನ ಸೆಳೆದಿರುವುದಾಗಿ ಅಧ್ಯಕ್ಷರು ತಿಳಿಸಿದರು. ಚರಂಡಿ ಹೂಳೆತ್ತುವುದನ್ನು ತುರ್ತಾಗಿ ನಡೆಸಿ, ವಿದ್ಯಾಗಿರಿಯ ಸ್ವಾಗತ ಫಲಕ ಸರಿಪಡಿಸಿ ಎಂದು ಶ್ವೇತಾ ಪ್ರವೀಣ್ ಒತ್ತಾಯಿಸಿದರು.
ಕಾರ್ಮಿಕರಿಗೆ ಬಟ್ಟೆ
ಧಾರ್ಮಿಕ ಸಂಘಟನೆಯವರು ಪುರಸಭೆ ಕಾರ್ಮಿಕರಿಗೆ ಪುರಸಭೆ ಮೀಟಿಂಗ್ ಹಾಲ್‌ನಲ್ಲಿ ಬಟ್ಟೆ ವಿತರಿಸಿದ ಕಾರ್ಯಕ್ರಮ ಎಷ್ಟು ಸರಿ, ಈ ಸಭಾಂಗಣವನ್ನು ಹೀಗೆ ಅನ್ಯ ಸಂಘಟನೆಗಳಿಗೆ ನೀಡಬಹುದೇ ಎಂದು ಖಾರವಾಗಿ ಪ್ರಶ್ನಿಸಿದ ಕೊರಗಪ್ಪ ಅವರು ಹೀಗೆ ವಿತರಿಸಿದ ಬಟ್ಟೆಯೂ ಕಳಪೆಯಾಗಿದೆ, ಪರಿಶಿಷ್ಟ ಜಾತಿ ಪಂಗಡದವರನ್ನು ಅಪಮಾನ ಮಾಡಿದಂತಾಗಿದೆ ಎಂದು ಆರೋಪಿಸಿ, ಪುರಸಭೆಯವರು ನೋಡಿಕೊಳ್ಳಬೇಕಿತ್ತು ಎಂದಾಗ ಅಧಿಕಾರಿಗಳು, ಪುರಪಿತೃಗಳಿಗೆ ತುಸು ಮುಜುಗರ ಉಂಟುಮಾಡಿದಂತಾಯಿತು. ಎಲ್ಲರನ್ನೂ ಕರೆಯಬೇಕಿತ್ತು ಎಂದು ಸುರೇಶ್ ಪ್ರಭು ಹಾಗೂ ಸ್ವಪಕ್ಷದವರೇ ಆದ ದಿನೇಶ್ ಕುಮಾರ್ ತಾಕೀತು ಮಾಡಿದರು. ಒಂದು ಹಂತದಲ್ಲಿ ಉಪಾಧ್ಯಕ್ಷೆ ಸುಜಾತಾ ಶಶಿಧರ ಮತ್ತು ಕೊರಗಪ್ಪ ನಡುವೆ ತೀವ್ರ ವಾಗ್ಯುದ್ಧವೇ ನಡೆದು ಕೊನೆಗೆ ಪಿ.ಕೆ. ಥಾಮಸ್ ಆಗಿದ್ದು ಆಗಿದೆ, ಹೀಗಾಗದಂತೆ ನೋಡಿಕೊಳ್ಳಿ ಎಂದರು, ಅಧ್ಯಕ್ಷರೂ ಹೀಗಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.ಫೆಬ್ರವರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಳೆಗಾಲ ಬರುವುದಕ್ಕಿಂತ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಇನ್ನೂ ಜಾರಿಗೆ ತಂದಿಲ್ಲವೇಕೆ ಎಂದು ಸುರೇಶ್ ಪ್ರಭು ತಮ್ಮ ಕಾಳಜಿ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿಗೆ ಸದಸ್ಯರನ್ನು ಆರಿಸಲಾಯಿತು.
ಚರ್ಚೆಗಳಲ್ಲಿ ನಾಗರಾಜ ಪೂಜಾರಿ,ರೂಪಾ ಶೆಟ್ಟಿ ,ಶಕುಂತಳಾ ದೇವಾಡಿಗ, ನವೀನ್ ಶೆಟ್ಟಿ ಮೊದಲಾದ ಸದಸ್ಯರು ಪಾಲ್ಗೊಂಡಿದ್ದು ಮುಖ್ಯಾಧಿಕಾರಿ ಇಂದು ಎಂ., ಪ್ರಬಂಧಕ ಗೋಪಾಲ ನಾೖಕ್ ಮತ್ತು ಇತರ ಸಿಬಂದಿ ಉಪಸ್ಥಿತರಿದ್ದರು.