Advertisement

ರಸ್ತೆ ನಿರ್ಮಾಣವಾದ ಮೂರೇ ದಿನಕ್ಕೆ  ಕಿತ್ತು ಬಂದ ಡಾಂಬರು

03:05 PM Mar 08, 2022 | Team Udayavani |

ಗುಂಡ್ಲುಪೇಟೆ: ತಾಲೂಕಿನ ಪಂಜನಹಳ್ಳಿ- ವೀರನಪುರ ಮಾರ್ಗವಾಗಿ ನಿರ್ಮಾಣ ಮಾಡಿರುವ200 ಮೀಟರ್‌ ರಸ್ತೆ ಕಾಮಗಾರಿ ತೀರಕಳಪೆಯಾಗಿರುವ ಕಾರಣ ನಿರ್ಮಾಣವಾದ ಮೂರೇ ದಿನದಲ್ಲೆ ಕೆದಕಿದರೆ ಡಾಂಬರ್‌ ಮೇಲೆಳುತ್ತಿದೆ. ಇದು ಗುತ್ತಿಗೆದಾರನ ಕಳಪೆ ಕೆಲಸಕ್ಕೆ ಹಿಡಿದ ಕೈ ಕನ್ನಡಿಯಾಗಿದೆ.

Advertisement

ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹದಗೆಟ್ಟ ಪ್ಯಾಚ್‌ ಕಾಮಗಾರಿ ಮಾಡುವ ವೇಳೆ ನಿಗದಿಯಂತೆ ಜಲ್ಲಿಕಲ್ಲುಬಳಸದೆ ಮಣ್ಣಿನ ಮೇಲೆ ಡಾಂಬರು ಹಾಕಿರುವಕಾರಣ ಸಂಪೂರ್ಣ ಕಳಪೆಯಿಂದ ಕೂಡಿದೆ. ರಸ್ತೆ ಮೇಲೆ ಅಧಿಕ ಭಾರದ ವಾಹನವಿರಲಿ ದ್ವಿಚಕ್ರ ವಾಹನಸಂಚರಿಸಿದರೂ ಡಾಮಬರು ಕಿತ್ತು ಹೋಗುವಂತಿದೆ.

ಜಿಪಂ 3054 ಹೆಡ್‌ನ‌ಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಅನುದಾನ ಬಂದರೂಗುತ್ತಿಗೆದಾರನ ಹಣದಾಸೆಗೆ 200 ಮೀಟರ್‌ ರಸ್ತೆಕೆದಕಿದರೆ ರಸ್ತೆಯ ಗುಣಮಟ್ಟ ಬಹಿರಂಗವಾಗಲಿದೆ ಎಂದು ಪಂಜನಹಳ್ಳಿ-ವೀರನಪುರ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ಯಾಚ್‌ ಕೆಲಸ ನೆಪದಲ್ಲಿ ಹಣ ಮಾಡುವ ದಂಧೆಗೆಗುತ್ತಿಗೆದಾರ ಇಳಿದಿದ್ದಾರೆ. ಆದರೆ ಈ ಗುತ್ತಿಗೆದಾರಉಸ್ತುವಾರಿ ಇರುವ ಜಿಪಂ ಎಂಜಿನಿಯರ್‌ಬೇಜಬಾಬ್ದಾರಿ ತೋರಿದ್ದಾರೆ.

ರಾತ್ರಿ ವೇಳೆ ಕೆಲಸ: ಪಂಜನಹಳ್ಳಿ-ವೀರನಪುರ ರಸ್ತೆಯ ಪ್ಯಾಚ್‌ ಕೆಲಸ ಕೇವಲ ಎರಡು ಗಂಟೆಯಲ್ಲಿಮುಗಿದಿದೆ. ಅದು ಹಗಲಲ್ಲಿ ಅಲ್ಲ, ಕಳೆದ ಮೂರುದಿನದ ಹಿಂದೆ ರಾತ್ರಿ 7 ಗಂಟೆಯಿಂದ 9 ಗಂಟೆಗೆಮುಗಿದಿದೆ ಎಂದು ಜನರು ದೂರಿದ್ದಾರೆ. ರಸ್ತೆಯ ಪ್ಯಾಚ್‌ ಮುಚ್ಚುವ ಕೆಲಸ ಮಳವಳ್ಳಿಯ ಮಹೇಶ್‌ ಎಂಬುವವರ ಹೆಸರಿನಲ್ಲಿದೆ. ಆದರೆ ರಸ್ತೆಗೆ ಪ್ಯಾಚ್‌ ಕೆಲಸವನ್ನು ಸ್ಥಳೀಯ ಮುಖಂಡರೊಬ್ಬರು ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Advertisement

ಸಚಿವ-ಶಾಸಕರೇ ಕ್ರಮ ವಹಿಸಿ: ಪಂಜನಹಳ್ಳಿ-ವೀರನಪುರದ ಸುಮಾರು 200ಮೀಟರ್‌ ರಸ್ತೆಯನ್ನು ಕಳಪೆಯಾಗಿಕಾಟಾಚಾರದಿಂದ ಮಾಡಲಾಗಿದ್ದು, ನಿಗದಿಯಂತೆವಸ್ತುಗಳನ್ನು ಬಳಕೆ ಮಾಡಿಲ್ಲ. ನಿರ್ಮಾಣವಾದಮೂರು ದಿನದಲ್ಲೆ ರಸ್ತೆ ಡಾಂಬರು ಮೇಲೆಳುತ್ತಿರುವಕಾರಣ ಇದು ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂಗುತ್ತಿಗೆದಾರನ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ-ಶಾಸಕ ಸಿ.ಎಸ್‌.ನಿರಂಜನಕುಮಾರ್‌ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಂಜನಹಳ್ಳಿ-ವೀರನಪುರದಸುಮಾರು 200 ಮೀಟರ್‌ ರಸ್ತೆಯಪ್ಯಾಚ್‌ ಕಾಮಗಾರಿ ಕೆಲಸವನ್ನುಗುತ್ತಿಗೆದಾರ ಮಹೇಶ್‌ ಮಾಡಿದ್ದಾರೆ.ರಸ್ತೆಯನ್ನು ಕಳಪೆಯಿಂದ ಮಾಡಿದ್ದರೆ ಮತ್ತೆಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಶಿವಕುಮಾರ್‌, ಎಇ

ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next