Advertisement

ಜನೌಷಧ ಕೇಂದ್ರಗಳಿಂದ ಬಡ, ಮಧ್ಯಮವರ್ಗಕ್ಕೆ ಭಾರೀ ನೆರವು

02:57 PM Mar 09, 2022 | Team Udayavani |

ಹೊಸದಿಲ್ಲಿ: ಜನೌಷಧ ಕೇಂದ್ರಗಳಿಂದ ಭಾರತದ ಬಡ, ಮಧ್ಯಮವರ್ಗದ ಜನತೆ ಬಹಳ ಲಾಭ ಪಡೆದಿದ್ದಾರೆ. ಈ ಜನ ಒಟ್ಟಾಗಿ 13,000 ಕೋಟಿ ರೂ. ಉಳಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಜನ ಔಷಧ ದಿವಸ್‌ ಅಂಗವಾಗಿ ಫ‌ಲಾನುಭವಿ ಗಳೊಂದಿಗೆ ಸಂವಾದ ನಡೆಸಿದ ಮೋದಿ, ಅದರ ಲಾಭಗಳ ಕುರಿತು ಮಾಹಿತಿ ಪಡೆದರು. ಕೇಂದ್ರ ಔಷಧ ಇಲಾಖೆಯಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಶುರುವಾಗಿದೆ.

ಇದರ ಕೇಂದ್ರ ಗಳ ಮೂಲಕ ದೇಶಾದ್ಯಂತ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. “ಇಂದು ದೇಶದಲ್ಲಿ 8,500 ಜನೌಷಧ ಕೇಂದ್ರಗಳಿವೆ. ಈ ಕೇಂದ್ರಗಳು ಕೇವಲ ಸರಕಾರಿಮಳಿಗೆಗಳಲ್ಲ, ಬದಲಿಗೆ ಸಾಮಾನ್ಯ ಜನರ ಪರಿಹಾರ ಕೇಂದ್ರಗಳಾಗಿವೆ’ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ಕೇಂದ್ರ ಸರಕಾರ ಕ್ಯಾನ್ಸರ್‌, ಕ್ಷಯ, ಮಧುಮೇಹ, ಹೃದಯ ಸಂಬಂಧಿ ಸೇರಿದಂತೆ ಹಲವು ಕಾಯಿಲೆಗಳ 800ಕ್ಕೂ ಅಧಿಕ ಔಷಧಗಳ ಬೆಲೆಗಳನ್ನು ನಿಗದಿಗೊಳಿಸಿದೆ ಎಂದೂ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next