Advertisement

Pooja Gandhi: ತಾಯಿಗೂ ಕನ್ನಡ ಕಲಿಸುತ್ತಿರುವ ಪೂಜಾಗಾಂಧಿ

03:50 PM Aug 21, 2023 | Team Udayavani |

ನಟಿ ಪೂಜಾ ಗಾಂಧಿ ಕನ್ನಡ ಪ್ರೇಮದ ಬಗ್ಗೆ ಅನೇಕರಿಗೆ ಗೊತ್ತಿರಬಹುದು. ತಮ್ಮ “ಮುಂಗಾರು ಮಳೆ’ ಸಿನಿಮಾದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ಸ್ಯಾಂಡಲ್‌ವುಡ್‌ನ‌ಲ್ಲಿಯೇ ನೆಲೆ ಕಂಡುಕೊಂಡಿರುವ ಪೂಜಾ ಗಾಂಧಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಈಗಾಗಲೇ ಕನ್ನಡದಲ್ಲಿ ಸರಾಗವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪೂಜಾ ಗಾಂಧಿ, ಸದ್ಯ ಕನ್ನಡ ಬರವಣಿಗೆ ಮತ್ತು ವ್ಯಾಕರಣವನ್ನು ಶಾಸ್ತ್ರೀಯವಾಗಿ ಕಲಿಯುತ್ತಿದ್ದಾರೆ.

Advertisement

ಆಗಾಗ್ಗೆ ತಾವು ಮಾಡುವ ಕನ್ನಡ ಹೋಂವರ್ಕ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳುವ ಪೂಜಾಗಾಂಧಿ, ಈಗ ತಮ್ಮ ತಾಯಿಗೂ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ.  “ಕನ್ನಡದ ಅಕ್ಷರಾಭ್ಯಾಸವಿಲ್ಲದಿದ್ದರೂ, ನನ್ನ ಕನ್ನಡ ಕಲಿಕೆಯಿಂದ ಪ್ರೇರೇಪಿತರಾಗಿ ನನ್ನ ತಾಯಿ ಜ್ಯೋತಿ ಗಾಂಧಿ ಬರೆದಿರುವ ಚೆಂದದ ಕನ್ನಡ ಅಕ್ಷರಗಳು’ ಎಂದು ತಮ್ಮ ತಾಯಿ ಕೂಡ ಕನ್ನಡ ಅಕ್ಷರಗಳ ಕಲಿಕೆ ಮಾಡುತ್ತಿರುವ ಪೋಟೋ­ಗಳನ್ನು ಸೊಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೂಜಾ ಗಾಂಧಿ, “ಅಮ್ಮ ಹ್ಯಾಟ್ಸ್‌ ಆಫ್’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next