Advertisement

ಸಂಹಾರಿಣಿಯಾಗಿ ಪೂಜಾ ಗಾಂಧಿ ರೀ ಎಂಟ್ರಿ

11:39 AM Feb 10, 2021 | Team Udayavani |

“ಮುಂಗಾರು ಮಳೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಸಿನಿ ಪ್ರಿಯರ ಮನ ಮತ್ತು ಗಮನ ಎರಡನ್ನೂ ಸೆಳೆದ ನಟಿ ಪೂಜಾ ಗಾಂಧಿ. “ಮುಂಗಾರು ಮಳೆ’ ಚಿತ್ರದ ಬಳಿಕ ಸಾಲು ಸಾಲು ಸ್ಟಾರ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡು ಬಿಝಿಯಾಗಿದ್ದ ಪೂಜಾ ಗಾಂಧಿ, ಕಳೆದ ಮೂರು ವರ್ಷಗಳಿಂದ ಸುದ್ದಿಯಲ್ಲೇ ಇರಲಿಲ್ಲ. ಪೂಜಾ ಗಾಂಧಿ ಎಲ್ಲಿದ್ದಾರೆ? ಈಗ ಏನು ಮಾಡ್ತಿದ್ದಾರೆ? ಎಂದು ಸಿನಿ ಪ್ರಿಯರು ಕೇಳುತ್ತಿರುವಾಗಲೇ ಪೂಜಾ ಗಾಂಧಿ ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ಸುಳಿವನ್ನು ನೀಡಿದ್ದಾರೆ.

Advertisement

ಸದ್ಯ ಪೂಜಾ ಗಾಂಧಿ “ಸಂಹಾರಿಣಿ’ ಚಿತ್ರದಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ಕಂಬ್ಯಾಕ್‌ ಆಗುವ ತಯಾರಿಯಲ್ಲಿದ್ದಾರೆ. 2018ರಲ್ಲಿ ತೆರೆಗೆ ಬಂದಿದ್ದ “ದಂಡುಪಾಳ್ಯ 3′ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಪೂಜಾ ಗಾಂಧಿ”ಸಂಹಾರಿಣಿ’ ಮೂಲಕ ಮತ್ತೆ ಸಿನಿ ಪ್ರಿಯರ ಮುಂದೆ ಬರುತ್ತಿದ್ದಾರೆ.ಈಗಾಗಲೇ “ಸಂಹಾರಿಣಿ’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ತೆರೆಗೆ ಬರುವ ತಯಾರಿಯಲ್ಲಿದೆ. ಇತ್ತೀಚೆಗೆ “ಸಂಹಾರಿಣಿ’ ಚಿತ್ರದ ಮೊದಲ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ಚಿತ್ರದಲ್ಲಿ ಪೂಜಾ ಗಾಂಧಿ ಅವರ ಗೆಟಪ್‌ ಅನ್ನು ರಿವೀಲ್‌ ಮಾಡಿದೆ.

ಇದನ್ನೂ ಓದಿ : ಶ್ಯಾಡೊ ರಾಂಗ್‌ ಟೈಮ್‌ ರಿಲೀಸ್‌! : ವಿನೋದ್‌ ಪ್ರಭಾಕರ್‌ ಬೇಸರ

“2ಎಂ ಸಿನಿಮಾಸ್‌’ ಬ್ಯಾನರ್‌ನಲ್ಲಿ ಶಬರೀಶ್‌ ಕೆ.ವಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜವಾಹರ್‌ ನಿರ್ದೇಶನ ಮಾಡುತ್ತಿದ್ದಾರೆ. “ಸಂಹಾರಿಣಿ’ ಚಿತ್ರದಲ್ಲಿ ಭ್ರಷ್ಟ ವ್ಯವಸ್ಥೆಯವಿರುದ್ಧ ಸೇಡು ತೀರಿಸಿಕೊಳ್ಳುವ ಮಧ್ಯಮವರ್ಗದ ಹುಡುಗಿಯಾಗಿ ಆ್ಯಕ್ಷನ್‌ಪಾತ್ರದಲ್ಲಿ ಪೂಜಾ ಗಾಂಧಿಕಾಣಿಸಿಕೊಳ್ಳುತ್ತಿದ್ದಾರಂತೆ. ಇನ್ನುಬಿಡುಗಡೆಯಾಗಿರುವ “ಸಂಹಾರಿಣಿ’ಚಿತ್ರದ ಮೊದಲ ಮೋಷನ್‌ ಪೋಸ್ಟರ್‌ಗೆ ಸೋಶಿಯಲ್‌ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪೂಜಾ ಗಾಂಧಿ ಹೊಸ ಗೆಟಪ್‌ ಕಂಡು ಒಂದಷ್ಟು ಮಂದಿ ಖುಷಿಯಾಗಿದ್ದಾರೆ. ­

Advertisement

Udayavani is now on Telegram. Click here to join our channel and stay updated with the latest news.

Next