Advertisement
ಸಾಕಷ್ಟು ಡಾಮರು ಮಿಶ್ರಣದ ಕೊರತೆ, ಸಕಾಲದಲ್ಲಿ ಕಾಮಗಾರಿ ಪೂರೈಸದೆ ಮಳೆ ಸುರಿಯುತ್ತಿರುವಾಗಲೇ ಕಾಮಗಾರಿ ನಡೆಸಿದ ಫಲದಿಂದ ರಸ್ತೆ ಬೇಗನೆ ಕೆಡಲು ಕಾರಣವಾಗಿದೆ. ದಿನದಿಂದ ದಿನಕ್ಕೆ ರಸ್ತೆಯಲ್ಲಿ ಹೊಂಡಗಳ ಸಂಖ್ಯೆ ಅಧಿಕವಾಗಿ ಸಂಚಾರಕ್ಕೆ ತೊಡಕಾಗಲಿದೆ. ಇನ್ನು ಈ ರಸ್ತೆಯ ಹೊಂಡ ಮುಚ್ಚಲು ಲಕ್ಷಗಟ್ಟಲೆ ನಿಧಿಯಲ್ಲಿ ಪೀಸ್ ವರ್ಕಿನ ಮೂಲಕ ಪ್ಯಾಚ್ ವರ್ಕ್ ಯೋಜನೆ ತಯಾರಿಸಿ ಮತ್ತೆ ಈ ರಸ್ತೆಯ ಹೊಂಡ ಮುಚ್ಚಲಿದೆ.
ಆದರೆ ಸರಕಾರದಿಂದ ಕೋಟಿಗಟ್ಟಲೆ ನಿಧಿ ಬಳಸಿದ ಆರಂಭದ ಕಾಮಗಾರಿಯ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲು ಜನರಿಂದ ಮತ ಪಡೆದು ಚುನಾಯಿತರಾದ ಪ್ರತಿನಿಧಿಗಳಿಗೆ ಸಮಯ ಸಿಗುವುದಿಲ್ಲ. ಗುತ್ತಿಗೆದಾರರ ಕಾಂಚಾಣಕ್ಕೆ ಕೈ ಒಡ್ಡಿದ ಅಥವಾ ತಮ್ಮ ಪಕ್ಷಕ್ಕೆ ನಿಧಿ ಸಂಗ್ರಹಿದ ದಾಕ್ಷಿಣ್ಯದಲ್ಲಿ ಕರಾರುದಾರರ ಕಳಪೆ ಕಾಮಗಾರಿಗೆ ತಲೆಬಾಗಲೇ ಬೇಕಾಗುವುದು ಕೆಲ ಚುನಾಯಿತರಿಗೆ ಅನಿವಾರ್ಯವಾಗುವುದು. ಸಾರ್ವಜನಿಕರು ಕಾಮಗಾರಿ ಕಳಪೆಯಾಗಿದೆ ಎಂಬುದಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಗಾಗಲಿ ವಿಜಿಲೆನ್ಸ್ ಇಲಾಖೆಗೆ ದೂರು ಸಲ್ಲಿಸಿದರೂ ಅಧಿಕಾರಿಗಳು ಕಳ್ಳರಿಗೆ ಬೆಳಕು ನೀಡುವ ಸಂಪ್ರದಾಯವೇ ಹೆಚ್ಚಾಗಿ ಇಲ್ಲಿ ನಡೆಯುವುದು. ಗುತ್ತಿಗೆದಾರರ ಪರವಾದ ತೀರ್ಪಿನಿಂದ ಕಳಪೆ ಕಾಮಗಾರಿ ಸದಾ ಮುಂದುವರಿಯುವುದು. ಆದುದರಿಂದ ಇದೀಗ ಸಾರ್ವಜನಿಕರಿಂದ ದೂರು ವಿರಳವಾಗುತ್ತಿದೆ. ಇದರಿಂದಲಾಗಿ ವರ್ಷಂಪ್ರತಿ ಸರಕಾರದ ಅದೆಷ್ಟೋ ಕೋಟಿಗಟ್ಲೆ ರಾಷ್ಟ್ರೀಯ ನಿಧಿ ಪೋಲಾಗುವುದು. ಇದನ್ನು ಯಾವ ಸರಕಾರ ಅಧಿಕಾರಕ್ಕೇರಿದರೂ ತಡೆಯಲು ಸಾಧ್ಯವಾಗುತ್ತಿಲ್ಲ. ಜನರು ಇನ್ನಷ್ಟು ಜಾಗೃತರಾಗದಷ್ಟು ಕಾಲ ಕಳಪೆ ಕಾಮಗಾರಿಗೆ ಶಾಶ್ವತ ಪರಿಹಾರವೆಂಬುದಿಲ್ಲ.
Related Articles
Advertisement