Advertisement

Marriage: ಕರ್ನಾಟಕದ ಭಕ್ತೆಯೊಂದಿಗೆ ತಮಿಳ್ನಾಡು ಮಠಾಧೀಶರ ವಿವಾಹ; ಭಕ್ತರಿಂದ ಆಕ್ಷೇಪ

12:15 AM Nov 15, 2024 | Team Udayavani |

ಚೆನ್ನೈ: ತಮಿಳುನಾಡಿನ ಕುಂಬಕೋಣಂನಲ್ಲಿರುವ ಪ್ರಸಿದ್ಧ ಸೂರ್ಯನಾರ್‌ ದೇವಾಲಯದ ಹಾಗೂ ಅಧಿನಮ್‌ ಮುಖ್ಯಸ್ಥರು ಇತ್ತೀಚೆಗೆ ಕರ್ನಾಟಕದ ರಾಮನಗರದ ಭಕ್ತೆಯೊಬ್ಬರೊಂದಿಗೆ ವಿವಾಹವಾಗಿದ್ದು, ಇದು ಭಾರೀ ವಿವಾದಕ್ಕೀಡಾಗಿದೆ.

Advertisement

ರಾಮನಗರ ಜಿಲ್ಲೆಯ ಹೇಮಶ್ರೀ ಎಂಬ 47 ವರ್ಷದ ಮಹಿಳೆಯೊಂದಿಗೆ ಮಹಾಲಿಂಗ ಸ್ವಾಮಿ ಅ.10ರಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದಾರೆ. ಅಧೀನಮ್‌ ಒಬ್ಬರು ಬ್ರಹ್ಮಚರ್ಯ ತ್ಯಜಿಸಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಕ್ಕೆ ಅವರ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೀಗ ಭಕ್ತರಿಂದ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸ್ವಾಮೀಜಿ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಸ್ವಾಮೀಜಿ ಉತ್ತರಿಸಿದ್ದು, “ಹಲವಾರು ಅಧೀನಮ್‌ ಮಠಾಧೀಶರು ವಿವಾಹಿತರಾಗಿದ್ದು, ನಾನೇ ಮೊದಲಲ್ಲ. ಇಲ್ಲಿ ನನಗೆ ಮುಚ್ಚಿಡಲು ಏನೂ ಇಲ್ಲ. ಹೇಮಶ್ರೀ ಆಧಿನಾಮ್‌ಗೆ ಭಕ್ತೆಯಾಗಿ ಬಂದರು. ಮುಂದೆಯೂ ಭಕ್ತೆಯಾಗಿಯೇ ಇರಲಿದ್ದಾರೆ’ ಎಂದು ಹೇಳಿದ್ದಾರೆ.

ಇದರೊಂದಿಗೆ ತಮ್ಮ ವಿವಾಹದ ಬಗ್ಗೆ ಇದ್ದ ಊಹಾಪೋಹಗಳಿಗೆ ಸ್ವಾಮೀಜಿ ತೆರೆ ಎಳೆದಿದ್ದು, ಮುಂದೆಯೂ ಅಧೀನಮ್‌ ಮುಖ್ಯಸ್ಥರಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ. ವಾಡಿಕೆಯಂತೆ ತಮಿಳುನಾಡಿನಲ್ಲಿರುವ ಬಹುತೇಕ ಆಧಿನಾಮ್‌ ಮಠಗಳಲ್ಲಿನ ಮುಖ್ಯಸ್ಥರು ಬ್ರಹ್ಮಚರ್ಯ ಸ್ವೀಕರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next