Advertisement

ಕಳಪೆ ಬಿತ್ತನೆ ಬೀಜ; ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

09:33 AM Jun 07, 2020 | Suhan S |

ಕಲಘಟಗಿ: ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಿಂದ ನೀಡಲ್ಪಟ್ಟ ಸೋಯಾ ಬೀಜಗಳು ಕಳಪೆ ಮಟ್ಟದ್ದಾಗಿದ್ದು, ಬಿತ್ತನೆ ಮಾಡಿದ ಬೀಜಗಳು ಇದುವರೆಗೂ ಮೊಳಕೆ ಒಡೆದಿಲ್ಲ ಎಂದು ಆಪಾದಿಸಿ ಬೇಗೂರ ಗ್ರಾಮದ ರೈತರು ಪಟ್ಟಣದ ಕೃಷಿ ಇಲಾಖೆಗೆ ಶನಿವಾರ ತೆರಳಿ ಮನವಿ ಸಲ್ಲಿಸಿದರು.

Advertisement

ದುಮ್ಮವಾಡ ರೈತ ಸಂಪರ್ಕ ಕೇಂದ್ರದಿಂದ ಸರಕಾರ ಕೊಡಮಾಡಿದ ಗೌರಿಶಂಕರ ಸೋಯಾಬೀನ್‌ ಬೀಜಗಳನ್ನು ಮೇ 25ರಂದು ಖರೀದಿಸಲಾಗಿದ್ದು, ಮೇ 28ರಂದು ಬಿತ್ತನೆ ಮಾಡಲಾಗಿತ್ತು. ಆದರೆ ಇದುವರೆಗೂ ಸರಿಯಾದ ರೀತಿಯಲ್ಲಿ ಮೊಳಕೆ ಒಡೆಯದೆ ಶೇ.30 ಪ್ರಮಾಣದಲ್ಲಿ ಮೊಳಕೆ ಒಡೆದಿರುತ್ತದೆ. ಕೊರೊನಾ ಮಹಾಮಾರಿಯಿಂದ ಸಂಕಷ್ಟದಲ್ಲಿದ್ದ ರೈತ ಕುಲಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಬಿತ್ತನೆ ಮಾಡುವ ಸಮಯದಲ್ಲಿ ಬಳಸಿದ ಗೊಬ್ಬರ ಇನ್ನಿತರೆ ಪರಿಕರಗಳ ವೆಚ್ಚವನ್ನು ಸರಕಾರದಿಂದ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಕೃಷಿ ಇಲಾಖೆಯ ವಿಜಯಕುಮಾರ ಕುಂಕೂರ ಮನವಿ ಸ್ವೀಕರಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಆರ್‌.ಪಾಟೀಲ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಉಪಾಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ, ಗುರುನಾಥ ಬೆಂಗೇರಿ, ರೈತ ಪ್ರಮುಖರಾದ ಶಿವಲಿಂಗಪ್ಪ ಮೂಗಣ್ಣವರ, ಸಿದ್ದಪ್ಪ ಕಾಮದೇನು, ಕಲ್ಲಪ್ಪ ಕುಟ್ರಿ, ಬಸವರಾಜ ಕಟಗಿ, ಶಿವಪ್ಪ ಮೇಟಿ, ಮಲ್ಲಯ್ಯ ಚಿಕ್ಕಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next