Advertisement

IPL: ಬಿಗಡಾಯಿಸಿದೆ ಆರ್‌ಸಿಬಿ ಬೌಲಿಂಗ್‌!

11:00 PM Mar 30, 2024 | Team Udayavani |

ಬೆಂಗಳೂರು: ಚೇಸಿಂಗ್‌ ವೇಳೆ ಎದುರಾಳಿ ತಂಡಕ್ಕೆ ಪವರ್‌ ಪ್ಲೇ ಅವಧಿಯಲ್ಲಿ ತಂಡವೊಂದು 85 ರನ್‌ ಬಿಟ್ಟುಕೊಟ್ಟಿತೆಂದರೆ ಆ ತಂಡದ ಬೌಲಿಂಗ್‌ ಸಾಮರ್ಥ್ಯದ ಬಗ್ಗೆ ಸಹಜವಾಗಿಯೇ ಅನುಮಾನ, ಆತಂಕ ವ್ಯಕ್ತವಾಗುತ್ತದೆ. ಇದಕ್ಕೆ ಶುಕ್ರವಾರ ರಾತ್ರಿ ಆರ್‌ಸಿಬಿ ತಾಜಾ ನಿದರ್ಶನ ಒದಗಿಸಿತು.

Advertisement

ಸಾಕಷ್ಟು ದೊಡ್ಡದೇ ಆದ 183 ರನ್‌ ಬೆನ್ನಟ್ಟಲಾರಂಭಿಸಿದ ಕೆಕೆಆರ್‌ಗೆ ಸುನೀಲ್‌ ನಾರಾಯಣ್‌ ಮತ್ತು ಫಿಲ್‌ ಸಾಲ್ಟ್ ಸೇರಿಕೊಂಡು ಸಿಡಿಲಬ್ಬರದ ಆರಂಭ ಒದಗಿಸಿದಾಗ ಆರ್‌ಸಿಬಿ ಬೌಲರ್ ದಿಕ್ಕಾಪಾಲು! ಚೆಂಡು ಮೈದಾನದ ಮೂಲೆ ಮೂಲೆಗೆ, ವೀಕ್ಷಕರ ಗ್ಯಾಲರಿಗೆ ಹೋಗಿ ಅಪ್ಪಳಿಸಿತು. ಸಿರಾಜ್‌, ಜೋಸೆಫ್, ಯಶ್‌ ದಯಾಳ್‌ ಅವರಿಗೆ ತಮ್ಮ ಎಸೆತಗಳ ಮೇಲೆ ಸ್ವಲ್ಪವೂ ನಿಯಂತ್ರಣ ಸಾಧಿಸಲಾಗಲಿಲ್ಲ. ಪರಿಣಾಮ, ಪವರ್‌ ಪ್ಲೇಯಲ್ಲೇ ಪಂದ್ಯ ಆರ್‌ಸಿಬಿ ಕೈಜಾರಿದ್ದು ಸ್ಪಷ್ಟವಾಗಿತ್ತು. ಪರಿಣಾಮ, 7 ವಿಕೆಟ್‌ ಸೋಲು.

Advertisement

Udayavani is now on Telegram. Click here to join our channel and stay updated with the latest news.

Next