ತೆಕ್ಕಟ್ಟೆ : ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗೆಬೆಟ್ಟು ನಿವಾಸಿ ಕಟ್ಟಡ ಕೂಲಿ ಕಾರ್ಮಿಕ ಚಂದ್ರಶೇಖರ್ ಮೊಗವೀರ (42)ಅವರು ಕಳೆದ ಮೂರು ವರ್ಷಗಳ ಹಿಂದೆ ತೀರ್ಥಹಳ್ಳಿ ಸಮೀಪದಲ್ಲಿ ನಡೆದ ವಾಹನ ಅವಘಡದಿಂದಾಗಿ ತನ್ನ ಎರಡು ಕಾಲುಗಳ ಸ್ವಾಧೀನತೆ ಕಳೆದುಕೊಂಡು ಹಾಸಿಗೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಪರಿಣಾಮವಾಗಿ ಇಡೀ ಕುಟಂಬವೇ ಬಡತನದಿಂದಾಗಿ ದಿನದೂಡುವುದಕ್ಕೆ ಕಷ್ಟಪಡ ಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.
ಇವರ ನೋವಿಗೆ ಹೆಗಲಾಗುವ ನಿಟ್ಟಿನಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯ ಸೀತಾನದಿ ಕರುಣಾಕರ ಶೆಟ್ಟಿ ಅವರು ಗಾಲಿ ಕುರ್ಚಿ ಹಸ್ತಾಂತರಿಸಿ ನೆರವಿನ ಹಸ್ತ ಚಾಚಿದ್ದಾರೆ.
ಕುಟುಂಬದ ಆಧಾರ ಸ್ತಂಭದಂತಿದ್ದ ಚಂದ್ರಶೇಖರ್ ಅವರ ಈ ಸ್ಥಿತಿಯಿಂದಾಗಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ಜೀವನ ನಿರ್ವಹಣೆಯೇ ಕಷ್ಟಸಾಧ್ಯವಾಗಿದ್ದು ಇಡೀ ಕುಟುಂಬವೇ ಆರ್ಥಿಕ ಸಂಕಷ್ಟದಿಂದ ನಲುಗುವಂತಾಗಿದೆ. ಆರ್ಥಿ ಕವಾಗಿ ಸ್ಪಂದನ ಅನಿವಾರ್ಯತೆ ಇದ್ದು, ನೆರವು ನಿಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡಬಹುದಾಗಿದೆ
ಕೆನರಾ ಬ್ಯಾಂಕ್ ಶಾಖೆ: ಬೇಳೂರು,ಚಂದ್ರಶೇಖರ್, ಖಾತೆ ಸಂಖ್ಯೆ : 3834101001370, ಐಎಫ್‌ಎಸ್‌ಸಿ: ಸಿಎನ್‌ಆರ್‌ಬಿ0003834.