ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡಿಗರ ಬದುಕು ಅಯೋಮಯವಾಗಿದೆ. ಗುಡ್ಡ ಕುಸಿತ, ನೆರೆ- ಪ್ರವಾಹದಿಂದ ಹಲವರು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ.
ಇದರ ನಡುವೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅಜಾದ್ ನಗರದಲ್ಲಿ ಬಡ ಕುಟುಂಬದ ಪರಿಸ್ಥಿತಿಯೊಂದು ಕಣ್ಣೀರು ತರುವಂತಿದೆ.
ಆಜಾದ್ ನಗರದ ಲೀಲಾ ಅವರ ಅವರ ಮನೆಯು ಮಳೆಯ ಆರ್ಭಟಕ್ಕೆ ಕುಸಿದು ಬಿದ್ದಿದೆ. ಮಳೆಯ ನಡುವೆ ಟಾರ್ಪಲ್ ಕಟ್ಟಿಕೊಂಡು ಬದುಕು ಸಾಗಿಸುವ ಪರಿಸ್ಥಿತಿ ಎದುರಾಗಿದೆ.
ಲೀಲಾ ಅವರು ನಾಲ್ಕು ಮಕ್ಕಳೊಂದಿಗೆ ಟಾರ್ಪಲ್ ಶೆಡ್ ನಲ್ಲಿ ಬದುಕುತ್ತಿದ್ದಾರೆ. ಮನೆಯೊಳಗೆ ನೀರು ಬರುತ್ತಿದ್ದು, ಶೀತದ ಮನೆಯಲ್ಲೇ ವಾಸ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಇದನ್ನೂ ಓದಿ:ಸ್ನೇಹಿತೆಯ ಜತೆ ಹೋಗುತ್ತಿದ್ದವನನ್ನು ಹಲ್ಲೆಗೈದು ಸುಲಿಗೆ: ಮೂವರ ಬಂಧನ
ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದ್ದು, ಓರ್ವ ಮಗಳು ಓದುವಾಗಲೇ ಶಾಲೆ ಬಿಟ್ಟು ಕೂಲಿಗೆ ತೆರಳುತ್ತಿದ್ದಾರೆ. ಶೀತದ ಶೆಡ್ ನಲ್ಲೇ ಬದುಕುತ್ತಿರುವ ಲೀಲಾ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.