Advertisement

ಪೂಂಛ್‌ ದಾಳಿಗೆ ಮೂರು ತಿಂಗಳಿಂದ ಹೊಂಚು!

08:32 AM Apr 27, 2023 | Team Udayavani |

ಶ್ರೀನಗರ: ಜಮ್ಮುಕಾಶ್ಮೀರದ ಪೂಂಛ್‌ ನಲ್ಲಿ ಏ.20ರಂದು ದೇಶದ ಐವರು ವೀರ ಯೋಧರನ್ನು ಕೊಂದು ಹಾಕಿದ ಪ್ರಕರಣದ ಹಿಂದಿನ ಸಂಚಿನ ಅಂಶಗಳು ಒಂದೊಂದಾಗಿ ಬಯಲಿಗೆ ಬರಲಾರಂಭಿಸಿವೆ. ಪೂಂಛ್‌- ರಜೌರಿ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ವ್ಯಕ್ತಿಯ ಮನೆಯಲ್ಲಿ ಉಗ್ರರು ವಾಸವಾಗಿದ್ದರು. ಅವರು ಮೂರು ತಿಂಗಳಿಂದ ಸ್ಫೋಟಕಗಳ ಮೂಲಕ ರಾಷ್ಟ್ರೀಯ ರೈಫ‌ಲ್ಸ್‌ನ ಟ್ರಕ್‌ ಅನ್ನು ಸ್ಫೋಟಿಸುವ ದುಷ್ಟ ಸಂಚನ್ನು ರೂಪಿಸುತ್ತಿದ್ದರು. ಜತೆಗೆ ಈಗಾಗಲೇ ಗುಪ್ತಚರ ಸಂಸ್ಥೆಗಳು ತರ್ಕಿಸಿರುವಂತೆ ದಾಳಿಯ ಮೂಲ ಯೋಜನೆ ಪಾಕಿಸ್ತಾನದಲ್ಲಿಯೇ ಸಿದ್ಧವಾಗಿತ್ತು ಎನ್ನುವುದೂ ಈಗ ದೃಢಪಟ್ಟಿದೆ.

Advertisement

ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ನ ಭಾಗವೇ ಆಗಿರುವ ಪೀಪಲ್ಸ್‌ ಆ್ಯಂಟಿ ಫ್ಯಾಸಿಸ್ಟ್‌ ಫ್ರಂಟ್‌ (ಪಿಎಎಫ್ಎಪ್‌) ಎನ್ನುವ ಹೊಸ ಸಂಘಟನೆ ಈ ಕೃತ್ಯವನ್ನು ಎಸಗಿರುವ ಬಗ್ಗೆ ಹೊಣೆ ಹೊತ್ತುಕೊಂಡಿದೆ. ಒಟ್ಟು ಮೂವರು ಉಗ್ರರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರಿಗೆ ಸ್ಥಳೀಯ ಹ್ಯಾಂಡ್ಲರ್‌ ಒಬ್ಬ ನಿರಂತರವಾಗಿ ದುಷ್ಕೃತ್ಯ ಎಸಗುವ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಬಿರುಸಿನ ಶೋಧ: ಕುತ್ಸಿತ ಕೃತ್ಯವೆಸಗಿದ ಉಗ್ರರಿಗಾಗಿ ಎನ್‌ಎಸ್‌ಜಿ ಬಿರುಸಿನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ. ಪೂಂಛ್‌ – ರಜೌರಿ ದಟ್ಟಡವಿಯಲ್ಲಿ ಶೋಧ ನಡೆಸುವ ನಿಟ್ಟಿನಲ್ಲಿ ಡ್ರೋನ್‌ಗಳನ್ನು, ಶ್ವಾನದಳ ಮತ್ತು ಲೋಹ ವಸ್ತುಗಳನ್ನು ಪತ್ತೆ ಹಚ್ಚುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 50 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಏಳರಿಂದ ಎಂಟು ಮಂದಿ ಉಗ್ರರು ಘಟನೆ ನಡೆದ ಭಿಂಬರ್‌ ಗಾಲಿಯ ಸಮೀಪ ಇರುವ ಕಣಿವೆಯಲ್ಲಿ ಅಡಗಿಕೊಂಡು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂಬ ಗುಮಾನಿ ತನಿಖಾ ಸಂಸ್ಥೆಗಳದ್ದು.

ವಿಡಿಯೊ ಚಿತ್ರೀಕರಣ: ಸ್ಫೋಟ ಕೃತ್ಯ ನಡೆಸಿದ ಉಗ್ರರು ಒಟ್ಟಾರೆ ಘಟನೆಯ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next